BBMP
Loading ...

DJ Halli Police

Greater Bengaluru News9 : ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನಿಲ್‌ ವಿರುದ್ಧ ಮಹಿಳೆಯೊಬ್ಬರು ಗಂಭೀರ ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಕಳೆದ ಒಂದು ವರ್ಷದಿಂದ ಎರಡು–ಮೂರು ಬಾರಿ ಲೈಂಗಿಕ ಶೋಷಣೆಗೆ ಒಳಪಡಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ. ಇನ್ಸ್ಪೆಕ್ಟರ್ ಮನೆ ಹಾಗೂ 8ನೇ ಮೈಲಿ ಪ್ರದೇಶದಲ್ಲಿರುವ ಹೋಟೆಲ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದಾರೆಂಬ ಆರೋಪವೂ ಇದೆ.

ಮನೆ ಕೊಡಿಸುವೆ, ಬ್ಯೂಟಿ ಪಾರ್ಲರ್ ತೆರೆಯಿಸಿ ಕೊಡಿಸುವೆ ಎಂದು ನಂಬಿಸಿ ಹಣಕಾಸು ಮತ್ತು ಭಾವನಾತ್ಮಕವಾಗಿ ವಂಚನೆ ನಡೆಸಿದ್ದಾರೆಂಬ ಆರೋಪ ಸಂತ್ರಸ್ತೆಯದ್ದು.

ಇದೇ ವೇಳೆ ಕೆಲವು ಖಾಸಗಿ ಫೋಟೋ ಹಾಗೂ ವೀಡಿಯೊಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿ, “ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ” ಎಂದು ಬೆದರಿಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರತಿದಿನ ವೀಡಿಯೋ ಕಾಲ್ ಮಾಡು ಎಂದು ಕಿರುಕುಳ ನೀಡುತ್ತಿದ್ದಾರೆಯೂ ಅವರು ಹೇಳಿದ್ದಾರೆ.

ಮುಸ್ಲಿಂ ಮಹಿಳೆಯಾದ ಸಂತ್ರಸ್ತೆ, “ನಿನ್ನ ಜೀವನ ಸೆಟಲ್ ಮಾಡುತ್ತೇನೆ, ವ್ಯವಹಾರ ಆರಂಭ ಮಾಡಿಸುತ್ತೇನೆ” ಎಂಬ ಮಾತುಗಳಲ್ಲಿ ನಂಬಿಸಿ ಮೋಸ ಮಾಡಿದರೆಂದು ಡಿಜಿ ಕಚೇರಿಗೆ ದೂರು ನೀಡಿದ್ದಾರೆ. ಈ ಪ್ರಕರಣ ಈಗ ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿದ್ದು, ಶೀಘ್ರ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *