BBMP
Loading ...

BESCOM

Greater Bengaluru News9: ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಹಮ್ಮಿಕೊಂಡಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಬೆಸ್ಕಾಂ ಕೂಡ ಸಾಥ್ ನೀಡಿದ್ದು, ನಗರದ ಎಲ್ಲ ಉಪ ವಿಭಾಗಗಳ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿನ ನಿಷ್ಕ್ರಿಯ, ಅನುಪಯುಕ್ತ ಹಾಗೂ ಜನರ ಓಡಾಟಕ್ಕೆ ತೊಡಕಾಗಿರುವ ವಿದ್ಯುತ್ ಮೂಲಸೌಕರ್ಯಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಚುರುಕುಗೊಳಿಸಿದೆ.

ಈ ಸ್ವಚ್ಛತಾ ಅಭಿಯಾನದ ಭಾಗವಾಗಿ ಕಾಮಾಕ್ಷಿಪಾಳ್ಯದ ಒ ಮತ್ತು ಎಂ (O & M) ಎನ್-೬ (N6) ಉಪ ವಿಭಾಗದಲ್ಲಿ ಬಿಬಿಎಂಪಿ (BBMP) ಸಿಬ್ಬಂದಿ ಹಾಗೂ ಸ್ವಯಂಸೇವಕರೊಂದಿಗೆ ಕೈಜೋಡಿಸಿ ತ್ಯಾಜ್ಯ ಹಾಗೂ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸುವ ‘ಕ್ಲೀನ್ ಅಪ್ ಬೆಂಗಳೂರು’ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ಹಾಗೂ ಪರಿಶೀಲನೆಗಾಗಿ ಎನ್-೬ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಮೇಡಂ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು; ಅಲ್ಲದೆ, ಮುಖ್ಯ ಎಂಜಿನಿಯರ್ (CE), ಕಾರ್ಯಪಾಲಕ ಎಂಜಿನಿಯರ್ (EE) ಸರ್ ಹಾಗೂ ಎನ್-೬ ಎಇಇ ಮೇಡಂ ಅವರು ಒಟ್ಟಾಗಿ ಸುಂಕದಕಟ್ಟೆ ಸುತ್ತಮುತ್ತ ಜರುಗಿದ ‘ಕ್ಲೀನ್ ಬೆಂಗಳೂರು ಅಭಿಯಾನ’ದ ಪ್ರಗತಿಯನ್ನು ನೇರವಾಗಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

Freedom FromWaste ಅಭಿಯಾನದ ಭಾಗವಾಗಿ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಶಿವಶಂಕರ, ಭಾ.ಆ.ಸೇ. ಅವರ ಮಾರ್ಗದರ್ಶನದಲ್ಲಿ ಇಂದು ಬೆಂಗಳೂರಿನಾದ್ಯಂತ ಬೆಂಗಳೂರಿನಾದ್ಯಂತ ವಿಶೇಷ ಸ್ವಚ್ಚತಾ ಹಾಗೂ ಪಾದಚಾರಿ ಸುರಕ್ಷತಾ ಅಭಿಯಾನವನ್ನು ಕೈಗೊಳ್ಳಲಾಯಿತು

ಮಹಾನಗರ ಪಾದಚಾರಿ ಮಾರ್ಗಗಳಲ್ಲಿರುವ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು, RMU, ವಿದ್ಯುತ್ ಕಂಬಗಳು, ಎರಡು ಕಂಬಗಳ ಪರಿವರ್ತಕ ಕೇಂದ್ರಗಳು ಹಾಗೂ ಸ್ಪನ್ ಪೋಲ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಮತ್ತು ಪ್ರಾಗಂಣ ಪ್ರದೇಶವನ್ನು ಸ್ವಚ್ಛಗೊಳಿಸಲಾಗುತ್ತಿದೆ.

Leave a Reply

Your email address will not be published. Required fields are marked *