ತುಮಕೂರು: ಇದೇ ಬುಧವಾರದಂದು (ಮಾ. 04) ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಬೆಣಚುಕಲ್ಲು ಗ್ರಾಮದ ಉದ್ದವಮೂರ್ತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶಕ ವರ್ಷಂಗಳು 1946ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರದ ಉತ್ತರಾಯಣ ಪಾಲ್ಗುಣ ಮಾಸ ಶುಕ್ಲಪಕ್ಷ ದಿನಾಂಕ: 04-03-2026ನೇ ಬುಧವಾರ ಪುಬ್ಬ ನಕ್ಷತ್ರ ಈ ಶುಭದಿನ ಮಧ್ಯಾಹ್ನ 1.30 ರಿಂದ 2-00 ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಬೆಣಚಕಲ್ಲು ಗ್ರಾಮದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವವನ್ನು ಎಲೆಕಡಕಲು ಗ್ರಾಮಸ್ಥರು ನಡೆಸಿಕೊಡಲಿದ್ದಾರೆ.

ಮಾರ್ಚ್ 03ರ ಮಂಗಳವಾರದಿಂದ ಮಾರ್ಚ್ 06ರ ಶುಕ್ರವಾರದವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅನ್ನಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.
ಈ ಉತ್ಸವದ ಅಧ್ಯಕ್ಷತೆಯನ್ನು ಕುಣಿಗಲ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಹೆಚ್.ಡಿ. ರಂಗನಾಥ ಹಾಗೂ ಕುಣಿಗಲ್ ತಾಲೂಕಿನ ತಹಸೀಲ್ದಾರರಾದ ಕರಿಯಾನಾಯಕ್ರವರು ವಹಿಸಲಿದ್ದಾರೆ.
ಕಾರ್ಯಕ್ರಮದ ಸಂಪೂರ್ಣ ವಿವರಗಳು ಈ ಕೆಳಕಂಡಂತಿವೆ….




