ಬೆಂಗಳೂರು: ಇನ್ಮುಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆ ಕಟ್ಟಬೇಕೆಂದರೆ 500 ಅಡಿ ಜಾಗ ಬಿಡಬೇಕು ಎಂದು ಸರ್ಕಾರ ಹೇಳುತ್ತಿದೆ. ಈ ನಿಯಮಕ್ಕೆ ಸಾಕಷ್ಟು ವಿರೋಧ ಕೇಳಿಬಂದಿದೆ.
30*40 ಸೈಟ್ ಅಂದ್ರೆ 1200 ಅಡಿ ಬರುತ್ತದೆ. ಇದರಲ್ಲಿ 700 ಅಡಿಗೆ ಮಾತ್ರ ಮನೆ ಕಟ್ಟಬೇಕು ಎಂದು ಹೇಳುತ್ತಿದ್ದಾರೆ. ಈ ರೀತಿ ಮಾಡಿದರೆ ಜನರಿಗೆ ನಷ್ಟವಾಗುವುದಿಲ್ಲವೇ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.


