Greater Bengaluru News9 : ಒಂದುಕಡೆ ರಾಜ್ಯದಲ್ಲಿ ಗ್ಯಾಸ್ ಸಿಗುತ್ತಿಲ್ಲ ಅಂತ ಆಟೋ ಚಾಲಕರು ಗೋಳಾಡುತ್ತಿದ್ದಾರೆ. ಗ್ಯಾಸ್ಗಾಗಿ ರಾತ್ರಿಯಿಡೀ ಕ್ಯೂ ನಿಲ್ಲುತ್ತಿದ್ದಾರೆ. ಮತ್ತೊಂದು ಕಡೆ ನಮ್ಮ ಜನಪ್ರತಿನಿಧಿಗಳ ಮೋಜು-ಮಸ್ತಿಗೆ ಮಾತ್ರ ಬರ ಇಲ್ಲ. ಐಪಿಎಲ್ ಟಿಕೆಟ್ (IPL Ticket) ಪಡೆಯೋಕೆ ತಮ್ಮ ಪಿಎಗಳನ್ನೇ ಕ್ಯೂ ನಿಲ್ಲಿಸಿದ್ದಾರೆ ಶಾಸಕರು.
ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ಕೊಡುವ ಮಾತುಕತೆ ಸರ್ಕಾರ- ಕೆಎಸ್ಸಿಎ (KSCA) ಮಧ್ಯೆ ಆಗಿದೆ. ನಾಳೆ ಬೆಂಗಳೂರು ಮತ್ತು ಚೆನೈ (RCB vs CSK) ಪಂದ್ಯವಿದೆ. ಈ ಪಂದ್ಯದ ಟಿಕೆಟ್ಗಾಗಿ ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಕ್ಯೂ ನಿಂತು ಟಿಕೆಟ್ ಪಡೆದಿದ್ದಾರೆ.
ಸ್ಪೀಕರ್ ಕಚೇರಿಯಲ್ಲಿ ಟಿಕೆಟ್ ಸಿಗುವುದರಿಂದ ಶಾಸಕರ ಸೂಚನೆ ಮೇರೆಗೆ ಕ್ಯೂ ನಿಂತು ಟಿಕೆಟ್ ಪಡೆದಿದ್ದಾರೆ. ಜನರ ಸಮಸ್ಯೆ ಕೇಳದ ಜನಪ್ರತಿನಿಧಿಗಳು ಐಪಿಎಲ್ ಟಿಕೆಟ್ಗಾಗಿ ಹೀಗೆ ವರ್ತನೆ ತೋರೋದು ಮಾತ್ರ ವಿಪರ್ಯಾಸವೇ ಸರಿ.


