BBMP
Loading ...

RBI

Greater Bengaluru News9 : ಸಣ್ಣ ಉದ್ದಿಮೆಗಳಿಗೆ ಪುಷ್ಟಿ ನೀಡಲು ಆರ್​ಬಿಐ (RBI) ತನ್ನ ಅಡಮಾನರಹಿತ ಸಾಲದ ಮಿತಿಯನ್ನು ಏರಿಸಿದೆ. ಆರ್​ಬಿಐ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಎಂಎಸ್​ಎಂಇಗಳಿಗೆ ಅಡಮಾನರಹಿತವಾಗಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. 10 ಲಕ್ಷ ರೂ ಇದ್ದ ಇಂಥ ಸಾಲದ ಮಿತಿಯನ್ನು 20 ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ, ಎಂಎಸ್​ಎಂಇಗಳು ಯಾವುದೇ ಸೆಕ್ಯೂರಿಟಿ ಒದಗಿಸುವ ಅಗತ್ಯ ಇಲ್ಲದೇ 20 ಲಕ್ಷ ರೂವರೆಗೆ ಸಾಲ ಪಡೆಯಲು ಅವಕಾಶ ಇರುತ್ತದೆ. ಈ ಕ್ರಮವು ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಸುಲಭ ಸಾಲಕ್ಕೆ ಅವಕಾಶ ಕೊಡುತ್ತದೆ. ಎಂಎಸ್​ಎಂಇಗಳು ದೇಶದ ಅರ್ಥ ವ್ಯವಸ್ಥೆಯ ಪ್ರಮುಖ ಭಾಗವಾಗಿರುವುದರಿಂದ, ಅವುಗಳ ಆರೋಗ್ಯ ಕಾಪಾಡಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಇದೂ ಒಂದು.

1,000 ಕೋಟಿ ರೂಗಿಂತ ಕಡಿಮೆ ಫಂಡಿಂಗ್ ಹೊಂದಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್​ಬಿಎಫ್​ಸಿ) ನೊಂದಾಯಿಸಿಕೊಳ್ಳುವುದು ಕಡ್ಡಾಯಾಗಿರುವುದಿಲ್ಲ. ಹೆಚ್ಚಿನ ಗಾತ್ರದ ಎನ್​ಬಿಎಫ್​ಸಿಗಳು ಮಾತ್ರವೇ ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು. ಹಾಗೆಯೇ, ಕೆಲ ಎನ್​ಬಿಎಫ್​ಸಿಗಳು 1,000ಕ್ಕಿಂತ ಹೆಚ್ಚು ಶಾಖೆಗಳನ್ನು ತೆರೆಯಲು ಮುಂಚಿತವಾಗಿ ಅನುಮತಿ ಪಡೆಯಬೇಕೆಂದ ನಿಯಮವನ್ನೂ ಸಡಿಲಿಸಲಾಗಿದೆ.

ಇದೇ ವೇಳೆ, ಆರ್​ಬಿಐ ಗವರ್ನರ್ ಅವರು ಪೇಮೆಂಟ್ ವಂಚನೆಗೊಳಗಾದ ಗ್ರಾಹಕರಿಗೆ 25,000 ರೂವರೆಗೆ ಪರಿಹಾರ ಒದಗಿಸುವ ಒಂದು ವ್ಯವಸ್ಥೆ ತರುತ್ತಿರುವುದಾಗಿ ತಿಳಿಸಿದ್ದಾರೆ. ಇದು ಸಣ್ಣ ಮೊತ್ತದ ವಂಚನೆಗೆ ಸಿಗಬಹುದಾದ ಪರಿಹಾರ. ಎಂಥ ಟ್ರಾನ್ಸಾಕ್ಷನ್​ಗಳಿಗೆ ಇದು ಅನ್ವಯ ಆಗುತ್ತದೆ ಎಂಬಿತ್ಯಾದಿ ಮಾಹಿತಿ ಗೊತ್ತಾಗಬೇಕಿದೆ.

Leave a Reply

Your email address will not be published. Required fields are marked *