BBMP
Loading ...

Lovers

ಬೆಂಗಳೂರು: ಈ ಕೆಲವು ಪ್ರೇಮಿಗಳು ತೋರುವ ಹುಚ್ಚಾಟಗಳು ಅಷ್ಟಿಷ್ಟಲ್ಲ. ತಾವು ಎಲ್ಲಿ ಇದ್ದೇವೆ ಎಂಬುದನ್ನೂ ಕೂಡಾ ಮರೆತು ಸಾರ್ವಜನಿಕ ಸ್ಥಳಗಳಲ್ಲಿ ಕಿಸ್ಸಿಂಗ್, ರೊಮ್ಯಾನ್ಸ್ ಮಾಡುತ್ತಾ ಇತರರಿಗೆ ಮುಜುಗರ ಉಂಟುಮಾಡುತ್ತಿರುತ್ತಾರೆ. ಹೌದು ಮೆಟ್ರೋ, ರೈಲು, ಬಸ್ ಇತ್ಯಾದಿ ಸಾರ್ವಜನಿಕರು ಪ್ರಯಾಣಿಸುವಂತಹ ಸ್ಥಳಗಳಲ್ಲಿ ಪ್ರೇಮಿಗಳು ರಾಜಾರೋಷವಾಗಿ ರೊಮ್ಯಾನ್ಸ್ ಮಾಡಿದಂತಹ ಅಸಹ್ಯಕರ ಘಟನೆಗಳ ಸುದ್ದಿಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು,

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಫ್ಲ್ಯಾಟ್ ಫಾರ್ಮ್ -3ಯಲ್ಲಿ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದೆ ಎನ್ನಲಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡುತ್ತಾ ಅಸಭ್ಯವಾಗಿ ವರ್ತಿಸಿದ್ದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ. ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿಯೂ ದೆಹಲಿ ಮೆಟ್ರೋ ಮಾದರಿ ಶುರುವಾಗುತ್ತಿದೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಹೌದು ಕರ್ನಾಟಕ ಪೋರ್ಟ್‌ಫೋಲಿಯೋ ಎನ್ನುವ ಎಕ್ಸ್‌ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದ್ದು, ‘‘ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋ ಸಂಸ್ಕೃತಿಯತ್ತ ಸಾಗುತ್ತಿದೆಯೇ?’’ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋಗೆ (Viral Video) ಈಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಇನ್ನು ಈ ವಿಡಿಯೋ ಬಗ್ಗೆ ಬೆಂಗಳೂರು ಮೆಟ್ರೋ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಯಾವುದೇ ಹೇಳಿಕೆ ನೀಡಿಲ್ಲ.

ಬೆಂಗಳೂರು ಪೊಲೀಸ್​ ಆಯುಕ್ತರನ್ನೇ ಬಿಡದ ಸೈಬರ್​ ಖದೀಮರು: ಬಿ ದಯಾನಂದ ಹೆಸರಲ್ಲಿ ನಕಲಿ ಖಾತೆ

Leave a Reply

Your email address will not be published. Required fields are marked *