Greater Bengaluru news9: ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಇ-ಸ್ವತ್ತು 2.0 ಪೋರ್ಟಲ್ ಅನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆ 97 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳ ಪರಿವರ್ತನೆಗೆ ಸಹಾಯ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಅಧಿಕೃತವಾಗಿ ಪೋರ್ಟಲ್ ಉದ್ಘಾಟನೆ ನಡೆಸಿದ್ದಾರೆ.
ಇ-ಸ್ವತ್ತು ಎಂದರೇನು?
ಇ-ಸ್ವತ್ತು ಪೋರ್ಟಲ್ ಗ್ರಾಮೀಣ ಪ್ರದೇಶದ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ರಾಜ್ಯ ಸರ್ಕಾರದ ಪ್ರಯತ್ನವಾಗಿದೆ. ಆಸ್ತಿ ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚುತ್ತದೆ. ಅನಧಿಕೃತ ನಿವೇಶನಗಳ ನೋಂದಣಿಯನ್ನು ನಿಯಂತ್ರಿಸುತ್ತದೆ. ಫಾರ್ಮ್-9 ಮತ್ತು ಫಾರ್ಮ್-11 ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು. ಗ್ರಾಮ ಪಂಚಾಯತ್ ವ್ಯಾಪ್ತಿಯ 6.5 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಮೇಲೆ ಇಲಾಖೆಯು ಗಮನಹರಿಸುತ್ತದೆ.
ಇ-ಖಾತಾ ಪಡೆಯಲು ಆನ್‌ಲೈನ್ ಅರ್ಜಿ ಪ್ರಕ್ರಿಯೆ
ದಾಖಲೆ ಸಿದ್ಧತೆ:
- ಸೇಲ್ ಡೀಡ್, ಇತ್ತೀಚಿನ ಆಸ್ತಿ ತೆರಿಗೆ ರಶೀದಿ, ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (EC)
- ಭೂ ಸರ್ವೇ ದಾಖಲೆಗಳು, ಗುರುತು/ವಿಳಾಸ ಪುರಾವೆಗಳು (ಆಧಾರ್, ವೋಟರ್ ಐಡಿ, PAN), ಭಾವಚಿತ್ರಗಳು
ಅರ್ಜಿಸಲ್ಲಿಕೆ:
- ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ
- ಸಿಬ್ಬಂದಿ ಇ-ಸ್ವತ್ತು ಪೋರ್ಟಲ್‌ನಲ್ಲಿ ಆಸ್ತಿ ಮತ್ತು ಮಾಲೀಕರ ವಿವರಗಳನ್ನು ಭರ್ತಿ ಮಾಡುತ್ತಾರೆ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಾರೆ
ಅರ್ಜಿಪರಿಶೀಲನೆ:
- ಜಿಪಿ ಕಾರ್ಯದರ್ಶಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅರ್ಜಿಯನ್ನು ಪರಿಶೀಲಿಸುತ್ತಾರೆ
- ಪ್ರಕ್ರಿಯೆ 45 ದಿನಗಳೊಳಗೆ ಮುಕ್ತಾಯಗೊಳ್ಳಬಹುದು
ಇ-ಖಾತಾ ಡೌನ್‌ಲೋಡ್:
PDO ಡಿಜಿಟಲ್ ಸಹಿ ಮಾಡಿದ ನಂತರ, ಫಾರ್ಮ್-9 ಅಥವಾ ಫಾರ್ಮ್-11B PDF ಅನ್ನು ಪೋರ್ಟಲ್‌ನಲ್ಲಿ ಡೌನ್‌ಲೋಡ್ ಮಾಡಬಹುದು
ಯಾರು ಅರ್ಹರು?
- ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿಯೇತರ ಆಸ್ತಿಯ ಮಾಲೀಕರು
- ತಹಶೀಲ್ದಾರರಿಂದ ದೃಢೀಕರಿಸಿದ ನಕ್ಷೆ ಹೊಂದಿರಬೇಕು
- ಸರ್ಕಾರಿ ವಸತಿ ಯೋಜನೆ ಫಲಾನುಭವಿಗಳು (ಬಸವ ವಸತಿ, ಅಂಬೇಡ್ಕರ್, ಇಂದಿರಾ ಆವಾಸ್)
ಫಾರ್ಮ್ 11B ಪಡೆಯುವುದು ಹೇಗೆ?
- ಇ-ಸ್ವತ್ತು ಪೋರ್ಟಲ್ (https://eswathu.karnataka.gov.in/) ಗೆ ಭೇಟಿ
- “ನಿಮ್ಮ ಆಸ್ತಿಯ ಮಾಹಿತಿಯನ್ನು ಹುಡುಕಿ” ಆಯ್ಕೆಗೆ ಕ್ಲಿಕ್ ಮಾಡಿ Form 11B” ಆಯ್ಕೆ ಮಾಡಿ, ಜಿಲ್ಲೆ, ಬ್ಲಾಕ್, ಗ್ರಾಮ ಪಂಚಾಯತ್ ಮತ್ತು ಗ್ರಾಮ ಆಯ್ಕೆ ಮಾಡಿ
- ಆಸ್ತಿ ಐಡಿ ಅಥವಾ ಸರ್ವೇ ಸಂಖ್ಯೆ ನಮೂದಿಸಿ ಮತ್ತು “ಹುಡುಕಿ” ಕ್ಲಿಕ್ ಮಾಡಿ
- ಡಾಕ್ಯುಮೆಂಟ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ PDF ಡೌನ್‌ಲೋಡ್ (ಪಾಸ್‌ವರ್ಡ್ = ಆಸ್ತಿ ಐಡಿ)
ಸಹಾಯವಾಣಿ ಸಂಪರ್ಕ
- ಫೋನ್: 080-22032754, 080-22370281, 080-22032130
- ಇಮೇಲ್: eswathuhelpdesk@gmail.com


