BBMP
Loading ...

ಬೆಂಗಳೂರು: ನಾನು ಹೇಳ್ತಾ ಇದ್ದೀನಿ ಬಾಯಿಗೆ ಬೀಗ ಹಾಕೊಂಡು ಇದ್ದರೇ ಎಲ್ಲವು ಸರಿ ಇರುತ್ತದೆ ಅಂತ ಡಿ.ಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ನಾವು ಮಾಡಿರುವ ಕೆಲಸಕ್ಕೆ ನಮಗೆ ಎಲ್ಲಾ ಸ್ಥಾನ ಮಾನಗಳು ಸಿಗಲಿದೆ ಅಂತ ಹೇಳಿದರು. ಇನ್ನೂ ಇಲ್ಲಿಗೆ ಎಲ್ಲವೂ ಮುಗಿಯಬೇಕು, ಸಿಎಂ, ಡಿಸಿಎಂ ಬಗ್ಗೆ ಮಾತನಾಡಿದರೆ ಅವರಿಗೆ ನೋಟಿಸ್‌ ನೀಡಲಾಗುತ್ತದೆ ಅಂಥ ಹೇಳಿದರು. ಇದಲ್ಲದೇ ಶಿಸ್ತಿನ ಕ್ರಮವನ್ನು ಕೈಗೊಳ್ಳಲಾಗುವುದು ಅಂಥ ಹೇಳಿದರು. ಪಾರ್ಟಿ ಅಧಿಕಾರಕ್ಕೆ ಬರಲು ಏನೆಲ್ಲ ಆಗಿದೆ ಅಂಥ ಅವರು ಹೇಳಿದರು.

ಬೆಂಗಳೂರು ನಗರ ಅಭಿವೃದ್ಧಿ ಖಾತೆಯ ಮೇಲ್ವಿಚಾರಣೆಯೂ ಆಗಿರುವ ಶಿವಕುಮಾರ್ ಅವರು ಕೆಂಪೇಗೌಡರ 515 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡುತ್ತಾ, ಈ ಬೆಳವಣಿಗೆಗಳ ಮಹತ್ವವನ್ನು ಒತ್ತಿ ಹೇಳಿದರು. ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 150 ಕಿ.ಮೀ ಫ್ಲೈಓವರ್ ಮತ್ತು ಸಿಗ್ನಲ್ ಮುಕ್ತ ಕಾರಿಡಾರ್ ಗಳನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್​ನಲ್ಲಿ ನಿಲ್ಲದ ಸಂಘರ್ಷ, ಅಧಿಕಾರಕ್ಕೇರಿ ಒಂದೇ ವರ್ಷದಲ್ಲಿ ಭುಗಿಲೆದ್ದ ಭಿನ್ನಮತ

Leave a Reply

Your email address will not be published. Required fields are marked *