BBMP
Loading ...

Khata

ಬೆಂಗಳೂರು: ನಗರದಲ್ಲಿ ‘ಬಿ’ ಖಾತಾ ಸ್ವತ್ತುಗಳ ಮಾಲೀಕರು ‘ಎ’ ಖಾತಾಗೆ ಅರ್ಜಿ ಸಲ್ಲಿಸಲು ಅನುವಾಗುವಂತೆ ಮುಂದಿನ 15 ದಿನಗಳೊಳಗೆ ಆನ್‌ಲೈನ್‌ ವ್ಯವಸ್ಥೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

ರಾಜ್ಯ ಸರಕಾರವು ಬಿ – ಖಾತಾ ಆಸ್ತಿಗಳಿಗೆ ಎ – ಖಾತಾ ನೀಡಲು ಆದೇಶಿಸಿ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್‌ ವ್ಯವಸ್ಥೆ ಜಾರಿ ಬಳಿಕ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ. ಬಿ – ಖಾತಾವನ್ನು ಎ – ಖಾತಾಗೆ ಪರಿವರ್ತನೆ ಮಾಡಿಕೊಳ್ಳಲು ಹಾಗೂ ಯಾವುದೇ ಖಾತೆ ಹೊಂದಿಲ್ಲದವರು ಹೊಸ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಎ-ಖಾತಾಗಾಗಿ ಪಾಲಿಕೆಯ ಯಾವುದೇ ಕಚೇರಿಗೆ ಅಲೆದಾಡಬೇಕಿಲ್ಲ. ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು. ಲಂಚ ಕೂಡ ನೀಡಬಾರದು. ಶೀಘ್ರದಲ್ಲೇ ಆನ್‌ಲೈನ್‌ ವ್ಯವಸ್ಥೆ ಪ್ರಾರಂಭಿಸಲಾಗುವುದು ‘ ಎಂದು ಅವರು ಮಾಹಿತಿ ನೀಡಿದ್ದಾರೆ.

400ರಿಂದ 700 ಕೋಟಿ ರೂ. ತೆರಿಗೆ ನಿರೀಕ್ಷೆ
”ಬಿ-ಖಾತಾ ಆಸ್ತಿಗಳನ್ನು ಎ-ಖಾತಾವನ್ನಾಗಿ ಪರಿವರ್ತಿಸುವುದರಿಂದ 400 ರಿಂದ 700 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಮುಂದಿನ ಎರಡು ವಾರಗಳಲ್ಲಿಎ-ಖಾತಾ ವಿತರಣೆಗೆ ಎಸ್‌ಒಪಿ ಬಿಡುಗಡೆ ಮಾಡಲಾಗುವುದು,” ಎಂದು ಅಧಿವರು ಹೇಳಿದರು.

ಮನೆ- ಮನೆ ಸರ್ವೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ32 ಲಕ್ಷ ಆಸ್ತಿಗಳಿರುವುದು ಕಂಡು ಬಂದಿವೆ. ಸುಮಾರು 7 ಲಕ್ಷ ಸ್ವತ್ತುಗಳು ತೆರಿಗೆ ಜಾಲದಿಂದ ಹೊರಗಿವೆ. ಈ ಆಸ್ತಿಗಳನ್ನು ತೆರಿಗೆ ಜಾಲದಡಿ ತಂದರೆ ಅಧಿಕ ತೆರಿಗೆ ವಸೂಲಾಗಲಿದೆ,” ಎಂದರು.

ರಮ್ಯಾಗೆ ಕೆಟ್ಟ ಕಾಮೆಂಟ್​ಗಳಿಂದ ನಿಂದನೆ: ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ರಮ್ಯಾ!

Leave a Reply

Your email address will not be published. Required fields are marked *