ChatGPT Image Oct 3, 2026, 08_41_04 PM-modified
GREATER BENGALURU NEWS 9
BESCOM

ಬೆಂಗಳೂರು: ವಿದ್ಯುತ್ ವ್ಯತ್ಯಯ ಹಾಗೂ ವಿದ್ಯುತ್ ಸಂಬಂಧಿತ ಸಾರ್ವಜನಿಕರ ಕುಂದು ಕೊರತೆ ನಿವಾರಿಸಲು ಬೆಸ್ಕಾಂ ಹೊಸ ಯೋಜನೆ ರೂಪಿಸಿದೆ. ರಾಜ್ಯದ 8 ಜಿಲ್ಲೆಗಳಿಗೆ ಸಂಬಂಧಿಸಿ 11 ‘ವಾಟ್ಸ್ ಆ್ಯಪ್ ಸಹಾಯವಾಣಿ’ ಸಂಖ್ಯೆಗಳನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಬಿಡುಗಡೆ ಮಾಡಿದ್ದಾರೆ.

ಮಳೆಗಾಲ ಹಾಗೂ ತುರ್ತು ಸಂದರ್ಭಗಳಲ್ಲಿ ನೋಡಲ್ ಅಧಿಕಾರಿಗಳು ಸಹಾಯವಾಣಿ ಕೇಂದ್ರಕ್ಕೆ ಬರುವ ದೂರುಗಳ ಸ್ವೀಕಾರದಡಿ ಬೆಸ್ಕಾಂನ ಹಾಲಿ ಸಹಾಯವಾಣಿ ಸಂಖ್ಯೆ 1912ಕ್ಕೆ ಸಾವಿರಾರು ಕರೆಗಳು ಬರುತ್ತಿದ್ದವು. ಕರೆಗಳ ಒತ್ತಡ ಕಡಿಮೆ ಮಾಡಲು ಮತ್ತು ಕರೆಗಳನ್ನು ಸರಾಗವಾಗಿ ನಿರ್ವಹಣೆ ಮಾಡಲು ಹೊಸ ನಂಬರ್‌ ಗಳನ್ನು ನೀಡಲಾಗಿದೆ.

ಒಂದೇ ನಂಬರ್‌ ಇದ್ದ ಕಾರಣ ಸಾರ್ವಜನಿಕರಿಗೆ ಸಹಾಯವಾಣಿ ಕರೆ ಸುಲಭವಾಗಿ ಲಭ್ಯವಾಗದ ಹಿನ್ನೆಲೆಯಲ್ಲಿ ವಾಟ್ಸ್ ಆ್ಯಪ್ ಸಹಾಯವಾಣಿ ಪ್ರತಿ ಜಿಲ್ಲೆಗೆ ಒಂದರಂತೆ ನೀಡಲು ಸಚಿವರು ಬೆಸ್ಕಾಂಗೆ ಸೂಚಿಸಿದ್ದರು.

ಇದೀಗ ಹೆಸ್ಕಾಂ, ಜಿಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 11 ವಾಟ್ಸ್ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಬೆಸ್ಕಾಂ ಒದಗಿಸಿದ್ದು, ಬೆಸ್ಕಾಂನ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ವೃತ್ತಗಳಿಗೆ 4 ವಾಟ್ಸ್ಆ್ಯಪ್ ಸಂಖ್ಯೆಗಳನ್ನು ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಬೆಸ್ಕಾಂನಿಂದ ಹೆವಿ ಲೋಡ್‌ ಶಾಕ್‌, ದಂಡದ ಹೆಸರಿನಲ್ಲಿ ಯದ್ವಾತದ್ವಾ ಬಿಲ್‌: ಕಂಗಾಲಾದ ಗ್ರಾಹಕರು..!

Leave a Reply

Your email address will not be published. Required fields are marked *