ಬೆಂಗಳೂರು:- ಚತುರ್ಥಿ ಅಂಗವಾಗಿ ಮನೆ ಮನೆಗೆ ಮಣ್ಣಿನ ಗಣಪ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜನತೆಗೆ ಪರಿಸರ ಪ್ರೇಮಿ 7,000 ಮಣ್ಣಿನ ಗಣಪತಿಯನ್ನು ಶಾಸಕರಾದ ಕೆ ಗೋಪಾಲಯ್ಯ ಅವರು ವಿತರಿಸಿದರು.
ನಂತರ ಮಾತನಾಡಿದ ಶಾಸಕರು ಪರಿಸರ ಪ್ರೇಮಿ ಮಣ್ಣಿನ ಗಣಪತಿಯನ್ನೇ ಎಲ್ಲರೂ ಪೂಜಿಸಿ ಪರಿಸರವನ್ನು ಉಳಿಸಿ ತಮ್ಮ ಮನೆಗಳ ಬಕೆಟ್ ಗಳಲ್ಲಾಗಲಿ ನೀರಿನ ತೊಟ್ಟಿಗಳಲ್ಲಾಗಲಿ ಗಣೇಶನನ್ನು ವಿಸರ್ಜಿಸಿ ಕ್ಷೇತ್ರದ ಒಂದೊಂದು ವಾರ್ಡ್ಗಳಲ್ಲಿ ಎರಡು ಗಣೇಶ ವಿಸರ್ಜನೆಯ ಗಾಡಿಗಳನ್ನು ಬಿಡಲಾಗುವುದು ಎಲ್ಲರೂ ಅಲ್ಲಿಯೇ ಬಿಡಿ ಎಂದು ಸಲಹೆ ನೀಡಿದರು.


