ಬೆಂಗಳೂರು: ಬಿಬಿಎಂಪಿಗೆ ಎಕ್ಸ್ ಖಾತೆಯಲ್ಲಿ ದೂರು ನೀಡಿದರೆ, ಅಂತಹವರನ್ನು ಬ್ಲಾಕ್ ಮಾಡ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಾಲಿಕೆಯ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪಾಲಿಕೆಗೆ ನಾಚಿಕೆಯಾಗಬೇಕು ಅಂತ ಬೈಯುತ್ತಿದ್ದಾರೆ.
ಬಿಬಿಎಂಪಿಗೆ ಮಾನ ಮರ್ಯಾದೆ ಯಾವ್ದು ಇಲ್ಲ ಅನ್ಸುತ್ತೆ. ಸಾರ್ವಜನಿಕರು ಎಕ್ಸ್ ಖಾತೆಯಲ್ಲಿ ಬಿಬಿಎಂಪಿಗೆ ದೂರು ನೀಡಿದ್ರೆ, ದೂರು ಕೊಟ್ಟವ್ರ ಖಾತೆಯನ್ನೆ ಬ್ಲಾಕ್ ಮಾಡಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಬಿಎಂಪಿಯ ಐಟಿ ಸೆಲ್ ವಿಭಾಗದ ಈ ನಡೆಗೆ ಬೆಂಗಳೂರಿನ ನಾಗರಿಕರು ನಿಗಿನಿಗಿ ಅಂತಿದ್ದಾರೆ.
ಬೆಂಗಳೂರಿಗರು ಯಾವ್ದೇ ದೂರುಗಳಿದ್ರೆ ಪಾಲಿಕೆಯ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ, ಪಾಲಿಕೆಯ ಗಮನಕ್ಕೆ ತರ್ತಾರೆ. ಹೀಗೆ ರಸ್ತೆ ಸರಿ ಮಾಡಿ ಕೊಡಿ ಅಂತ ನೀತು ಅನ್ನೋ ಮಹಿಳೆ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಬಿಎಂಪಿ ಎಕ್ಸ್ ಖಾತೆ ಯಾವುದೇ ಪ್ರತಿಕ್ರಿಯೆ ನೀಡದೇ, ನೀತು ಖಾತೆಯನ್ನ ಬ್ಲಾಕ್ ಮಾಡಿದೆ. ಇದು ದೂರು ಕೊಟ್ಟರೆ ನಿಮ್ಮನ್ನ ಬ್ಲಾಕ್ ಮಾಡುತ್ತೇವೆ ಅನ್ನೋ ಮನಸ್ಥಿತಿಯನ್ನ ತೋರಿಸಿದೆ.
ಕೇವಲ ನೀತು ಖಾತೆ ಮಾತ್ರವಲ್ಲ. ಬೇರೆಯವರ ಖಾತೆಯನ್ನೂ ಬ್ಲಾಕ್ ಮಾಡಲಾಗಿದೆ. ಯಾವುದೇ ದೂರುಗಳಿದ್ದರೇ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ತನ್ನಿ ಎಂದು ಡಿಸಿಎಂ, ಬಿಬಿಎಂಪಿ ಕಮಿಷನರ್ ಹೇಳುತ್ತಾರೆ. ಆದರೆ ಇದೀಗಾ ಎಕ್ಸ್ ಖಾತೆ ಮೂಲಕ ಗಮನಕ್ಕೆ ತಂದವರ ಖಾತೆಯನ್ನ ಬ್ಲಾಕ್ ಮಾಡ್ತಿರೋ ಬಿಬಿಎಂಪಿ ನಡೆಗೆ ವ್ಯಾಪಾಕ ಆಕ್ರೋಶಗಳು ವ್ಯಕ್ತವಾಗ್ತಿವೆ. ಬಿಬಿಎಂಪಿ ಐಟಿ ಸೆಲ್ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಏನು ಸಮಜಾಯಿಷಿ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.
ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ನಡೆದಿದ್ದೇಕೆ? ಇಲ್ಲಿದೆ ಶಾಕಿಂಗ್ ಮಾಹಿತಿ


