ChatGPT Image Oct 3, 2026, 08_41_04 PM-modified
GREATER BENGALURU NEWS 9
Court

ದಾವಣಗೆರೆ : ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಕೊಡುವ ಪೋಷಕರೇ ಎಚ್ಚರ, ಅಪ್ರಾಪ್ತ ಮಗನಿಗೆ ಚಾಲನೆ ಮಾಡಲು ಕಾರು ನೀಡಿದ ವ್ಯಕ್ತಿಗೆ ಎ.ಎಸ್.ಸಿ.ಎಸ್. ಜೆ.ಎಂ.ಎಫ್.ಸಿ. ನ್ಯಾಯಾಲಯ 27 ಸಾವಿರ ರೂ, ದಂಡ ವಿಧಿಸಿ ತೀರ್ಪು ನೀಡಿದೆ.

ಹೌದು, ಕೆಲವು ತಿಂಗಳ ಹಿಂದೆ ಸಂಚಾರ ಠಾಣೆ ಪೋಲೀಸರು ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಕಾರು ನಿಲ್ಲಿಸಿ ತಪಾಸಣೆಗೆ ಒಳಪಡಿಸಿದಾಗ ಚಾಲಕ ಅಪ್ರಾಪ್ತನಾಗಿರುವುದು ಪತ್ತೆಯಾಗಿದ್ದು, ಕೂಡಲೇ. ಬಾಲಕ ಮತ್ತು ದಾವಣಗೆರೆ ನಿವಾಸಿ ಮಂಜುನಾಥ್ ಎಂಬುವರ ವಿರುದ್ಧ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂಚಾರ ವೃತ್ತ ನಿರೀಕ್ಷಕ ನೆಲವಾಗಲು ಮಂಜುನಾಥ್ ನೇತೃತ್ವದಲ್ಲಿ ಪ್ರಕರಣ ತನಿಖೆ ನಡೆಸಿದ ಪಿಎಸ್ಐ ಶೈಲಜಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗೇಶ್ ಅವರು ಬಾಲಕನಿಗೆ ಕಾರು ಚಾಲನೆಗೆ ನೀಡಿದ ಮಂಜುನಾಥ್ ಗೆ 27 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪಾನ್ ಕಾರ್ಡ್ 2.0 ಯೋಜನೆ: ಮನೆಯಲ್ಲೇ ಕೂತು ಹೊಸ ಪಾನ್ ಕಾರ್ಡ್ ಪಡೆಯಿರಿ: ಇದು ಹೇಗೆ ಗೊತ್ತಾ!?

Leave a Reply

Your email address will not be published. Required fields are marked *