ಹಾವೇರಿ: ರಾಜ್ಯದ ಸರಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಕಚೇರಿಯ 6 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದ್ದು, ವಸೂಲಾತಿಗೆ ಆಯಾ ಇಲಾಖೆ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಂವಹನ ನಡೆಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸುದ್ದಿಗಾರರಿಗೆ ತಿಳಿಸಿದರು.
ಇನ್ನು ರಾಜ್ಯದಲ್ಲಿ 2 ವರ್ಷಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಅಕ್ರಮ-ಸಕ್ರಮದಡಿ ಪಂಪ್‌ಸೆಟ್ ಸಂಪರ್ಕಕ್ಕೆ ಅರ್ಜಿಗಳು ಬಂದಿವೆ. ಅವುಗಳನ್ನು ಸಚಿವ ಸಂಪುಟದಲ್ಲಿ ಇಟ್ಟು ಅನುಮೋದನೆ ಅನಂತರ ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 2.50 ಲಕ್ಷ ಇಂತಹ ಅರ್ಜಿಗಳಿಗೆ ಸಂಪರ್ಕಕ್ಕೆ ಅನುಮತಿ ನೀಡಿದ್ದು ಇನ್ನೂ 2 ಲಕ್ಷ ಅರ್ಜಿಗಳಿವೆ ಎಂದರು.
ರೈತರಿಗೆ ಹೆಚ್ಚಿನ ವಿದ್ಯುತ್ ಅಗತ್ಯವಿದೆ. ಪ್ರಸ್ತುತ 19,500 ಮೆಗಾವಾಟ್ ವಿದ್ಯುತ್ ನಮ್ಮಲ್ಲಿ ಲಭ್ಯವಿದೆ. ಇನ್ನು ಮೂರು ಹಂತಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡಿ ಹಗಲು-ರಾತ್ರಿ ಪಾಳಿಯಲ್ಲಿ ವಿದ್ಯುತ್ ಸರಬರಾಜಿಗೆ ಮುಂದಾಗಿದ್ದೇವೆ. ಯಾವುದೇ ರೀತಿಯ ವಿದ್ಯುತ್ ಕೊರತೆ ಇಲ್ಲ ಎಂದರು.
ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ಭೂಸ್ವಾಧೀನ ತ್ವರಿತಗೊಳಿಸಲು ವಿಶೇಷ ಸಮಿತಿ ರಚಿಸಿದ ರಾಜ್ಯ ಸರ್ಕಾರ


