BBMP
Loading ...

ಬೆಂಗಳೂರು: ಬಿಬಿಎಂಪಿ ವತಿಯಿಂದ ಫೇಸ್‌ಲೆಸ್‌, ಸಂಪರ್ಕರಹಿತ ಇ ಖಾತಾ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯನ್ನು ಪ್ರಾರಂಭಲಾಗುತ್ತಿದೆ. ಇದರ ಭಾಗವಾಗಿ ಬಿಬಿಎಂಪಿ ಸಿಬ್ಬಂದಿಯೇ ಮನೆಗಳಿಗೆ ಭೇಟಿ ನೀಡಿ ಆಸ್ತಿಯ ಜಿಪಿಎಸ್‌ ಸಂಗ್ರಹ ಮಾಡಲಿದ್ದಾರೆ.

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಮಾಹಿತಿ ನೀಡಿದ್ದು, ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವ ಮತ್ತು ನಿರ್ದೇಶನದಲ್ಲಿ ಬಿಬಿಎಂಪಿಯು ಫೇಸ್‌ಲೆಸ್‌, ಸಂಪರ್ಕರಹಿತ ಪ್ರಾರಂಭಿಸುತ್ತಿದೆ. ಮತ್ತು ಆನ್‌ಲೈನ್ ಡಿಜಿಟಲ್ – ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದೆ. ಬಿಬಿಎಂಪಿಯು ರಿಜಿಸ್ಟರ್‌ಗಳಲ್ಲಿನ ಎಲ್ಲಾ 21 ಲಕ್ಷ ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ರೋಲ್-ಔಟ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಸಿಬ್ಬಂದಿಯು ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಮ್ಮ ಆಸ್ತಿಯ ಜಿ.ಪಿ.ಎಸ್. (GPS coordinates) ಮಾಹಿತಿಯನ್ನು ಸೆರೆ ಹಿಡಿಯುತ್ತಾರೆ. ಪಾಲಿಕೆಯ ಇ ಖಾತಾ ಪಡೆಯಲು ಪ್ರತಿ ಆಸ್ತಿಯ ಜಿ.ಪಿ.ಎಸ್ ಕಡ್ಡಾಯವಾಗಿದೆ ಎಂದು ಮುಖ್ಯ ಆಯುಕ್ತರು ಮಾಹಿತಿ ನೀಡಿದರು.

ಪ್ರಾಪರ್ಟಿ ಜಿಪಿಎಸ್‌ ನಿಮ್ಮ ಆಸ್ತಿಯ ವಿಶಿಷ್ಟ ಗುರುತು ಆಗಿರುತ್ತದೆ. ಎಲ್ಲಾ ಬಿಬಿಎಂಪಿಯ ಇ – ಖಾತಾ ಸೇವೆಗಳ ಫೇಸ್‌ಲೆಸ್, ಸಂಪರ್ಕರಹಿತ ಮತ್ತು ಆನ್‌ಲೈನ್ ವಿತರಣೆಗೆ ಇದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ, ನಿಮಗೆ ಉತ್ತಮ ಸೇವೆ ನೀಡಲು ಬಿಬಿಎಂಪಿಯನ್ನು ಬಲಪಡಿಸಲು ನಿಮ್ಮ ಸಂಪೂರ್ಣ ಸಹಕಾರವನ್ನು ನೀಡುವಂತೆ ವಿನಂತಿಸುತ್ತೇನೆ. ಬಿಬಿಎಂಪಿಯು ಸದಾ ನಿಮ್ಮ ಸೇವೆಯಲ್ಲಿ ಹಾಗೂ ಉತ್ತಮ ಗುಣಮಟ್ಟದ ನಗರವನ್ನು ರಚಿಸಲು ಸಹಕರಿಸಿ ” ಎಂದು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *