BBMP
Loading ...

Mahiti ayoga

ಕಲಬುರಗಿ: ಕಪ್ಪು ಪಟ್ಟಿಯಲ್ಲಿರುವ ಆರ್ ಟಿಐ ಕಾರ್ಯಕರ್ತನ ಹೆಸರು ತೆಗೆಯಲು ರೂ. 1 ಲಕ್ಷ ಲಂಚ ಪಡೆಯುವಾಗ ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಅವರು ಗುರುವಾರ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಪ್ಪುಪಟ್ಟಿಯಿಂದ ಆರ್ ಟಿಐ ಕಾರ್ಯಕರ್ತ ಸಾಯಿಬಣ್ಣ ಅವರನ್ನು ಹೆಸರು ತೆಗೆಯಲು ಡಾಕಪ್ಪ ಅವರು ರೂ. 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಗುರುವಾರ ರೂ. 1 ಲಕ್ಷದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡ ಬಳಿಕ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಡಿವೈಎಸ್ ಪಿ ಗೀತಾ ಬೇನಾಳ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೆಂಡ್ತಿ ಕೈಯಿಂದ ಸಾಯಲು ಇಷ್ಟವಿಲ್ಲ ಅದಕ್ಕೆ ಲವರ್​ ಜತೆ ಮದ್ವೆ ಮಾಡಿಕೊಟ್ಟೆ ಎಂದ ಗಂಡ!

Leave a Reply

Your email address will not be published. Required fields are marked *