BBMP
Loading ...

Khata Transform

Greater Bengaluru News9 : ಸಿಲಿಕಾನ್‌ ಸಿಟಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ದೀಪಾವಳಿ ಗಿಫ್ಟ್‌ ಕೊಡ್ತಾ ಇದೆ. 1,200 ಚದರ ಅಡಿವರೆಗಿನ ನಿವೇಶನದಲ್ಲಿ ನಿರ್ಮಿಸಿದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಿದ್ರೆ, ಮತ್ತೊಂದೆಡೆ ‘ಬಿ-ಖಾತಾ’ (B Khata) ಆಸ್ತಿಗಳನ್ನು ‘ಎ-ಖಾತಾ’ಗೆ (A Khata) ಪರಿವರ್ತಿಸುವ ಆನ್‌ಲೈನ್‌ ಪೋರ್ಟಲ್‌ಗೆ ಇಂದು ಚಾಲನೆ ನೀಡುತ್ತಿದೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ‘ಬಿ – ಖಾತೆ’ಯಿಂದ ‘ಎ – ಖಾತೆ’ಗೆ ಪರಿವರ್ತಿಸುವ ಆನ್‌ಲೈನ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿರುವ ಅಂದಾಜು 6 ಲಕ್ಷಕ್ಕೂ ಅಧಿಕ ‘ಬಿ – ಖಾತೆ’ದಾರರು ತಮ್ಮ ಆಸ್ತಿಗಳಿಗೆ ‘ಎ – ಖಾತೆ’ ಪಡೆಯಲು ದಾರಿ ಸುಗಮವಾಗಿದೆ. ಇದರೊಂದಿಗೆ ಹೊಸ ನಿವೇಶನಗಳಿಗೂ ನೇರವಾಗಿ ‘ಎ – ಖಾತೆ’ ಪಡೆಯಲು ಈ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಎ-ಖಾತಾ ಆನ್‌ಲೈನ್‌ನಲ್ಲಿ ಅಪ್ಲೈ ಮಾಡೋದು ಹೇಗೆ? (2000‌ ಚ.ಮೀಟರ್‌ಗಳ ವರೆಗೆ)

  1. ತಮ್ಮ ಮೊಬೈಲ್ ನಂಬರ್‌ನಿಂದ ಇಂದು ಅನಾವರಣಗೊಳ್ಳುವ https://bbmp.karnataka.gov.in/btoakhata ವೆಬ್‌ ಪೋರ್ಟಲ್‌ಗೆ ಹೋಗಿ ಓಟಿಪಿ ಸಹಿತ ಲಾಗಿನ್ ಆಗಬೇಕು
  2. ಫೈನಲ್ ಬಿ ಖಾತಾದ ಇಪಿಐಡಿ ನಂಬರ್ ಅನ್ನು ನಮೂದಿಸಬೇಕು
  3. ಆಸ್ತಿಯ ಮಾಲೀಕರು ತಮ್ಮ ಆಧಾರ್ ದೃಢೀಕರಿಸಬೇಕು.
  4. ನಿವೇಶನ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ
  5. ಭೂಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ಸೈಟ್‌ಗಳು ಅಪ್ಲೈ ಮಾಡೋಕೆ ಅರ್ಹರು. ಫ್ಲ್ಯಾಟ್ ಇರುವವರು ಅಪ್ಲೈ ಮಾಡೋ ಆಗಿಲ್ಲ.
  6. ನಗರಪಾಲಿಕೆಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ
  7. ಮಾರುಕಟ್ಟೆ ಮೌಲ್ಯದ ಶೇ.5 ರಷ್ಟು ಮೊತ್ತವನ್ನು ʻಏಕ ನಿವೇಶನʼ ಅನುಮೋದನೆ ಶುಲ್ಕವಾಗಿ ಹಾಗೂ ಇತರೇ ಶುಲ್ಕಗಳನ್ನು ಪಾವತಿಸುವುದು.
  8. ಇಷ್ಟೆಲ್ಲಾ ಪ್ರೋಸೆಸ್ ಆದ ಮೇಲೆ ಸ್ವಯಂಕೃತವಾಗಿ ಎ-ಖಾತಾ ಸಿಗಲಿದೆ

2000 ಚದರ ಮೀಟರ್‌ಗೂ ಹೆಚ್ಚಿನ ವಿಸ್ತೀರ್ಣ ಆಸ್ತಿ ಹೊಂದಿದವರು ಅಪ್ಲೈ ಮಾಡೋದು ಹೇಗೆ?

  1. ನೋಂದಾಯಿತ ಇಂಜಿನಿಯರ್ ಅಥವಾ ಆರ್ಕಿಟೆಕ್ಚರ್ ಅನ್ನು ಸಂಪರ್ಕಿಸಬೇಕು.
  2. ಯಾವುದೇ ರೀತಿಯ ನಿವೇಶನಗಳಿಗಾಗಿ https://bpas.bbmp.gov.in ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು.
  3. ಅಗತ್ಯ ದಾಖಲೆಗಳನ್ನ ಮತ್ತು ಕ್ಯಾಡ್‌ ಡ್ರಾಯಿಂಗ್‌ ಅನ್ನು ಅಪ್‌ಲೋಡ್‌ ಮಾಡಬೇಕು.
  4. ಆರಂಭಿಕ ಪರಿಶೀಲನಾ ಶುಲ್ಕ 500 ರೂ. ಪಾವತಿಸಬೇಕು.
  5. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು (ಫ್ಲಾಟ್‌ಗಳಿಗೆ ಅರ್ಹತೆ ಇಲ್ಲ)
  6. ನಂತರ ನಿವೇಶನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ.
  7. ಅರ್ಹತೆಗೆ ಅನುಸಾರವಾಗಿ ಅನುಮೋದನೆ ನೀಡಲಿದ್ದಾರೆ.
  8. ನಂತರ ಅನ್ವಯವಾಗುವ ಶುಲ್ಕಗಳನ್ನ ಪಾವತಿಸಬೇಕಾಗುತ್ತದೆ.
  9. ಅರ್ಹತಾನುಸಾರವಾಗಿ ʻಏಕನಿವೇಶನʼ (ಸಿಂಗಲ್‌ ಸೈಟ್‌) ಅನುಮೋದನೆ ಪ್ರಮಾಣ ಪತ್ರ, ಡ್ರಾಯಿಂಗ್‌ ಮತ್ತು ಎ-ಖಾತಾ ವಿತರಣೆ ಆಗಲಿದೆ.

Leave a Reply

Your email address will not be published. Required fields are marked *