BBMP
Loading ...

Roy

Greater Bengaluru News9 : ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಸಿ.ಜೆ.ರಾಯ್ ಸಹೋದರ ಬಾಬು ಸಿ.ಜೋಸೆಫ್ ನ್ಯೂಸ್ ಫಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಬು ಸಿ.ಜೋಸೆಫ್ ಅವರು ವೈಟ್ ಗೋಲ್ಡ್ ಕಂಪನಿಯ ಮಾಲೀಕರೂ ಆಗಿದ್ದಾರೆ.

ನ್ಯೂಸ್​ಫಸ್ಟ್​ಗೆ ಬಾಬು ಸಿ.ಜೋಸೆಫ್​ ಹೇಳಿರುವ ಪ್ರಕಾರ, ನನಗೆ ಗೊತ್ತಿರುವಂತೆ 3 ದಿನಗಳಿಂದ IT ದಾಳಿ ನಡೆಯುತ್ತಿತ್ತು ಎಂದಿದ್ದಾರೆ. ಕೇರಳ IT ಅಧಿಕಾರಿ ಕೃಷ್ಣಪ್ರಸಾದ್ ವಿರುದ್ಧ ಬಾಬು ಸಿ. ಜೋಸೆಫ್ ಗಂಭೀರ ಆರೋಪ ಮಾಡಿದ್ದಾರೆ. IT ಅಧಿಕಾರಿ ಕೃಷ್ಣಪ್ರಸಾದ್ ಒತ್ತಡ ಹೇರಿದ್ದಾರೆ ಎಂದು ಬಾಬು ಸಿ.ಜೋಸೆಫ್ ಆರೋಪಿಸಿದ್ದಾರೆ. ನನ್ನ ಸಹೋದರನ ಸಾವಿಗೆ IT ಅಧಿಕಾರಿಗಳೇ ಕಾರಣ ಎಂದು ಬಾಬು ಸಿ. ಜೋಸೆಫ್ ಹೇಳಿದ್ದಾರೆ.

ವ್ಯಾಪಾರದಲ್ಲಿ ಏನೂ ತೊಂದರೆ ಇರಲಿಲ್ಲ. ಬೆಳಗ್ಗೆ 11 ಗಂಟೆಗೆ ನನ್ನ ಜೊತೆ ಮಾತಾಡಿದ್ದಾನೆ. ನನ್ನ ಸಹೋದರ ನಿತ್ಯ ನನ್ನ ಜೊತೆ ಮಾತಾಡುತ್ತಿದ್ದ. ನನಗೆ ಕರೆ ಮಾಡಿದ್ದಾಗ ಕಚೇರಿಯಲ್ಲಿದ್ದ . ಯಾವಾಗ ಬರ್ತಿಯಾ ಅಂತ ಕೇಳಿದ್ದ. ಇವತ್ತು ನನ್ನ ಜೊತೆಗೆ ನಾರ್ಮಲ್ ಆಗಿಯೇ ಮಾತಾಡಿದ್ದ. ಅವರಿಗೆ ಯಾವುದೇ ಸಾಲ ಇರಲಿಲ್ಲ . ನನ್ನ ಸಹೋದರನ ಸಾವಿಗೆ ಐ.ಟಿ. ಇಲಾಖೆಯ ಅಧಿಕಾರಿ ಕೃಷ್ಣಪ್ರಸಾದ್ ಕಾರಣ. ನನ್ನ ಸಹೋದರ ನನ್ನ ಬಳಿ ಎಲ್ಲಾ ಹಂಚಿಕೊಳ್ಳುತ್ತಿದ್ದ ಎಂದಿದ್ದಾರೆ.

ಈ ದೇಶದಲ್ಲಿ 6% ಇನ್​ಕಂ ಟ್ಯಾಕ್ಸ್ ಕಟ್ಟುತ್ತಾರೆ. ಉದ್ಯಮಿಗಳಿಗೆ ಈ ದೇಶದಲ್ಲಿ ವ್ಯವಸ್ಥೆ ಸರಿ ಇಲ್ಲ. ಐಟಿ ಅಧಿಕಾರಿಗಳು ನನ್ನ ಮನೆಗೂ ಬಂದಿದ್ದರು . ಅವರ ಕೇಸ್ ವಿಚಾರವಾಗಿ ನನ್ನ ಮನೆಗೂ ಬಂದಿದ್ರು. ರಿಯಲ್ ಎಸ್ಟೇಟ್​ ವಿಚಾರಕ್ಕೆ ಐಟಿ ಪರಿಶೀಲನೆ ಇತ್ತು . ಕಳೆದ 20 ವರ್ಷದ ಹಿಂದೆಯೇ ಗನ್ ಖರೀದಿಸಿದ್ದ. ಇನ್​ಕಮ್​ ಟ್ಯಾಕ್ಸ್ ಒತ್ತಡ ವಿಚಾರ ನನಗೆ ಹೇಳಿದ್ರು. 1 ತಿಂಗಳ ಹಿಂದಿನಿಂದಲೂ ನನ್ನ ಬಳಿ ಹೇಳುತ್ತಿದ್ದರು.

IT ಇಲಾಖೆ ಹೆಚ್ಚುವರಿ ಆಯುಕ್ತ ಕೃಷ್ಣಪ್ರಸಾದ್ ಅವರೇ ಸಿ.ಜೆ.ರಾಯ್ ಸಾವಿಗೆ ಹೊಣೆ. ನಾನು ಬೆಳಗ್ಗೆ ಬೆಂಗಳೂರು ತಲುಪಲಿದ್ದೇನೆ ಎಂದು ಬಾಬು ಸಿ.ಜೆ. ಹೇಳಿದ್ದಾರೆ. ಸಿ.ಜೆ. ರಾಯ್ ಅವರ ಕುಟುಂಬ ಬೆಳಗಿನ ಜಾವ 3 ಗಂಟೆಗೆ ಬರುತ್ತಾರೆ ಎಂದು ನ್ಯೂಸ್​ಫಸ್ಟ್​ಗೆ ಸಿ.ಜೆ.ರಾಯ್ ಸಹೋದರ ಬಾಬು ಸಿ. ಜೋಸೆಫ್ ಹೇಳಿದ್ದಾರೆ.

Leave a Reply

Your email address will not be published. Required fields are marked *