BBMP
Loading ...

ದರ್ಶನ್ ತನ್ನ ಲೀವ್‌ಇನ್ ಗೆಳತಿ ಪವಿತ್ರಾಳಿಗೆ ಮುದ್ದು ಎನ್ನದೇ ಮೆಸೇಜ್ ಶುರು ಮಾಡ್ತಾ ಇರ್ಲಿಲ್ವಂತೆ. ರಿಯಲ್ ಗಂಡ ಹೆಂಡತಿ ನಡುವೆ ನಡೆಯೋ ಸರಸ, ವಿರಸದ ಮಾತುಗಳೆಲ್ಲಾ ದರ್ಶನ್ ಮತ್ತು ಪವಿತ್ರಾ ನಡುವೆ ನಡೀತಿದ್ದವು. ಸುಬ್ಬ ಮತ್ತು ಮುದ್ದು ಎಂಡ್‌ಲೆಸ್ ಚಾಟಿಂಗ್‌ಗೆ ವೇದಿಕೆ ಆಗ್ತಿದ್ದದ್ದು ವಾಟ್ಸಾಪ್ ಅನ್ನೋ ಮಾಹಿತಿ ಸಿಕ್ಕಿದೆ.

ಹಾಗಾದ್ರೆ, ದರ್ಶನ್ ಮತ್ತು ಪವಿತ್ರಾ ಗೌಡ ಚಾಟಿಂಗ್​​ನಲ್ಲಿ ಇರೋದೇನು? ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗ್ತಿರೋ ಆ ಚಾಟಿಂಗ್‌ನಲ್ಲಿ ಬಯಲಾಗಿರೋ ವಿಚಿತ್ರ ಸಂಗತಿಗಳು ಯಾವುವು? ನಿಜಕ್ಕೂ ದರ್ಶನ್‌ ಮತ್ತು ಪವಿತ್ರಾ ಗೌಡ ನಡುವೆ ಪ್ರೀತಿಯಿತ್ತಾ? ಅಥವಾ ಯಾವುದೋ ಒತ್ತಡಕ್ಕೆ ಬಿದ್ದು ದರ್ಶನ್ ಪವಿತ್ರಾಳ ಪ್ರೀತಿ ಅರಸಿದ್ರಾ? ಇಲ್ಲಾ ದರ್ಶನ್‌ ಪವಿತ್ರಾಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡ್ತಿದ್ರಾ? ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡ ಪತ್ನಿ ಇರುವಾಗ ಪವಿತ್ರಾಳನ್ನು ಪತ್ನಿ ಅಂತ ಕರೆಯುತ್ತಿದ್ದರಾ ದರ್ಶನ್? ಈ ಎಲ್ಲಾ ಪ್ರಶ್ನೆಗಳ ಶಾಕಿಂಗ್ ಅಂಡ್ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ.

ಹೆಂಡ್ತಿ.. ಮುದ್ದು ಹೆಂಡ್ತಿ.. ಇದು ದರ್ಶನ್ ತನ್ನ ಗೆಳತಿ ಪವಿತ್ರಾಳಿಗೆ ಮೆಸೇಜ್‌ನಲ್ಲಿ ಕರೆಯುತ್ತಿದ್ದ ರೀತಿ ಅನ್ನೋ ಸಂಗತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರೋ ಮಾಹಿತಿಯಿದೆ. ಅಚ್ಚರಿ ಅಂದ್ರೆ, ತಾನು ಬಂದ್ರೆ ಸೆಲ್ಫಿ ತಗೊಳ್ಳೋಕೆ ಹುಡುಗೀರೆಲ್ಲಾ ಕ್ಯೂ ನಿಲ್ತಿದ್ದ ದರ್ಶನ್‌ಗೆ ಪವಿತ್ರಾಳ ಮೇಲೆ ಅದೆಂಥಾ ಪ್ರೀತಿ, ಮೋಹವಿತ್ತೋ ಏನೋ.. ಒಂದು ದಿನವೂ ಮಿಸ್ ಮಾಡದಂತೆ ಗುಡ್‌ ಮಾರ್ನಿಂಗ್ ಹಾಕ್ತಿದ್ದರು ಎಂಬ ಸಂಗತಿ ತಿಳಿದು ಬಂದಿದೆ. ಅಷ್ಟಕ್ಕೂ.. ದರ್ಶನ್ ಮತ್ತು ಪವಿತ್ರಾಳ ನಡುವೆ ಚಾಟಿಂಗ್ ಕಹಾನಿಯ ಫಸ್ಟ್ ಸೀನ್ ತೆರೆದುಕೊಳ್ಳೋದು ಈ ಮಿಸ್‌ಯೂ ಮೆಸೇಜ್‌ನಿಂದ.

ಪವಿತ್ರ ಗೌಡ: ‘ಮಿಸ್ ಯೂ’
ದರ್ಶನ್: ಲವ್ ಯೂ ಮುದ್ದು ಹೆಂಡ್ತಿ
ಪವಿತ್ರ ಗೌಡ: ಹಾರ್ಟ್ ಇಮೋಜಿ
ಪವಿತ್ರ ಗೌಡ: ವಿತ್ ಔಟ್ ಯೂ ಐ ಆ್ಯಮ್ ಝೀರೋ
ಪವಿತ್ರ ಗೌಡ: ಯೂ ಆರ್​ ದಿ ಮೋಸ್ಟ್​ ಇಂಪಾರ್ಟೆಂಟ್​ ಇನ್​ ಮೈ ಲೈಫ್​ ಸುಬ್ಬ
ಪವಿತ್ರ ಗೌಡ: ಪ್ಲೀಸ್​ ಟೇಕ್​ ಕೇರ್​ ಆಫ್​ ಯುವರ್​ ಸೆಲ್ಪ್​ , ಐ ವಿಲ್​ ಆಲ್​ವೇಸ್​ ಚೂಸ್​ ಯು ಇನ್​ ಎನಿ ಲೈಫ್​ ಟೈಮ್​ ಓವರ್​ ಎನಿವನ್​ ಎಸ್​ ಇನ್​ ದ ವರ್ಡ್​
ಪವಿತ್ರ ಗೌಡ: ಐ ಮೈಟ್​ ನಾಟ್​ ಬಿ ಎವರಿಥಿಂಗ್​ ಯು ವಾಂಟ್​ ಬಟ್​ ಐ ಆಮ್ಯ್​​ ಆಲ್​ವೇಸ್​ ದೇರ್​ ಫಾರ್​ ಯು
ಪವಿತ್ರ ಗೌಡ: ನೋ ಮ್ಯಾಟರ್​ ಚಾಲೆಂಜ್​ದ ಹೆಡ್​
ಪವಿತ್ರ ಗೌಡ: ಮೋಸ್ಟ್​ ಇಂಪಾರ್ಟೆಂಟ್​ ಪರ್ಸನ್​ ಇನ್​ ಮೈ ಲೈಫ್ , ಌಂಡ್​ ಹೋಪ್​ ಯು ನೋ ದಟ್​

ಹೀಗೆ, ಪವಿತ್ರಾ ಗೌಡ ವಾಟ್ಸಾಪ್‌ನಲ್ಲಿ ದರ್ಶನ್‌ಗೆ ಮಿಸ್‌ಯೂ. ಮಿಸ್‌ಯೂ ಅಂತಾ ಅದೆಷ್ಟು ಬಾರಿ ಮೆಸೇಜ್ ಹಾಕಿದ್ದಳೋ ಗೊತ್ತಿಲ್ಲ. ಪೊಲೀಸರ ತನಿಖೆಯಲ್ಲಿ ಕೆಲವು ಮೆಸೇಜ್‌ಗಳಷ್ಟೇ ಸಿಕ್ಕಿವೆ ಎನ್ನಲಾಗಿದೆ. ಆ ಪೈಕಿ ಒಂದು ಮೆಸೇಜ್‌ನಲ್ಲಿ ಪವಿತ್ರಾ ಮಿಸ್ ಯೂ ಅಂತಾ ಮೆಸೇಜ್ ಆರಂಭಿಸ್ತಾಳೆ. ಆ ಕಡೆಯಿಂದ ದರ್ಶನ್ ಏನ್ ಹೇಳ್ತಾರೆ ಗೊತ್ತೇನು? ‘ಲವ್‌ಯು ಮುದ್ದು ಹೆಂಡ್ತಿ.. ಲವ್ ಯು’ ಅಂತಾ

ಅಲ್ಲಿಗೆ, ದರ್ಶನ್‌ ಪವಿತ್ರಾಳನ್ನ ಮಾನಸ ಪತ್ನಿಯಾಗಿ ಮಾಡ್ಕೊಂಡಿದ್ರಾ? ಯಾಕಂದ್ರೆ, ಇಬ್ಬರ ನಡುವೆ ಮದುವೆ ಆಗಿರೋ ಬಗ್ಗೆ ಸುದ್ದಿಯಾಗಿಲ್ಲ. ದರ್ಶನ್ ಪವಿತ್ರಾ ಸಬ್‌ರಿಜಿಸ್ಟ್ರಾರ್ ಆಫೀಸ್‌ನಲ್ಲಿ ಮದುವೆ ಆಗಿದ್ದಾರಾ ಅಂದ್ರೆ ಅದೂ ಕೂಡ ಬಹಿರಂಗವಾಗಿಲ್ಲ. ಪೊಲೀಸರ ತನಿಖೆ ವೇಳೆ ದರ್ಶನ್ ಪವಿತ್ರಾ ತನ್ನ ಲೀವ್ ಇನ್‌ ಗೆಳತಿ ಅಂತಾ ಹೇಳ್ಕೊಂಡಿದ್ದಾರಂತೆ.

ಮಿಸ್‌ ಯೂ ಅಂತಾ ಮೆಸೇಜ್‌ ನೋಡಿದಕೂಡ್ಲೇ ದರ್ಶನ್ ಲವ್ ಯೂ ಮುದ್ದು ಹೆಂಡ್ತಿ ಅಂತಾ ಮೆಸೇಜ್ ಮಾಡಿರುತ್ತಾರೆ. ಅದಾದ್ಮೇಲೆ ಪವಿತ್ರಾ ಪ್ರೀತಿ ಎಮೋಜಿ ರೂಪದಲ್ಲಿ ಉಕ್ಕಿ ಬಂದಿರುತ್ತೆ ಅನ್ನೋದು ಮಾಹಿತಿ ಸಿಕ್ಕಿದೆ.

ದರ್ಶನ್‌ಗೆ ಹಾರ್ಟ್ ಇಮೋಜಿ ಕಳುಹಿಸಿದ್ದ ಪವಿತ್ರಾ ಸ್ವಲ್ಪ ಎಮೋಷನಲ್ ಆಗಿರೋದು ಮೆಸೇಜ್‌ನಲ್ಲಿ ಕಂಡು ಬರುತ್ತೆ. ನೀನಿಲ್ಲದೆ ನಾನು ಶೂನ್ಯ. ಸುಬ್ಬ, ನೀನು ನನ್ನ ಜೀವನದ ಅತ್ಯಂತ ಮುಖ್ಯ ವ್ಯಕ್ತಿ ಕಣೋ ಎಂಬೆಲ್ಲಾ ಭಾವನಾತ್ಮಕ ಮೆಸೇಜ್‌ಗಳನ್ನು ಪವಿತ್ರಾಗೌಡ ದರ್ಶನ್‌ಗೆ ಸೆಂಡ್ ಮಾಡಿರೋದು ತಿಳಿದುಬಂದಿದೆ. ಇದೆಲ್ಲಕ್ಕೂ ಇಂಟ್ರೆಸ್ಟಿಂಗ್ ಮತ್ತು ಕಾಕತಾಳೀಯವಾದ ಮೆಸೇಜ್‌ ಒಂದು ಪವಿತ್ರಾ ಗೌಡ ಮಾಡಿದ್ದಾರೆ. ನಾನು ನಿನಗೆ ಎಲ್ಲವೂ ಆಗಿಲ್ಲದೇ ಇರಬಹುದು ಸುಬ್ಬ.. ಆದ್ರೆ, ನೀನೆಲ್ಲೇ ಇದ್ರೂ ನಾನು ಅಲ್ಲಿರ್ತೀನಿ, ಎಂಥಾ ಸನ್ನಿವೇಶದಲ್ಲಿದ್ರೂ ನಾನು ಬಂದೇ ಬರ್ತೀನಿ ಅಂತಾ ಪವಿತ್ರಾ ಮೆಸೇಜ್ ಮಾಡಿದ್ದಾಳೆ. ನೋಡಿ, ದರ್ಶನ್ ಜೈಲಿಗೆ ಹೋಗಿದ್ರೆ ಪವಿತ್ರಾ ಕೂಡ ಜೈಲು ಸೇರಿದ್ದಾಳೆ. ಇದಲ್ವಾ ನಿಜವಾದ ಪ್ರೀತಿ ಅಂದ್ರೆ.

ಪವಿತ್ರಾ-ದರ್ಶನ್ ಚಾಟಿಂಗ್ ಸ್ಟೋರಿಯಲ್ಲಿ ಟ್ವಿಸ್ಟ್ ಒಂದಿದೆ. ಅದೇನಂದ್ರೆ, ಸುಬ್ಬ.. ಸುಬ್ಬ.. ನಿನ್ನ ಬಿಟ್ಟಿರೋಲ್ಲ ಕಣೋ ಸುಬ್ಬ ಎನ್ನುತ್ತಿದ್ದ ಪವಿತ್ರಾ.. ಒಮ್ಮೊಮ್ಮೆ ಹೇಳದೆ ಕೇಳದೆ ದರ್ಶನ್ ವಾಟ್ಸಾಪ್‌ನ ಬ್ಲಾಕ್ ಮಾಡ್ತಿದ್ದಳು ಅನ್ನೋದು. ಪೊಲೀಸ್ ತನಿಖೆಯಲ್ಲಿ ಬಯಲಾಗಿರೋ ಚಾಟಿಂಗ್ ಹಿಸ್ಟರಿ ಪ್ರಕಾರ ಕೆಲವು ಬಾರಿ ದರ್ಶನ್‌ ನಂಬರ್‌ ಅನ್ನು ಪವಿತ್ರಾ ಗೌಡ ಬ್ಲಾಕ್ ಮಾಡಿರೋದು ಗೊತ್ತಾಗಿದೆ. ವಿಚಿತ್ರ ಅಂದ್ರೆ, ಪವಿತ್ರಾ ಬ್ಲಾಕ್ ಮಾಡಿದ ಟೈಮಲ್ಲೂ ದರ್ಶನ್ ಮುಗಿಬಿದ್ದು ಮೆಸೇಜ್ ಮಾಡ್ತಿದ್ರಂತೆ.

ಇನ್ಮುಂದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದರೆ ಭಾರೀ ದಂಡ, 10 ವರ್ಷ ಜೈಲು ಶಿಕ್ಷೆ: ಮಸೂದೆಗೆ ರಾಜ್ಯಪಾಲರ ಅಂಕಿತ

Leave a Reply

Your email address will not be published. Required fields are marked *