ಬೆಂಗಳೂರು: ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ಪೊಲ್ಯುಷನ್ ಕಂಟ್ರೋಲ್ ಬೋರ್ಡ್ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಹಣ ಬೇಡಿಕೆ, ಅಕ್ರಮ ಚಟುವಟಿಕೆಗಳು ಸೇರಿ ಹಲವು ಆರೋಪಗಳ ಬಗ್ಗೆ ದೂರು ಬಂಧ ಹಿನ್ನೆಲೆ ಎಮ್ ಜಿ ರೋಡ್,
ಬಸವೇಶ್ವರ ನಗರ, ಪೀಣ್ಯ ಸೇರಿದಂತೆ ಹಲವು ಕಡೆ ದಾಳಿ ಮಾಡಲಾಗಿದೆ. ಸಾರ್ವಜನಿಕರಿಂದ ಪೊಲ್ಯುಷನ್ ಕಂಟ್ರೋಲ್ ಬೋರ್ಡ್ ನ ಅಧಿಕಾರಿ, ಸಿಬ್ಬಂದಿ ವಿರುದ್ಧ ದೂರು ಬಂದ ಹಿನ್ನೆಲೆ ಲೋಕಾಯುಕ್ತರಾದ ಬಿ ಎಸ್ ಪಾಟೀಲ್ ರ ನೇತೃತ್ವದಲ್ಲಿ 27 ತಂಡಗಳಿಂದ ಬೆಂಗಳೂರಿನ ಹಲವು ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಾವೇರಿಯಲ್ಲಿ ಬಿಲ್ ಪಡೆಯುವುದಕ್ಕಾಗಿ ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ಸಂತ್ರಸ್ತ


