BBMP
Loading ...

ಬೆಂಗಳೂರು: ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್ ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ವಿಜಯನಗರ ಕಾಂಗ್ರೆಸ್​ ಶಾಸಕ ಎಂ. ಕೃಷ್ಣಪ್ಪ ಅವರ ಕನಸಿನ ಯೋಜನೆಯಾಗಿದ್ದು, ತಮ್ಮ ಅವಿರತ ಪ್ರಯತ್ನದಿಂದ ಕನಸು ನನಸು ಮಾಡಿದ್ದಾರೆ.

ನಿನ್ನೆಯಷ್ಟೇ (ಆ.25) ಸಿಎಂ ಸಿದ್ದರಾಮಯ್ಯ ಅವರು ಪಾಲಿಕೆ ಬಜಾರ್​ ಅನ್ನು ಉದ್ಘಾಟಿಸಿದರು. ಈ ಬಗ್ಗೆ ಮಾತನಾಡಿದ ಶಾಸಕ ಎಂ. ಕೃಷ್ಣಪ್ಪ, ‘ನಾನು ದೆಹಲಿಗೆ ಹೋದಾಗ ಅಲ್ಲಿನ ಪಾಲಿಕೆ ಬಜಾರ್‌ ನೋಡಿದ್ದೆ. ನಮ್ಮಲ್ಲಿಯೂ ಇಂಥ ಬಜಾರ್‌ ಆಗಬೇಕು ಎಂಬ ಯೋಚನೆ ಆಗ ಬಂದಿತ್ತು. ಬೀದಿ ಬದಿಯಲ್ಲಿ ವ್ಯಾಪಾರ ಮಾಡಿದಾಗ ಓಡಾಡುವ ಜನರಿಗೆ, ವಾಹನಗಳಿಗೆ ಮಾತ್ರವಲ್ಲ, ವ್ಯಾಪಾರಿಗಳಿಗೂ ತೊಂದರೆ ಉಂಟಾಗುತ್ತದೆ. ಅದನ್ನು ತಪ್ಪಿಸಲು ಈ ರೀತಿ ಪಾಲಿಕೆ ಬಜಾರ್‌ ನಿರ್ಮಿಸಬೇಕು ಎಂಬ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಇಟ್ಟಾಗ ಅವರು ಅನುದಾನ ನೀಡಿದರು’ ಎಂದು ನೆನಪು ಮಾಡಿಕೊಂಡರು.

ಪಾಲಿಕೆ ಬಜಾರ್ ಹೇಗಿದೆ?
* ಒಟ್ಟು ವಿಸ್ತೀರ್ಣ: 1165 ಚದರ ಮೀಟರ್‌
* ಬಜಾರ್‌ನ ಉದ್ದ 136 ಮೀಟರ್‌ ಅಗಲ 11 ಮೀಟರ್‌
* ಪ್ರತಿ ಮಳಿಗೆಯ ವಿಸ್ತೀರ್ಣ 9 ಚದರ ಮೀಟರ್‌
* ಒಟ್ಟು ಮಳಿಗೆಗಳು 79
* ಹೊರಾಂಗಣದಲ್ಲಿ 5 ಒಳಾಂಗಣದಲ್ಲಿ 26 ಎ.ಸಿ. ಯುನಿಟ್‌ಗಳು
* 1 ಲಿಫ್ಟ್‌ 2 ಎಸ್ಕಲೇಟರ್‌ 8 ಪ್ರವೇಶ ದ್ವಾರ 145 ವಿದ್ಯುತ್‌ ದೀಪಗಳು
* ಪ್ರತಿ ಮಳಿಗೆಗೆ ಅಗ್ನಿಶಾಮಕ ಉಪಕರಣ ಅಳವಡಿಕೆ

ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ಕಾಂಗ್ರೆಸ್‌ ಮುಖಂಡ ಬಿ.ಎಸ್‌. ಶಿವಣ್ಣ ಮಳವಳ್ಳಿ, ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್. ಉಮಾಶಂಕರ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌, ಸಂಗೀತ ನಿರ್ದೇಶಕ ಸಾಧು ಕೋಕಿಲ, ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ಪಾಲಿಕೆ ಬಜಾರ್ ಹೇಗಿದೆ ನೋಡಿ! ಇಲ್ಲಿದೆ ಫೋಟೋ ಮತ್ತು ವಿಡಿಯೋ

ದಕ್ಷಿಣ ಭಾರತದಲ್ಲಿಯೇ ಮೊದಲ ಹವಾನಿಯಂತ್ರಿತ ಪಾಲಿಕೆ ಬಜಾರ್ ಬೆಂಗಳೂರಿನ ವಿಜಯನಗರದಲ್ಲಿ ಲೋಕಾರ್ಪಣೆ: ಏನಿದರ ವಿಶೇಷತೆ?

Leave a Reply

Your email address will not be published. Required fields are marked *