BBMP
Loading ...

Crackers

Greater Bengaluru News9 : ಬೆಳಕಿನ ಹಬ್ಬ ದೀಪಾವಳಿಗೆ ಕೌಂಟ್‌ಡೌನ್ ಆರಂಭವಾಗಿದೆ. ನಗರದೆಲ್ಲೆಡೆ ಪಟಾಕಿ ಮಳಿಗೆಗಳ ಸಿದ್ಧತೆ ನಡೆಯುತ್ತಿದ್ದರೂ, ಈ ಬಾರಿ ಸರ್ಕಾರದಿಂದ ಸ್ಪಷ್ಟ ಎಚ್ಚರಿಕೆ ಬಂದಿದೆ.

ಪರಿಸರ ಸ್ನೇಹಿ ದೀಪಾವಳಿಗೆ ಕರೆ ನೀಡಿರುವ ರಾಜ್ಯ ಸರ್ಕಾರ, ನಿಷೇಧಿತ ಪಟಾಕಿಗಳ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದೆ. ನಗರದ 72 ಪಟಾಕಿ ಮಾರಾಟ ಮಳಿಗೆಗಳ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೋಲಿಸ್ ಇಲಾಖೆ ನಿಗಾವಹಣೆ ಕೈಗೊಂಡಿದೆ.

ಹಬ್ಬದ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಯಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ 14 ಪ್ರಾದೇಶಿಕ ಅಧಿಕಾರಿಗಳು ತಂಡಗಳಾಗಿ ಪರಿಶೀಲನೆ ನಡೆಸಲಿದ್ದಾರೆ. ನಿಷೇಧಿತ ಪಟಾಕಿ ಪತ್ತೆಯಾದರೆ, ಸಂಬಂಧಿಸಿದ ಮಳಿಗೆ ಮಾಲೀಕರ ವಿರುದ್ಧ ದಂಡ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧಾರವಾಗಿದೆ.

ಹಸಿರು ಪಟಾಕಿಯ ಶಬ್ದ ಮಟ್ಟ 10 ಮೀಟರ್ ದೂರದಲ್ಲಿ 125 ಡೆಸಿಬೆಲ್ ಮೀರಬಾರದು. ಈ ಮಿತಿಯನ್ನು ಮೀರಿದರೆ ಅದನ್ನು ನಿಷೇಧಿತ ಪಟಾಕಿ ಎಂದು ಗುರುತಿಸಲಾಗುತ್ತದೆ. ಪರಿಸರ ಇಲಾಖೆ 1991ರ ಪಬ್ಲಿಕ್ ಲೈಯಾಬಿಲಿಟಿ ಆಕ್ಟ್ ಪ್ರಕಾರ ಪಟಾಕಿ ಅಂಗಡಿಗಳು ಇನ್‌ಶೂರೆನ್ಸ್ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

Leave a Reply

Your email address will not be published. Required fields are marked *