ಬೆಂಗಳೂರು: ಬೆಂಗಳೂರಿನಲ್ಲಿ ಕನ್ನಡಿಗರ ಅವಹೇಳನ ಪ್ರಕರಣಗಳು ದಿನಕಳೆದಂತೆ ಹೆಚ್ಚಾಗುತ್ತಿವೆ. ಇದಕ್ಕೆ ಮತ್ತೊಂದು ಸಾಕ್ಷಿಯೆಂಬಂತೆ ಕೋರಮಂಗಲದಲ್ಲಿ ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸಿರುವ ಘಟನೆ ನಡೆದಿದೆ.
ಕೋರಮಂಗಲದ ನೆಕ್ಸಸ್ ಮಾಲ್ ಬಳಿ ಇರುವ ಕೇರಳ ಮೂಲದ ನೌಶಾದ್ ಮಾಲೀಕತ್ವದ ಜಿಎಸ್ ಸೂಟ್ಸ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಹೋಟಲ್ ಗೆ ಅಳವಡಿಸಿದ್ದ ಡಿಸ್ ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರು ತಲೆ ಹಿಡುಕರು ಎಂದು ಬರೆಯಲಾಗಿತ್ತು. ಇದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಹೋಟೆಲ್ ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಹೋಟೆಲ್ ಗೆ ಅಳವಡಿಸಲಾಗಿದ್ದ ಡಿಸ್ ಪ್ಲೇ ಬೋರ್ಡ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಹೋಟೆಲ್ ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಸದ್ಯ ಹೋಟೆಲ್ ಮಾಲೀಕ ಕೇರಳದಲ್ಲಿದ್ದು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿ ಈ ರೀತಿ ಮಾಡಿದ್ದಾರೆ ಎಂದು ವಾದಿಸಿದ್ದಾರೆ.
ಈ ಹೋಟೆಲ್ ಗೆ ಬೀಗ ಜಡೆದು, ತಕ್ಷಣ ಹೋಟಲ್ ಮಾಲೀಕನನ್ನ ಅರೆಸ್ಟ್ ಮಾಡಿ @BlrCityPolice @DgpKarnataka
ಅನ್ನ ಕೊಡೊ ಭೂಮಿಗೆ ಇವರ ನಿಯತ್ತು ನೋಡಿ, 6 ಕೋಟಿ ಕನ್ನಡಿಗರನ್ನ ಬೈದವ್ನೆ ಇವ್ನು ಸುಮ್ನೆ ಬಿಡ್ಬೇಡಿ pic.twitter.com/urrAgodPFZ
— ರಾಹುಲ್ ಪಾಟೀಲ್ (@glb_kannadiga__) May 17, 2025
ಮದ್ಯ ಲೈಸೆನ್ಸ್ ನವೀಕರಣ ಶುಲ್ಕ ಶೇ. 100ರಷ್ಟು ಹೆಚ್ಚಳ; 27 ಲಕ್ಷದಿಂದ 54 ಲಕ್ಷಕ್ಕೆ, ಜುಲೈ 1ರಿಂದ ಜಾರಿ?


