Greater Bengaluru News9: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮುದ್ದಿನ ಪಾಳ್ಯ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಂಡಿರುವ ಸುಖ ಬ್ರೂವರಿ ಮತ್ತು ಕಿಚನ್ ಎಂಬ ರೆಸ್ಟೋರೆಂಟ್ ಅನಧಿಕೃತ ಕಟ್ಟಡವಾಗಿದ್ದು, ಇದಕ್ಕೆ ಜಿಬಿಎಯಲ್ಲಿರುವ ಭಷ್ಟ್ರ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಈ ಅಕ್ರಮ ಕುರಿತಂತೆ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಅತ್ಯಂತ ಪ್ರಭಾವೀ ವ್ಯಕ್ತಿಗಳಿಬ್ಬರ ಮಾಲೀಕತ್ವದ ಒಂದು ಬೃಹತ್ ಅನಧಿಕೃತ ಕಟ್ಟಡಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಇಲಾಖೆ ಮತ್ತು ಆರೋಗ್ಯ ಇಲಾಖೆ ಹಾಗೂ , ಮತ್ತು ಅಬಕಾರಿ ಇಲಾಖೆಗಳಲ್ಲಿರುವ ಪರಮ ಭ್ರಷ್ಟ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಹಗರಣಗಳು ಇದೀಗ ದಾಖಲೆಗಳಿಂದ ಬಹಿರಂಗಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
1,85,000 ಚ. ಅಡಿಗಳಷ್ಟು ವಿಸ್ತೀರ್ಣದಲ್ಲಿ ಸುಮಾರು 2,000 ಜನ ಒಮ್ಮೆಲೇ ಕೂರಬಹುದಾದ ಸುಖ ಬಾರ್ ಅಂಡ್ ರೆಸ್ಟೋರೆಂಟ್ ಸಿದ್ಧರಾಜು ಮತ್ತು ಭಾಗ್ಯ, ಶರತ್, ಪವನ್ ಕುಮಾರ್ ಮತ್ತು ನವನೀತ್ ಎಂಬುವವರ ಮಾಲೀಕತ್ವಕ್ಕೆ ಸೇರಿರುವ ಎರಡು ಪ್ರತ್ಯೇಕ ಸ್ವತ್ತುಗಳಾಗಿರುತ್ತವೆ.
ಸಿದ್ಧರಾಜು 2024 ರಂದು ತಮ್ಮ ಸ್ವತ್ತಿನಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿರುವ ರಾಜರಾಜೇಶ್ವರಿ ನಗರ ವಿಭಾಗದ ನಗರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಸಿದ್ಧರಾಜು ಅವರಿಗೆ ಡಿಮ್ಯಾಂಡ್ ನೋಟೀಸ್ ಜಾರಿ ಮಾಡಿ, ನಕ್ಷೆ ಮಂಜೂರಾತಿ ಗೆ ಕೇಂದ್ರ ಕಛೇರಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮುಖ್ಯ ಆಯುಕ್ತರ ಖಾತೆ ಸಂಖ್ಯೆ: 8401132000014 ಕ್ಕೆ ಹಾಗೂ ಮೊತ್ತ 3,37,749/- ಗಳನ್ನು ಕಾರ್ಮಿಕ ಇಲಾಖೆಯ ಕೆನರಾ ಬ್ಯಾಂಕಿನ ಹೊಂಬೇಗೌಡ ನಗರ ಶಾಖೆಯ ಖಾತೆ ಸಂಖ್ಯೆ: 1371101079786 ಕ್ಕೆ ಜಮೆ ಮಾಡುವಂತೆ ಆದೇಶಿಸಿರುತ್ತಾರೆ.
ಹಾಗೆಯೇ, ಅದೇ ಸ್ವತ್ತಿಗೆ ಹೊಂದಿಕೊಂಡಿರುವಂತಹ ಭಾಗ್ಯ, ಶರತ್, . ಪವನ್ ಕುಮಾರ್ ಮತ್ತು . ನವನೀತ್ ಅವರುಗಳು ತಮ್ಮ ಸ್ವತ್ತಿನಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಅವರಿಗೂ ಶುಲ್ಕ ಪಾವತಿಸುವಂತೆ ಸೂಚಿಸಿದ ಹನುಮಂತರಾಯಪ್ಪ ಒಟ್ಟು 66,70,855 ರೂ.ಗಳನ್ನು ಪಾಲಿಕೆಯ ಮುಖ್ಯ ಆಯುಕ್ತರ ಖಾತೆಗೆ ಜಮೆ ಮಾಡದೆ ತಾನೇ ತಿಂದು ತೇಗಿರುತ್ತಾನೆ.
ಈ ರೀತಿ ಎರಡು ಪ್ರತ್ಯೇಕ ಸ್ವತ್ತುಗಳಲ್ಲಿ ಎರಡು ಪ್ರತ್ಯೇಕ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಎರಡು ಪ್ರತ್ಯೇಕ ನಕ್ಷೆ ಮಂಜೂರಾತಿಗಳನ್ನು ಪಡೆದಿದ್ದರೂ ಸಹ, ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಬೃಹತ್ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿದೆ. ಇದಕ್ಕಾಗಿ ಅಂದಿನ ರಾಜರಾಜೇಶ್ವರಿ ನಗರ ವಿಭಾಗದ ಅದಿಕಾರಿಗಳು ಕೋಟ್ಯಾಂತರ ರೂ. ಗಳನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಅದೇ ರೀತಿ ಬೆಸ್ಕಾಂ, ಅಬಕಾರಿ ಮತ್ತಿತರ ಇಲಾಖೆಗಳ ಭ್ರಷ್ಟರು ಈ ಅಕ್ರಮದಲ್ಲಿ ಭಾಗಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತದಲ್ಲಿ ರಮೇಶ್ ದೂರು ದಾಖಲಿಸಿದ್ದಾರೆ.


