BBMP
Loading ...

Sub Regi

Greater Bengaluru News9: ಈಗಾಗಲೇ ಬೆಲೆ ಏರಿಕೆಯಿಂದ ಹೈರಾಣಾಗಿರೋ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಬಿಗ್ ಶಾಕ್ ನೀಡೋಕೆ ರೆಡಿಯಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕರೆಂಟ್ ಬಿಲ್ ಮತ್ತು ವಾಟರ್ ಬಿಲ್ ಏರಿಕೆಯಿಂದ ಕಷ್ಟ ಪಡ್ತಿರೋ ಈ ಟೈಮ್‌ನಲ್ಲಿ, ಸ್ವಂತ ಮನೆಯ ಕನಸು ಕಾಣ್ತಿರೋರಿಗೆ ಇದು ನಿಜಕ್ಕೂ ಬ್ಯಾಡ್ ನ್ಯೂಸ್. ಹೌದು, ರಾಜ್ಯದಾದ್ಯಂತ ಸೈಟ್, ಮನೆ ಮತ್ತು ಫ್ಲ್ಯಾಟ್‌ಗಳ ಸರ್ಕಾರಿ ಮಾರುಕಟ್ಟೆ ಮೌಲ್ಯ ಅಂದ್ರೆ ‘ಗೈಡೆನ್ಸ್ ವ್ಯಾಲ್ಯೂ’ ಶೀಘ್ರದಲ್ಲೇ ಗಗನಕ್ಕೇರಲಿದೆ.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ಬರೋ ಏಪ್ರಿಲ್ ತಿಂಗಳಿಂದ ಗೈಡ್‌ಲೈನ್ ವ್ಯಾಲ್ಯೂ ಅಂದ್ರೆ ಮೌಲ್ಯಮಾಪನ ದರ ಬರೋಬ್ಬರಿ ಶೇ.15 ರಿಂದ ಶೇ.30 ರಷ್ಟು ಹೆಚ್ಚಳವಾಗೋ ಸಾಧ್ಯತೆ ಇದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈಗಾಗ್ಲೇ ಈ ಕುರಿತು ಪ್ರಕ್ರಿಯೆ ಶುರು ಮಾಡಿದ್ದು, ಕೃಷಿ ಮತ್ತು ಕೃಷಿಯೇತರ ಲ್ಯಾಂಡ್​​ಗಳ ಸರ್ಕಾರಿ ಮೌಲ್ಯ ಕೂಡ ಏರಿಕೆಯಾಗಲಿದೆ. ಇದರಿಂದಾಗಿ ನೀವು ಸೈಟ್ ಅಥವಾ ಲ್ಯಾಂಡ್ ಖರೀದಿ ಮಾಡ್ಬೇಕು ಅನ್ಕೊಂಡಿದ್ರೆ, ಇನ್ಮುಂದೆ ನಿಮ್ಮ ಜೇಬಿಗೆ ಇನ್ನು ಹೆಚ್ಚಿನ ಕತ್ತರಿ ಬೀಳೋದು ಗ್ಯಾರಂಟಿ.

ಸರ್ಕಾರ 2019 ರಲ್ಲಿ ಶೇ.15 ರಷ್ಟು ಮತ್ತು 2023 ರಲ್ಲಿ ಶೇ.12 ರಿಂದ 15 ರಷ್ಟು ಗೈಡ್‌ಲೈನ್ ವ್ಯಾಲ್ಯೂ ಹೆಚ್ಚಳ ಮಾಡಿತ್ತು. ಆದ್ರೆ ಈಗ 2026 ರಲ್ಲಿ ಏಕಾಏಕಿ ಶೇ.30 ರಷ್ಟು ಹೆಚ್ಚಳ ಮಾಡೋಕೆ ಹೊರಟಿರೋದು ಮಧ್ಯಮ ವರ್ಗದ ಅಂದ್ರೆ ಮಿಡಲ್ ಕ್ಲಾಸ್ ಫ್ಯಾಮಿಲಿಗಳಿಗೆ ದೊಡ್ಡ ಆಘಾತ ಆಗಿದೆ. ಕಷ್ಟಪಟ್ಟು ಹಣ ಕೂಡಿಟ್ಟು ಒಂದು ಸಣ್ಣ ಸೈಟ್ ಅಥವಾ ಫ್ಲ್ಯಾಟ್ ತಗೋಬೇಕು ಅನ್ನೋ ಸಾಮಾನ್ಯ ಜನರ ಪ್ಲಾನಿಂಗ್ ಈಗ ಸ್ವಲ್ಪ ದುಬಾರಿ ಆಗೋ ಲಕ್ಷಣ ಕಾಣಿಸ್ತಿದೆ.

ಇನ್ನು ಈ ಗೈಡ್‌ಲೈನ್ ವ್ಯಾಲ್ಯೂ ಹೆಚ್ಚಳವಾದ್ರೆ ಅದರ ನೇರ ಇಂಪ್ಯಾಕ್ಟ್ ಮಾರುಕಟ್ಟೆ ಬೆಲೆಯ ಮೇಲೆ ಬೀರುತ್ತೆ. ಸರ್ಕಾರಿ ರೇಟ್ ಜಾಸ್ತಿಯಾದ ಕೂಡಲೇ ಸೈಟ್ ಮತ್ತು ಫ್ಲ್ಯಾಟ್‌ಗಳ ಮಾರ್ಕೆಟ್ ವ್ಯಾಲ್ಯೂ ಕೂಡ ಆಟೋಮ್ಯಾಟಿಕ್ ಆಗಿ ರೈಸ್ ಆಗುತ್ತೆ. ಇದರ ಜೊತೆಗೆ ಸ್ಟ್ಯಾಂಪ್ ಡ್ಯೂಟಿ, ರಿಜಿಸ್ಟ್ರೇಷನ್ ಫೀ ಮತ್ತು ಸರ್ಜ್ ಚಾರ್ಜ್ ಕೂಡ ಗಣನೀಯವಾಗಿ ಹೆಚ್ಚಾಗಲಿದೆ. ಪರಿಣಾಮವಾಗಿ ಮನೆ ಖರೀದಿಸುವವರು ಈಗ ಕಟ್ಟೋದಕ್ಕಿಂತ ದ್ವಿಗುಣ ಹಣವನ್ನ ಸ್ಟ್ಯಾಂಪ್ ಡ್ಯೂಟಿ ರೂಪದಲ್ಲಿ ಕಟ್ಟಬೇಕಾದ ಪರಿಸ್ಥಿತಿ ಬರಬಹುದು.

ಒಟ್ಟಿನಲ್ಲಿ ಒಂದು ಕಡೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇನ್ನೊಂದು ಕಡೆ ಈ ರೀತಿ ಟ್ಯಾಕ್ಸ್ ಮತ್ತು ಫೀಸ್ ಗಳ ಹೊರೆ , ಜನಸಾಮಾನ್ಯರ ಬದುಕು ಇನ್ನು ಮುಂದೆ ತುಂಬಾ ಟಫ್ ಆಗಲಿದೆ. ತಮಗೊಂದು ಸೂರು ಬೇಕು ಅನ್ನೋ ಸಾಮಾನ್ಯ ಜನರ ಕನಸು ಈ ನಿರ್ಧಾರದಿಂದಾಗಿ ಇನ್ನು ದೂರ ಸರಿಯುವ ಭೀತಿ ಎದುರಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *