BBMP
Loading ...

BBMP

ಬೆಂಗಳೂರಿನಲ್ಲಿ ಆಸ್ತಿಗಳಿಗೆ ಇ – ಖಾತಾ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳು ಖಾತಾ ಮಾಡಿಸಿಕೊಡುವುದಕ್ಕೆ ಬರೋಬ್ಬರಿ 4,000 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದು.

ಇ – ಖಾತಾ ಮಾಡಿಸಿಕೊಳ್ಳಲು ಆಸ್ತಿದಾರರು ಪರದಾಡುತ್ತಿದ್ದಾರೆ. ಹೌದು ಬೆಂಗಳೂರು 25 ಲಕ್ಷ ಆಸ್ತಿದಾರರು ಇದ್ದಾರೆ ಅಂತ ಅಂದಾಜಿಸಲಾಗಿದೆ. ಆದರೆ, 2.5 ಲಕ್ಷ ಆಸ್ತಿದಾರರಿಗೆ ಮಾತ್ರ ಇಲ್ಲಿಯವರೆಗೆ ಅಂತಿಮ ಈ ಖಾತಾ ನೀಡಲಾಗಿದೆ. ಇನ್ನೂ ಶೇ 70ರಷ್ಟು ಆಸ್ತಿಗಳಿಗೆ ಇ ಖಾತಾ ಸಿಕ್ಕಿಲ್ಲ. ಹೀಗಾಗಿ ಆಸ್ತಿದಾರರು ಆಸ್ತಿಗಳಿಗೆ ಇ ಖಾತಾ ಮಾಡಿಸಿಕೊಳ್ಳಲು ಪರದಾಡುವಂತೆ ಆಗಿದೆ. ಇದೀಗ ಈ ರೀತಿ ಯಾರಾದರೂ ಲಂಚ ಕೇಳಿದರೆ ಏನು ಮಾಡಬೇಕು ಎಂದು ಬಿಬಿಎಂಪಿ ಮತ್ತೊಂದು ಮಹತ್ವದ ಅಪ್ಡೇಟ್‌ ಹಂಚಿಕೊಂಡಿದೆ.

ಬೆಂಗಳೂರಿನಲ್ಲಿ ಇ – ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲಗಳು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಜನ ಇ ಖಾತಾ ಮಾಡಿಸಿಕೊಳ್ಳುವುದಕ್ಕೆ ಸಂಕಷ್ಟ ಎದುರಿಸುತ್ತಿದ್ದಾರೆ. ಈಗ ಕೊನೆಗೂ ಬಿಬಿಎಂಪಿಯು ಆಸ್ತಿದಾರರು ಸರಳವಾಗಿ ಇ ಖಾತಾ ಮಾಡಿಸಿಕೊಳ್ಳುವುದಕ್ಕೆ ಟಿಪ್ಸ್‌ ಕೊಟ್ಟಿದೆ.

ಬೆಂಗಳೂರಿನಲ್ಲಿ ಆಸ್ತಿಗಳ ಖರೀದಿ ಹಾಗೂ ಮಾರಾಟದ ಸಮಯದಲ್ಲಿ ಮೋಸ ಆಗಬಾರದು ಎನ್ನುವ ಉದ್ದೇಶದಿಂದ ಇ ಖಾತಾ ಕಡ್ಡಾಯ ಮಾಡಲಾಗಿದೆ. ಲಂಚ ಕೇಳುವುದು ಹಾಗೂ ಆಸ್ತಿದಾರರಿಗೆ ಇ ಖಾತಾ ಮಾಡಿಸಿಕೊಳ್ಳುವುದು ಸುಲಭವಾಗಲಿ ಎನ್ನುವ ಕಾರಣಕ್ಕೆ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಅಲ್ಲದೆ ಕಂದಾಯ ವಿಭಾಗದಿಂದ ಮೂರು ಸರಳ ಸೂತ್ರಗಳನ್ನು ಪರಿಚಯಿಸಲಾಗಿದೆ. ಅದರ ವಿವರ ನೋಡೋಣ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್‌ವೊಂದನ್ನು ನೀಡಲಾಗಿದೆ. ಇ – ಖಾತಾದಲ್ಲಿ ಇನ್ನೂ ಈ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಲ್ಪ್‌ಲೈನ್‌ ಪ್ರಾರಂಭಿಸಲಾಗಿದೆ. ಖಾತಾ ವಿಚಾರದಲ್ಲಿ ಗೊಂದಲ ಎದುರಾದರೆ ಸಹಾಯವಾಣಿ ಸಂಖ್ಯೆ 9480683695ಕ್ಕೆ ನೀವು ಕರೆ ಮಾಡಬಹುದಾಗಿದೆ. ಅಲ್ಲದೇ ಯಾರಾದರೂ ಇ ಖಾತಾ ಮಾಡಿಸಿಕೊಡುವುದಕ್ಕೆ ಲಂಚ ಕೇಳಿದರೆ ಸಹ ಈ ದೂರವಾಣಿ 9480683695ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

ಮೂರು ಸರಳ ಸೂತ್ರ: ಆಸ್ತಿದಾರರು ಇ ಖಾತಾ ಪಡೆಯುವುದಕ್ಕೆ ಮೂರು ಸರಳ ಸೂತ್ರಗಳನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಪರಿಚಯಿಸಿದೆ. ಆಸ್ತಿದಾರರು ಇ ಖಾತಾಗೆ ಅರ್ಜಿ ಸಲ್ಲಿಕೆ ಮಾಡಿದ ಕೂಡಲೇ ಬಿಬಿಎಂಪಿ ಕಚೇರಿಗೆ ಭೇಟಿ ನೀಡುವುದು ಬೇಡ. ಎರಡು ದಿನಗಳು ಕಾಯಿರಿ. ಒಂದೊಮ್ಮೆ ಲಂಚ ಕೇಳಿದರೆ ದೂರು ನೀಡಿ ಎಂದು ಹೇಳಲಾಗಿದೆ. ಯಾರಾದರೂ ಹಣ ಕೇಳಿದರೆ ಹೆಲ್ಪ್‌ ಡೆಸ್ಕ್‌ಗೆ ಕರೆ ಮಾಡಿ. ಇ ಖಾತಾ ಮಾಡಿಸಿಕೊಳ್ಳುವುದಕ್ಕೆ 145 ರೂಪಾಯಿ ಮಾತ್ರ ನಿಗದಿ ಮಾಡಲಾಗಿದೆ ಎಂದು ಮತ್ತೊಮ್ಮೆ ಸ್ಪಷ್ಟನೆ ಕೊಡಲಾಗಿದೆ.

ಖಾತಾ ಮಾಡಿಸಿಕೊಳ್ಳಲು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮವನ್ನು ಬಿಬಿಎಂಪಿಯ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.

ಬೆಂಗಳೂರು ಮೆಟ್ರೋ: ಕಡಬಗೆರೆ-ತಾವರೆಕೆರೆ ಸೇರಿ 8 ಹೊಸ ಮಾರ್ಗಗಳ ಕಾರ್ಯಸಾಧ್ಯತಾ ಅಧ್ಯಯನ 2025ರ ವೇಳೆಗೆ ಪೂರ್ಣ!

Leave a Reply

Your email address will not be published. Required fields are marked *