BBMP
Loading ...

ಬೆಂಗಳೂರು: ಸ್ಯಾಂಡಲ್ ವುಡ್ ರ್ಯಾಪ್ ಹಾಡುಗಾರ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ಡಿವೋರ್ಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ನಡೆಸಿದಂತ ಫ್ಯಾಮಿಲಿ ಕೋರ್ಟ್, ವಿಚ್ಚೇದನ ಮಂಜೂರು ಮಾಡಿದೆ. ಇದರ ನಡುವೆ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳಿಬ್ಬರ ವಿವಾಹ ವಿಚ್ಚೇಧನದ ಹಿಂದಿನ ಸಿಕ್ರೇಟ್ ರಿವೀಲ್ ಆಗಿದೆ. ಅದೇನು ಅಂತ ಮುಂದೆ ಓದಿ.

Rap ಸಾಂಗ್ ಹಾಡುಗಾರ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ದಾಂಪತ್ಯ ಈಗ ಡಿವೋರ್ಸ್ ಹಂತಕ್ಕೆ ತಲುಪಿದೆ. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅಂದಹಾಗೇ ಕನ್ನಡದ ಬಿಗ್ ಬಾಸ್ ಸೀಸನ್-5ರಲ್ಲಿ ಕನ್ನಡ ರ್ಯಾಪ್ ಹಾಡುಗಳ ಮೂಲಕ ಮನೆ ಮಾತಾಗಿದ್ದಂತ ಚಂದನ್ ಶೆಟ್ಟಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಬಿಗ್ ಬಾಸ್ ನಲ್ಲಿ ನಿವೇದಿತಾ ಕೂಡ ಪಾಲ್ಗೊಂಡಿದ್ದರು. ಇವರಿಬ್ಬರು ಆ ಸ್ಪರ್ಧೆಯಲ್ಲೇ ಪ್ರೀತಿಸೋದಕ್ಕೆ ಶುರು ಮಾಡಿದ್ದರು. ಬಿಗ್ ಬಾಸ್ ನಂತ್ರ ಮೈಸೂರಿನ ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಚಂದನ್ ಶೆಟ್ಟಿ, ನಿವೇದಿತಾಗೆ ಪ್ರಪೋಸ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಈ ಬಳಿಕ ಚಂದನ್ ಶೆಟ್ಟಿ-ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಈ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಈಗ ಕೆಲವೇ ಕೆಲವು ವರ್ಷಗಳಲ್ಲೇ ದಾಂಪತ್ಯದಲ್ಲಿ ಬಿರುಕು ಕಂಡು, ವಿಚ್ಚೇದನಕ್ಕಾಗಿ ಇಬ್ಬರು ಸೆಲೆಬ್ರೆಟಿಗಳು ಅರ್ಜಿ ಸಲ್ಲಿಸಿದ್ದು, ಕೋರ್ಟ್ ವಿವಾಹ ವಿಚ್ಚೇದನ ಮಂಜೂರು ಮಾಡಿದೆ. ಈ ಮೂಲದ ನಾಲ್ಕು ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಂತೆ ಆಗಿದೆ.

ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಲು ಕಾರಣವೇನು ಗೊತ್ತಾ?

ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ದಾಂಪತ್ಯದಲ್ಲಿ ಬಿರುಕು ಬಿಟ್ಟು, ವಿವಾಹ ವಿಚ್ಚೇದನದವರೆಗೂ ಬಂದು ನಿಲ್ಲೋದಕ್ಕೆ ಕಾರಣ, ಮಗು ಪಡೆಯುವ ವಿಚಾರಕ್ಕೆ ಎನ್ನಲಾಗಿದೆ.

ಚೆಂದನ್ ಶೆಟ್ಟಿ ನನಗೆ ಮಗು ಬೇಕು ಅಂತ ಬೇಡಿಕೆ ಇಟ್ಟರೇ, ನಿವೇದಿತಾ ಗೌಡ ತನಗೆ ಮಗು ಬೇಡ ಅಂತ ಹಠ ಹಿಡಿದಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ದಂಪತಿಗಳ ನಡುವೆ ವೈಮನ್ಸು ಉಂಟಾಗಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಈಗ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಲ್ಲಿಸಿದ್ದಂತ ವಿವಾಹ ವಿಚ್ಚೇದನಕ್ಕೆ ಅನುಮತಿ ನೀಡಿ, ವಿಚ್ಚೇದನ ಮಂಜೂರು ಮಾಡಿದೆ.

Leave a Reply

Your email address will not be published. Required fields are marked *