BBMP
Loading ...

DKS

Greater Bengaluru news9:– ಬಿಹಾರ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಸಂಭವಿಸುವ ಸಾಧ್ಯತೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಈ ಹಿನ್ನೆಲೆ ಇಂದು ಡಿಪ್ಟಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣಿಸಿದ್ದಾರೆ. ದೆಹಲಿಯಲ್ಲಿ ತಮ್ಮ ಕೆಲಸ ಮುಗಿಸಿದ ನಂತರ ಅವರು ನಾಳೆ ಬಿಹಾರಕ್ಕೆ ತೆರಳಲಿದ್ದಾರೆ. ಅದರ ಮೊದಲು ಅವರು ಎಐಸಿಸಿ ಹಿರಿಯ ನಾಯಕರನ್ನು ಭೇಟಿ ಮಾಡುವ ಅವಕಾಶವೂ ಇದೆ. ಬಿಹಾರದಲ್ಲಿ ರಣದೀಪ್ ಸುರ್ಜೀವಾಲರನ್ನೂ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಡಿಕೆ ಶಿವಕುಮಾರ್ ಅವರ ದೆಹಲಿಯ ಭೇಟಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಬಿಹಾರ ಫಲಿತಾಂಶ ಹೊರಬರುವ ತನಕ ಎಲ್ಲರೂ ಸಮಾಧಾನದಿಂದ ಕಾಯಬೇಕೆಂದು ಸೂಚಿಸಿದ್ದಾರೆ.

ಈ ಸಂಕಷ್ಟದ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 15ರಂದು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಂಪುಟ ಪುನರ್ ರಚನೆ ಮತ್ತು ಪವರ್ ಶೇರಿಂಗ್ ಕುರಿತು ಸ್ಪಷ್ಟತೆ ಪಡೆಯುವ ಅವಕಾಶ ಇದಾಗಬಹುದು ಎಂಬ ಊಹೆ ಮನೆಮಾಡಿದೆ. ಡಿಕೆ ಶಿವಕುಮಾರ್ ಹೈಕಮಾಂಡ್ ಆಹ್ವಾನಕ್ಕೆ ಸೇರುವಂತೆ ಆಯ್ತಾರೆಯೇ ಎಂಬ ಕುತೂಹಲವೂ ಹೆಚ್ಚುತ್ತಿದೆ.

Leave a Reply

Your email address will not be published. Required fields are marked *