BBMP
Loading ...

Cooking oil

ಬೆಂಗಳೂರು: ಇಸ್ರೇಲ್​ ದಾಳಿಗೆ ಪ್ರತಿಯಾಗಿ ಇರಾನ್​ ಕೂಡ ಪ್ರತಿ ದಾಳಿ ನಡೆಸುತ್ತಿದ್ದು, ಎರಡೂ ದೇಶಗಳ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವಸ್ತುಗಳು ಹಾಗೂ ಪದಾರ್ಥಗಳು ದುಬಾರಿಯಾಗುತ್ತಿವೆ. ಒಂದೆಡೆ ಕಚ್ಛಾ ತೈಲ ಬೆಲೆ ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಅಡುಗೆ ಎಣ್ಣೆ ಬೆಲೆ ಶನಿವಾರದಿಂದಲೇ ಲೀಟರ್‌ಗೆ 3 ರಿಂದ 4 ರೂ. ಏರಿಕೆಯಾಗಿದೆ.

ಖಾದ್ಯ ತೈಲಗಳಾದ ಸನ್ ಫ್ಲವರ್, ಫಾಮ್ ಆಯಿಲ್, ಕಡಲೆ ಎಣ್ಣೆ, ಅರಳೆಣ್ಣೆ, ಸಾಸಿವೆ ಎಣ್ಣೆ ಹಾಗೂ ದೀಪದ ಎಣ್ಣೆಯಲ್ಲಿಯೂ ಏರಿಕೆಯಾಗಿದೆ. ಒಂದು ವೇಳೆ ಯುದ್ಧ ಇದೇ ರೀತಿ ಮುಂದುವರೆದರೆ ಲೀಟರ್‌ಗೆ 10 ರಿಂದ 30 ರೂ.ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಬೆಲೆ ಏರಿಕೆ:
ಬ್ರ್ಯಾಂಡ್‌      ಎಷ್ಟಿತ್ತು?     ಎಷ್ಟಾಗಿದೆ?
*ಸನ್ ಫ್ಲವರ್ ಆಯಿಲ್ 139ರೂ. 141ರೂ.
*ಗೋಲ್ಡ್ ವಿನ್ನರ್ 142ರೂ. 145ರೂ.
*ರುಚಿಗೋಲ್ಡ್ 110ರೂ. 112ರೂ.
*ಜೆಮಿನಿ 147ರೂ. 150ರೂ.
*ಫ್ರೀಡಂ 137ರೂ. 141ರೂ.
*ದೀಪದ ಎಣ್ಣೆ 111ರೂ. 114ರೂ.

ಇನ್ನೂ ಇಸ್ರೇಲ್‌ನ ರಕ್ಷಣಾ ಸಚಿವಾಲಯದ ಪ್ರಕಾರ, ಇರಾನ್​ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ನಡೆಸಿದ ದಾಳಿಯಲ್ಲಿ ಕನಿಷ್ಠ 10 ಇಸ್ರೇಲಿಗರು ಸಾವನ್ನಪ್ಪಿದ್ದಾರೆ.

ಒಟ್ಟು ಸಾವಿನ ಸಂಖ್ಯೆ 13ಕ್ಕೆ ತಲುಪಿದೆ ಎಂದು ತಿಳಿಸಿದೆ. ಟೆಲ್ ಅವೀವ್ ಬಳಿಯ ವಸತಿ ಸಮುಚ್ಚಯಕ್ಕೆ ಕ್ಷಿಪಣಿ ಅಪ್ಪಳಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. 180 ಜನರು ಗಾಯಗೊಂಡಿದ್ದಾರೆ. 7 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿ ಓಡಾಟಕ್ಕೆ ಬ್ರೇಕ್ : ಅಪ್ಪಿತಪ್ಪಿಯೂ ರಸ್ತೆಗಿಳಿದ್ರೆ ಸೀಜ್ ಆಗತ್ತೆ ವಾಹನ!

Leave a Reply

Your email address will not be published. Required fields are marked *