Greater Bengaluru News9: ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಬಳಿಕ ಇದೀಗ ಬೆಂಗಳೂರಲ್ಲೂ ಪ್ರವಾಸಿಗರಿಗೆ ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭವಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ನಗರದಲ್ಲಿ 3 ಐಷಾರಾಮಿ ಬಸ್ಗಳನ್ನು ಪರಿಚಯಿಸಿದ್ದು, ಈಗಾಗಲೇ ಅವುಗಳಿಗೆ ಚಾಲನೆ ನೀಡಲಾಗಿದೆ.
ನಗರದ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಈ ಸೇವೆಯನ್ನು ಆರಂಭಿಸಲಾಗಿದ್ದು, ಐಷಾರಾಮಿ ಬಸ್ನಲ್ಲಿ ಕುಳಿತು ಬೆಂಗಳೂರಿನ ಸೌಂದರ್ಯವನ್ನು ಅನುಭವಿಸುವ ಅವಕಾಶ ಪ್ರವಾಸಿಗರಿಗೆ ದೊರೆತಿದೆ.
ಈ ಡಬಲ್ ಡೆಕ್ಕರ್ ಬಸ್ನಲ್ಲಿ ಎಸಿ ಸೌಲಭ್ಯ, ಮೈಕ್ ಸಿಸ್ಟಂ, ಆರಾಮದಾಯಕ ಆಸನಗಳಿವೆ. ಲೋವರ್ ಡೆಕ್ನಲ್ಲಿ 24 ಐಷಾರಾಮಿ ಆಸನಗಳಿದ್ದು, ಓಪನ್ ಅಪ್ಪರ್ ಡೆಕ್ನಲ್ಲಿ 20 ಆಸನಗಳಿವೆ. ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಲು ಮೈಕ್ ವ್ಯವಸ್ಥೆ ಅಳವಡಿಸಲಾಗಿದೆ.
ಬಸ್ ರವೀಂದ್ರ ಕಲಾಕ್ಷೇತ್ರದಿಂದ ಆರಂಭವಾಗಿ ಕಾರ್ಪೊರೇಷನ್ ಸರ್ಕಲ್, ಹಡ್ಸನ್ ಸರ್ಕಲ್, ಕಸ್ತೂರಬಾ ರಸ್ತೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ, ಅಂಚೆ ಕಚೇರಿ, ಹೈಕೋರ್ಟ್ / ವಿಧಾನಸೌಧ, ಕೆ.ಆರ್. ಸರ್ಕಲ್ ಮಾರ್ಗವಾಗಿ ಮತ್ತೆ ರವೀಂದ್ರ ಕಲಾಕ್ಷೇತ್ರಕ್ಕೆ ಮರಳಲಿದೆ.
ಪ್ರಯಾಣಿಕರಿಗೆ ತಲಾ ₹180 ಟಿಕೆಟ್ ದರ ನಿಗದಿಪಡಿಸಲಾಗಿದೆ. ಒಂದು ಬಾರಿ ಬ್ಯಾಂಡ್ ಪಡೆದುಕೊಂಡರೆ ದಿನವಿಡೀ ಎಷ್ಟು ಬಾರಿ ಬೇಕಾದರೂ ಈ ಬಸ್ನಲ್ಲಿ ಸಂಚರಿಸಬಹುದು. ಬಸ್ಗಳು ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಸಂಚಾರ ನಡೆಸಲಿವೆ.
ಟಿಕೆಟ್ಗಳನ್ನು www.kstdc.co ವೆಬ್ಸೈಟ್, 080-4334-4334/35 ಅಥವಾ 8970650070 / 8970650075 ಮೂಲಕ ಬುಕ್ ಮಾಡಬಹುದು.ಬೆಂಗಳೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಬಳಿಕ ಇದೀಗ ಬೆಂಗಳೂರಲ್ಲೂ ಪ್ರವಾಸಿಗರಿಗೆ ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭವಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ನಗರದಲ್ಲಿ 3 ಐಷಾರಾಮಿ ಬಸ್ಗಳನ್ನು ಪರಿಚಯಿಸಿದ್ದು, ಈಗಾಗಲೇ ಅವುಗಳಿಗೆ ಚಾಲನೆ ನೀಡಲಾಗಿದೆ.
ನಗರದ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಈ ಸೇವೆಯನ್ನು ಆರಂಭಿಸಲಾಗಿದ್ದು, ಐಷಾರಾಮಿ ಬಸ್ನಲ್ಲಿ ಕುಳಿತು ಬೆಂಗಳೂರಿನ ಸೌಂದರ್ಯವನ್ನು ಅನುಭವಿಸುವ ಅವಕಾಶ ಪ್ರವಾಸಿಗರಿಗೆ ದೊರೆತಿದೆ.
ಈ ಡಬಲ್ ಡೆಕ್ಕರ್ ಬಸ್ನಲ್ಲಿ ಎಸಿ ಸೌಲಭ್ಯ, ಮೈಕ್ ಸಿಸ್ಟಂ, ಆರಾಮದಾಯಕ ಆಸನಗಳಿವೆ. ಲೋವರ್ ಡೆಕ್ನಲ್ಲಿ 24 ಐಷಾರಾಮಿ ಆಸನಗಳಿದ್ದು, ಓಪನ್ ಅಪ್ಪರ್ ಡೆಕ್ನಲ್ಲಿ 20 ಆಸನಗಳಿವೆ. ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಲು ಮೈಕ್ ವ್ಯವಸ್ಥೆ ಅಳವಡಿಸಲಾಗಿದೆ.
ಬಸ್ ರವೀಂದ್ರ ಕಲಾಕ್ಷೇತ್ರದಿಂದ ಆರಂಭವಾಗಿ ಕಾರ್ಪೊರೇಷನ್ ಸರ್ಕಲ್, ಹಡ್ಸನ್ ಸರ್ಕಲ್, ಕಸ್ತೂರಬಾ ರಸ್ತೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ, ಅಂಚೆ ಕಚೇರಿ, ಹೈಕೋರ್ಟ್ / ವಿಧಾನಸೌಧ, ಕೆ.ಆರ್. ಸರ್ಕಲ್ ಮಾರ್ಗವಾಗಿ ಮತ್ತೆ ರವೀಂದ್ರ ಕಲಾಕ್ಷೇತ್ರಕ್ಕೆ ಮರಳಲಿದೆ.
ಪ್ರಯಾಣಿಕರಿಗೆ ತಲಾ ₹180 ಟಿಕೆಟ್ ದರ ನಿಗದಿಪಡಿಸಲಾಗಿದೆ. ಒಂದು ಬಾರಿ ಬ್ಯಾಂಡ್ ಪಡೆದುಕೊಂಡರೆ ದಿನವಿಡೀ ಎಷ್ಟು ಬಾರಿ ಬೇಕಾದರೂ ಈ ಬಸ್ನಲ್ಲಿ ಸಂಚರಿಸಬಹುದು. ಬಸ್ಗಳು ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಸಂಚಾರ ನಡೆಸಲಿವೆ.
ಟಿಕೆಟ್ಗಳನ್ನು www.kstdc.co ವೆಬ್ಸೈಟ್, 080-4334-4334/35 ಅಥವಾ 8970650070 / 8970650075 ಮೂಲಕ ಬುಕ್ ಮಾಡಬಹುದು.