BBMP
Loading ...

Dasara Elephant

ಮೈಸೂರು: ಪ್ರತಿ ವರ್ಷ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಈ ಬಾರಿ 11 ದಿನಗಳ ಕಾಲ ನಡೆಯಲಿದೆ. ದಸರಾ ಇತಿಹಾಸದಲ್ಲೇ (Dasara History) ಬಹುತೇಕ ಇದೇ ಮೊದಲ ಬಾರಿಗೆ 11 ದಿನದ ದಸರಾ ಬಂದಿದೆ.

ಹೌದು. ಪಂಚಾಂಗದ (Panchanga) ತಿಥಿಗಳ ಪ್ರಕಾರ ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್ 2ರ ವರೆಗೆ ಅಂದ್ರೆ 11 ದಿನ ದಸರಾ ಉತ್ಸವ ನಡೆಯಲಿದೆ. ಸೆ.24 ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರಿಯುವ ಕಾರಣ ದಸರಾ 11 ದಿನ ಆಗಲಿದೆ.

ಸಾಮಾನ್ಯವಾಗಿ ಪ್ರತಿ ವರ್ಷ 10 ದಿನಗಳ ಕಾಲ ದಸರಾ ನಡೆಯುತ್ತದೆ. ದಸರಾ ಪರಂಪರೆ ಶುರುವಾಗಿ 410 ವರ್ಷ ಕಳೆದಿದೆ. 410 ವರ್ಷಗಳಿಂದಲೂ 10 ದಿನ ದಸರಾ ನಡೆದಿದೆ. ಆದರೆ ಈ ಬಾರಿ 11 ದಿನ ದಸರಾ ನಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳ ಬಗ್ಗೆ ಧಾರ್ಮಿಕವಾಗಿ ಚರ್ಚೆಗಳು ಶುರುವಾಗಿವೆ. 1410 ರಿಂದ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ದಸರಾ ಆಚರಣೆ ನಡೆದಿದ್ದು 11 ದಿನ ದಸರಾ ನಡೆದ ಉದಾಹರಣೆಗಳಿಲ್ಲ. ಮಹಾಲಯ ಅಮಾವಾಸ್ಯೆಯ ಮರು ದಿನದಿಂದ ನವರಾತ್ರಿ ಶುರುವಾಗಿ 9 ದಿನಗಳ ಮರುದಿನ ವಿಜಯದಶಮಿ‌ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.

ಈ ಕುರಿತು ಧಾರ್ಮಿಕ ಚಿಂತಕ ಡಾ. ಶೆಲ್ವಪಿಳೈ ಅಯ್ಯಂಗಾರ್ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ನೂರು ವರ್ಷಗಳ ಹಿಂದೆ ದಸರಾ 11 ದಿನ ನಡೆದಿರಬಹುದು. ಆದ್ರೆ ನನ್ನ ಅನುಭವದಲ್ಲಿ ಇದೇ ಮೊದಲು 11 ದಿನ ನಡೆಯುತ್ತಿದೆ. ಪಂಚಾಂಗದಲ್ಲಿ ಸೆ.21ರಂದು ಮಹಾಲೆಯ ಅಮಾವಾಸ್ಯೆ ಬರುತ್ತೆ. ಅದರ ಮಾರನೇ ದಿನದಿಂದ ಅಂದ್ರೆ ಸೆ.22ರಿಂದ ಅ.2ರ ವರೆಗೆ ಶರನ್ನವರಾತ್ರಿ ಮತ್ತು ವಿಜಯದಶಮಿ ನಡೆಯುತ್ತದೆ ಎಂದು ವಿವರಿಸಿದ್ದಾರೆ.

ಏಕೆಂದ್ರೆ ಪಂಚಾಂಗದಲ್ಲಿ ಪ್ರಥಮೆ, ದ್ವಿತೀಯ, ತೃತೀಯ, ಚತುರ್ಥಿ ಸರಿಯಿದೆ. ಆದ್ರೆ ಪಂಚಮಿ ಸೆ.26, 27ರಂದು ಎರಡೂ ದಿನ ಬಂದಿದೆ. ಆ 2 ದಿನ ಗಣನೆಗೆ ತೆಗೆದುಕೊಂಡ್ರೆ 10ನೇ ದಿನ ಮಹಾನವಮಿ (ನವಮಿ) ಬರುತ್ತದೆ. 11ನೇ ದಿನ ದಶಮಿ ಬರುತ್ತದೆ. ಇದು ಸಾಮಾನ್ಯ ದಿನಗಳಲ್ಲಿ ಬಂದಿರುವುದು ಉಂಟು, ಆದ್ರೆ ನೂರಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈ ತಿಥಿ ಬಂದಿರುವುದು ವಿಶೇಷ ಎನ್ನುತ್ತಾರೆ ಶೆಲ್ವಪಿಳೈ ಅಯ್ಯಂಗಾರ್.

ದಿನಗಳ ಲೆಕ್ಕದಲ್ಲಿ ನವರಾತ್ರಿ 9 ದಿನ ದಶಮಿ 10ನೇ ದಿನಕ್ಕೆ ಬರುತ್ತದೆ. ಆದ್ರೆ ಪಂಚಾಂಗದಲ್ಲಿ 11 ದಿನ ಬರುತ್ತದೆ. ಈ ಸಂದರ್ಭದಲ್ಲಿ 5-6ನೇ ದಿನ ಪೂಜೆಯಲ್ಲಿ ಯಾವುದೇ ವ್ಯತ್ಯಾಸ ಇರಲ್ಲ. ಅದೇ ಅಲಂಕಾರವನ್ನು ಎರಡೂ ದಿನ ಮಾಡಿಕೊಳ್ಳಬೇಕಾಗುತ್ತೆ. ಆದ್ರೆ ಶೈವ, ವೈಷ್ಣವ ದೈವಗಳ ಪೂಜೆಯಲ್ಲಿ ಬದಲಾವಣೆ ಇರುತ್ತೆ. ಶೈವ ದೇವಸ್ಥಾನಗಳಲ್ಲಿ ರಾತ್ರಿಯಲ್ಲೂ ಶಮಿ ಪೂಜೆಗಳನ್ನ ಮಾಡಿ ಆರಂಭಿಸಬಹುದು. ಮೈಸೂರು ಪರಂಪರೆಗೆ ನೋಡುವುದಾದ್ರೆ 11 ದಿನದ ಆಚರಣೆ ಮಾಡಬೇಕಾಗುತ್ತದೆ. ಈ ವೇಳೆ ಮಹಾರಾಜರ ಪೂಜೆಗಳಲ್ಲೂ ಬದಲಾವಣೆ ಆಗುತ್ತೆ ಎಂದು ಮಾಹಿತಿ ನೀಡಿದ್ದಾರೆ.

ಗ್ರಹಗತಿ ಹೇಳುವುದೇನು?
ಸಾಮಾನ್ಯವಾಗಿ ಗ್ರಹಗಳು ಗ್ರಹಗಳು 6,3,8,12ರಲ್ಲಿ ಇದ್ದಾಗ ದುಸ್ಥಾನ ಎನ್ನುತ್ತೇವೆ. ಆದ್ರೆ 11ರಲ್ಲಿ ಇದ್ದಾಗ ಶುಭಸ್ಥಾನ ಅಂದ್ರೆ ಏಕಾದಶ ಸ್ಥಾನ ಫಲ ಎನ್ನುತ್ತೇವೆ. ಹೀಗಾಗಿ ಈ ಬಾರಿ ಮೈಸೂರು ದಸರಾ 11 ದಿನ ಆಚರಣೆ ಮಾಡಬೇಕಾಗುತ್ತೆ ಎಂದು ಶೆಲ್ವಪಿಳೈ ಅಯ್ಯಂಗಾರ್ ವಿವರಿಸಿದ್ದಾರೆ.

30 ವರ್ಷಗಳ ಹಿಂದೆ 500 ರೂ. ಲಂಚ ಪಡೆದ ಗ್ರಾಮ ಲೆಕ್ಕಿಗನಿಗೆ 1 ವರ್ಷ ಜೈಲು ಶಿಕ್ಷೆ: ಬೆಳಗಾವಿ ಸ್ಪೆಷಲ್ ಕೋರ್ಟ್ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂಕೋರ್ಟ್​

Leave a Reply

Your email address will not be published. Required fields are marked *