BBMP
Loading ...

RCB

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ಗೇರಿದೆ. ಈ ಮೂಲಕ ಕಪ್ ಗೆಲ್ಲೋ ಕನಸಿಗೆ ಇನ್ನೊಂದು ಹೆಜ್ಜೆ ಬಾಕಿ ಇದೆ.

ಈ ಬಾರಿ ಟ್ರೋಫಿ ನಮ್ದೇ ಅನ್ನೋ ಮಹಾ ಸಂದೇಶ ರವಾನಿಸಲು ಮುಂದಾಗಿರುವ ಈ ಸಂದರ್ಭದಲ್ಲಿ ಓರ್ವ ಅಭಿಮಾನಿ ಆರ್‌ಸಿಬಿ ಗೆದ್ದರೆ ಆ ದಿನವನ್ನು ‘ಆರ್​​ಸಿಬಿ ಫ್ಯಾನ್ಸ್​​​ ಹಬ್ಬ’ ಎಂದು ಘೋಷಿಸಿ ಒಂದು ದಿನ ರಜೆ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಆರ್‌ಸಿಬಿ ಅಭಿಮಾನಿಯಾಗಿದ್ದು, ಆರ್‌ಸಿಬಿ ಕಪ್ಪು ಗೆದ್ದ ದಿನ ಪ್ರತಿ ವರ್ಷ ರಜೆ ನೀಡಬೇಕು. ಎಲ್ಲಾ ಜಿಲ್ಲೆಯಲ್ಲೂ ಆಚರಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಆರ್‌ಸಿಬಿ ಫೈನಲ್‌ ತಲಪುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಅಭಿಮಾನಿಯ ಮನವಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಪಿಎಲ್​​ ಪಂದ್ಯದಲ್ಲಿ ಒಂದು ವೇಳೆ ಆರ್​ಸಿಬಿ ತಂಡ ಫೈನಲ್​ಗೆ ಹೋಗಿ ಕಪ್​ ಗೆದ್ದರೇ ಆ ದಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್​ಸಿಬಿ ಫ್ಯಾನ್ಸ್​ ಹಬ್ಬ’ ಅಂತ ಅಧೀಕೃತವಾಗಿ ಘೋಷಿಸಿ ಪ್ರತಿವರ್ಷ ಸರ್ಕಾರ ರಜೆ ನೀಡಬೇಕು.

ಏಕೆಂದರೆ ಆರ್​ಸಿಬಿ ಫ್ಯಾನ್ಸ್​ಗಳ ಬಹುದಿನದ ಕನಸು ನನಸಾಗಲಿದ್ದು, ಕರ್ನಾಟಕ ರಾಜ್ಯೋತ್ಸವನ್ನು ಪ್ರತಿ ಜಿಲ್ಲೆಯಲ್ಲಿ ಯಾವ ರೀತಿ ಆಚರಿಸುತ್ತೇವೋ ಅದೇ ರೀತಿ ಆರ್​ಸಿಬಿ ಫ್ಯಾನ್ಸ್​​​ ಹಬ್ಬ ಆಚರಿಸುವುದಕ್ಕೆ ಕರ್ನಾಟಕ ಸರ್ಕಾರ ಅನುವು ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಕೆಎಸ್​ಆರ್​ಟಿಸಿ ಹೊಸ ಟೂರ್‌ ಪ್ಯಾಕೇಜ್‌: 3 ಪ್ರಮುಖ ಧಾರ್ಮಿಕ ಸ್ಥಳಗಳ ದರ್ಶನ, ಟಿಕೆಟ್ ದರವೆಷ್ಟು ಗೊತ್ತಾ?

Leave a Reply

Your email address will not be published. Required fields are marked *