Greater Bengaluru News9 : ರಾಜ್ಯದ ಅತಿದೊಡ್ಡ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆಗೆ ರೋಗಿಗಳ ಅಸಮಾಧಾನ ಹೆಚ್ಚಾಗಿದೆ. ತಿಂಗಳಾದರೂ ರೋಗಿಗಳಿಗೆ ಬ್ಲಡ್ ರಿಪೋರ್ಟ್ ಸಿಗುತ್ತಿಲ್ಲವೆಂದು ಗಂಭೀರ ಆರೋಪಗಳು ಕೇಳಿಬಂದಿವೆ.
ರೋಗಿಗಳ ಪ್ರಕಾರ, 3-4 ಬಾರಿ ರಕ್ತ ನೀಡಿದರೂ ಲ್ಯಾಬ್ ಸಿಬ್ಬಂದಿ “ರಕ್ತ ಹೆಪ್ಪುಗಟ್ಟಿದೆ, ಮತ್ತೆ ಕೊಡಿ” ಎಂದು ಹೇಳುತ್ತಿರುವುದರಿಂದ ಅವರ ಪರದಾಟ ಹೆಚ್ಚಾಗಿದೆ. ವೈದ್ಯಕೀಯ ಸಿಬ್ಬಂದಿ ರಕ್ತವನ್ನು ಲ್ಯಾಬ್ಗೆ ಕಳಿಸುವಲ್ಲಿ ತಡವಾಗುತ್ತಿರುವುದರಿಂದಲೇ ಈ ಸಮಸ್ಯೆ ಎದುರಾದಂತಿದೆ ಎಂದು ರೋಗಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬ್ಲಡ್ ರಿಪೋರ್ಟ್ ವಿಳಂಬದಿಂದ ಚಿಕಿತ್ಸೆ ಮುಂದುವರಿಸುವುದೇ ಕಷ್ಟವಾಗುತ್ತಿದೆ ಎಂದು ರೋಗಿಗಳು ಮತ್ತು ಸಾರ್ವಜನಿಕರು ಆಸ್ಪತ್ರೆಗೆ ತೀವ್ರ ಟೀಕೆ ಮಾಡಿದ್ದಾರೆ. ತಕ್ಷಣ ಲ್ಯಾಬ್ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಹಾಗೂ ರಿಪೋರ್ಟ್ಗಳನ್ನು ಸಮಯಕ್ಕೆ ನೀಡುವಂತೆ ಆಸ್ಪತ್ರೆ ಆಡಳಿತಕ್ಕೆ ಬೇಡಿಕೆ ಇಟ್ಟಿದ್ದಾರೆ.


