BBMP
Loading ...

Darshan

ಅರ್ಜಿಯನ್ನು 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಮತ್ತೆ ಅನುಚಿತ ವರ್ತನೆ ತೋರೆದ್ರೆ ವರ್ಗಾವಣೆ ಮಾಡೋಕೆ ಐಜಿಪಿಗೆ ಅವಕಾಶ ಇದೆ ಎಂದು ಕೋರ್ಟ್‌ ಹೇಳಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನ ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ಇಂದು ನಗರದ 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.

ಸದ್ಯಕ್ಕೆ ಬೇರೆಡೆಗೆ ಶಿಫ್ಟ್‌ ಮಾಡೋದಕ್ಕೆ ಸಕಾರಣ ಇಲ್ಲ. ಮತ್ತೆ ಅನುಚಿತ ವರ್ತನೆ ತೋರಿದ್ರೆ ವರ್ಗಾವಣೆ ಮಾಡೋಕೆ ಐಜಿಪಿಗೆ ಅವಕಾಶ ಇದೆ. ಐಜಿಪಿ ಅಧಿಕಾರ ಬಳಸಬಹುದು ಎಂದು ಕೋರ್ಟ್‌ ಹೇಳಿದೆ.

ಅಲ್ಲದೇ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ಹಾಸಿಗೆ ನೀಡಬೇಕೆಂಬ ದರ್ಶನ್‌ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದೆ. ಆದ್ರೆ ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ನೀಡಲು ಅವಕಾಶ ಕಲ್ಪಿಸಿದೆ. ಜೈಲಿನ ಮ್ಯಾನ್ಯುವಲ್‌ ಪ್ರಕಾರವೇ 1 ಲೋಟ, 1 ತಟ್ಟೆ, ಬೆಡ್‌ಶೀಟ್‌, ದಿಂಬು 5 ಜೊತೆ ಬಟ್ಟೆ ನೀಡಲು ಅವಕಾಶ ನೀಡಿದೆ. ಜೊತೆಗೆ ವಾಕಿಂಗ್‌ಗೆ ಅವಕಾಶ ಮಾಡಿಕೊಡಿ, ಜೈಲು ಅಧಿಕಾರಿಗಳು ಮಾನವೀಯ ಮೌಲ್ಯ ಕಾಪಾಡಿಕೊಳ್ಳಿ ಎಂದು ಕೋರ್ಟ್‌ ಹೇಳಿದೆ.

Leave a Reply

Your email address will not be published. Required fields are marked *