BBMP
Loading ...

ಚಳಿಗಾಲ ಆರಂಭವಾಗಿದ್ದು, ಕರ್ನಾಟಕದಲ್ಲಿ ತಾಪಮಾನ ಕ್ರಮೇಣ ಕಡಿಮೆಯಾಗುತ್ತಿದೆ. ಚಳಿಯಿಂದ ಜನರು ನಡುಗುತ್ತಿದ್ದಾರೆ. ಹಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಇಂತಹ ಥಂಡಿ ವಾತಾವರಣವು ಒಂದು ರೀತಿಯಲ್ಲಿ ಆಹ್ಲಾದಕರ ಎನಿಸಿದರೂ ಈ ಸಮಯದಲ್ಲಿ ಬಿಸಿ ಬಿಸಿಯಾಗಿ ತಿನ್ನುವ ಬಯಕೆ ಬಹುತೇಕರಲ್ಲಿರುತ್ತದೆ. ಹೀಗಾಗಿ ಬಜ್ಜಿ, ಬೋಂಡಾ, ಪಕೋಡ ಹಾಗೂ ಸಮೋಸ ಮುಂತಾದ ಕುರುಕಲು ತಿಂಡಿಗಳನ್ನು ತಿನ್ನುತ್ತಾರೆ. ಆದರೆ, ಇವುಗಳಿಂದ ಚಳಿಗಾಲದಲ್ಲಿ ಉಸಿರಾಟದ ಸೋಂಕಿನಂತಹ ಸಮಸ್ಯೆಗಳು ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಶೀತವನ್ನು ನಿಭಾಯಿಸಲು ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಶಕ್ತಿಯನ್ನು ನೀಡುವಲ್ಲಿ ಆಹಾರದ ಪಾತ್ರ ಬಹುಮುಖ್ಯ. ಹಾಗಾಗಿ, ಚಳಿಗಾಲದಲ್ಲಿ ಸ್ವಲ್ಪ ಹೆಚ್ಚು ತಿನ್ನಬೇಕು. ಹೀಗಾಗಿ ಜನರು ಮಿರ್ಚಿ ಬಜ್ಜಿಯಂತಹ ಕುರುಕಲು ತಿಂಡಿಗಳತ್ತ ಮುಖ ಮಾಡುತ್ತಾರೆ. ಆದರೆ, ಇಂತಹ ತಿನಿಸುಗಳಿಂದ ತೂಕ ಹೆಚ್ಚಾಗುವ ಅಪಾಯವಿದೆ. ಇದರೊಂದಿಗೆ ಅನೇಕ ರೋಗಗಳೂ ಬರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಈ ಸೀಸನ್​ನಲ್ಲಿ ಯಾವ ಆಹಾರಗಳನ್ನು ತಿನ್ನಬೇಕು ಎಂಬುದರ ಕಡೆ ನಾವು ಗಮನಹರಿಸೋಣ.

ಪ್ರೋಟೀನ್​ಗಳು, ಕಾರ್ಬೋಹೈಡ್ರೇಟ್​ಗಳು ಮತ್ತು ಕೊಬ್ಬುಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಎ ಹಾಗೂ ವಿಟಮಿನ್ ಡಿ ಚಯಾಪಚಯ ಕ್ರಿಯೆಗೆ ತುಂಬಾನೇ ಸಹಕಾರಿ. ಹಾಗಾಗಿ ನಿಂಬೆ, ಸಿಹಿಗೆಣಸು, ಕಿತ್ತಳೆ ಹಾಗೂ ಪೇರಲೆ ಹಣ್ಣುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಬೇಕು.

ಸಿಹಿಗೆಣಸು ತಿಂದರೆ, ನಿಂಬೆರಸವನ್ನು ಕುಡಿದರೆ ನೆಗಡಿ ಬರುತ್ತದೆ ಎಂಬ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಎನ್ನುತ್ತಾರೆ ವೈದ್ಯರು. ಕೆಂಪು ಕ್ಯಾಪ್ಸಿಕಂ, ಹಳದಿ ಕ್ಯಾಪ್ಸಿಕಂ ಮತ್ತು ಎಲೆಕೋಸುಗಳಲ್ಲಿ ವಿಟಮಿನ್ ಸಿ ಇದೆ. ಈ ಸೀಸನ್​ನಲ್ಲಿ ಸಿಗುವ ನೆಲ್ಲಿಕಾಯಿಯಲ್ಲಿಯೂ ವಿಟಮಿನ್ ಸಿ ಪ್ರಮಾಣವೂ ಅಧಿಕವಾಗಿದೆ. ಹೀಗಾಗಿ ಇವುಗಳನ್ನು ತಪ್ಪದೇ ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.

ಇನ್ನು ಸೋಂಕುಗಳ ವಿರುದ್ಧ ಹೋರಾಡಲು ಸತುವು ಸಹ ಅಗತ್ಯವಾಗಿರುತ್ತದೆ. ಇದು ದ್ವಿದಳ ಧಾನ್ಯಗಳು, ಕುಂಬಳಕಾಯಿ ಬೀಜಗಳು ಮತ್ತು ಮಾಂಸಗಳಲ್ಲಿ ಕಂಡುಬರುತ್ತದೆ. ಮೊಟ್ಟೆಯ ಹಳದಿ ಲೋಳೆ, ಪಪ್ಪಾಯಿ, ಕ್ಯಾರೆಟ್, ಕುಂಬಳಕಾಯಿ, ಸಿಹಿ ಗೆಣಸು ಮತ್ತು ಹಸಿರು ಎಲೆಗಳ ತರಕಾರಿಗಳಲ್ಲಿ ವಿಟಮಿನ್ ಎ ಕಂಡುಬರುತ್ತದೆ. ಹೀಗಾಗಿ ಇಂತಹ ಆಹಾರಗಳನ್ನು ಚಳಿಗಾಲದಲ್ಲಿ ಸೇವಿಸುವ ಮೂಲಕ ಕೆಲ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಜನಾಕ್ರೋಶಕ್ಕೆ ಎಚ್ಚೆತ್ತ ಸರ್ಕಾರ: ಯಾರೊಬ್ಬರ ಬಿಪಿಎಲ್​ ಕಾರ್ಡ್ ರದ್ದು ಮಾಡದಂತೆ ಸಿಎಂ ಖಡಕ್ ಆದೇಶ!

Leave a Reply

Your email address will not be published. Required fields are marked *