BBMP
Loading ...

Borewell

ಬೆಂಗಳೂರಿನಲ್ಲಿ ಜಲಮಂಡಳಿಯು ಬೋರ್‌ವೆಲ್ ಕೊರೆಯಬಾರದು ಎಂದು ನಿರ್ದೇಶನ ನೀಡಿದೆ. ಅಲ್ಲದೆ ಬೇಸಿಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದು ಪ್ರಮುಖ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಬೋರ್‌ವೆಲ್ ಕೊರೆಯಬಾರದು. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೆ, ಇದೀಗ ಬೆಂಗಳೂರಿನಲ್ಲಿ ಬೋರ್‌ವೆಲ್‌ ಮಾಫಿಯಾ ನಡೆಯುತ್ತಿರುವುದಾಗಿ ಹಾಗೂ ಅದಕ್ಕೆ ಸರ್ಕಾರದ ಪ್ರಮುಖ ಇಲಾಖೆಯೇ ಸಹಕಾರ ನೀಡುತ್ತಿರುವ ಬಗ್ಗೆ ಗಂಭೀರವಾದ ಆರೋಪಗಳು ಕೇಳಿ ಬಂದಿವೆ.

ಬೆಂಗಳೂರಿನಲ್ಲಿ ಎಲ್ಲರಿಗೂ ತಿಳಿದಿರುವಂತೆ ಜಲಮಂಡಳಿಯು ಈಚೆಗೆ ಬೋರ್‌ವೆಲ್ ಕೊರೆಯುವುದರ ಮೇಲೆ ನಿಷೇಧ ಹೇರಿದೆ. ಆದರೆ, ಇದೀಗ ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರವು / KGWA ಕಾನೂನುಗಳನ್ನು ಉಲ್ಲಂಘನೆ ಮಾಡುವ ಮೂಲಕ ಬೋರ್‌ವೆಲ್‌ಗಳನ್ನು ಕೊರೆಸುವುದಕ್ಕೆ / ಕೊರೆಯುವುದಕ್ಕೆ ಅನುಮತಿ ನೀಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. Whitefield Citizens Ward Committeesನಿಂದ ಈ ರೀತಿಯ ಆರೋಪವೊಂದು ಕೇಳಿ ಬಂದಿದೆ.

KGWA ಮೇಲೆ ಗಂಭೀರ ಆರೋಪ: ಬೆಂಗಳೂರಿನಲ್ಲಿ ಕೆಜಿಡ್ಲ್ಯೂಎ ಅನಧಿಕೃತವಾಗಿ ಹಾಗೂ ಕಾನೂನು ಬಾಹಿರವಾಗಿ ಬೋರ್‌ವೆಲ್‌ಗಳನ್ನು ಕೊರೆಯುವುದಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕೆಜಿಡ್ಲ್ಯೂಎ ಅಧಿಕಾರಿಗಳು ಯಾವುದೇ ಸ್ಥಳ ಪರಿಶೀಲನೆ ಮಾಡದೆ. ಬೋರ್‌ವೆಲ್ ಕೊರೆಯುವುದಕ್ಕೆ ಸೂಕ್ತ ಪ್ರದೇಶವೇ ಎನ್ನುವ ಯಾವುದೇ ಅಂಶಗಳನ್ನು ಸಹ ಈ ಸಂದರ್ಭಗಳಲ್ಲಿ ಗಮನಿಸುತ್ತಿಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ಈ ಬೋರ್‌ವೆಲ್‌ಗಳನ್ನು ಬಳಸಲಾಗುತ್ತಿದೆಯೇ ಎನ್ನುವುದು ಪರಿಶೀಲನೆ ಮಾಡುತ್ತಿಲ್ಲ. ನೀರನ್ನು ಯಾವುದಾದರು ಮನೆ / ಕಟ್ಟಡ ನಿರ್ಮಾಣ ಬಳಕೆಗೆ ಮಾತ್ರ ಬಳಸಲಾಗಿದೆಯೇ ಎಂದು ಪರಿಶೀಲನೆ ಮಾಡುತ್ತಿಲ್ಲ ಎಂದು ವೈಟ್‌ಫೀಲ್ಡ್‌ನ ನಿವಾಸಿಗಳು ದೂರಿದ್ದಾರೆ.

ವೈಟ್‌ಫೀಲ್ಡ್‌ನಲ್ಲಿರುವ ಪ್ರತಿಯೊಂದು ಬೃಹತ್‌ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಅಂತರ್ಜಲದ ವ್ಯಾಪಕ ದುರುಪಯೋಗ ಮಾಡಲಾಗುತ್ತಿದ್ದು. ಇದರಲ್ಲಿ ಈ ಪ್ರಾಧಿಕಾರವು ಸಂಪೂರ್ಣವಾಗಿ ವಿಫಲವಾಗಿರುವುದು ಬಹಿರಂಗವಾಗಿದೆ. ಅಂತರ್ಜಲದ ದುರುಪಯೋಗವನ್ನು ನಿಯಂತ್ರಿಸಲು ಅಂತಹ ಯಾವುದೇ ಪ್ರಾಧಿಕಾರ ಅಸ್ತಿತ್ವದಲ್ಲಿಲ್ಲ ಎಂಬಂತೆ ವರ್ತಿಸುತ್ತಿದೆ. ಈ ರೀತಿ ಕೆಲಸ ಮಾಡದ ಅನುಪಯುಕ್ತ ಪ್ರಾಧಿಕಾರಕ್ಕೆ ನಮ್ಮ ತೆರಿಗೆ ಹಣವನ್ನು ಏಕೆ ಖರ್ಚು ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಸಂದೀಪ್ ಅನಿರುದ್ಧನ್ ಅವರು ಪ್ರಶ್ನೆ ಮಾಡಿದ್ದಾರೆ.

ಈ ಪ್ರಾಧಿಕಾರವು ಅಸ್ತಿತ್ವದಲ್ಲಿರುವ ಏಕೈಕ ಉದ್ದೇಶವೆಂದರೆ ಅಂತರ್ಜಲವನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು. ಇದು ಸಾರ್ವಜನಿಕ ಸಂಪನ್ಮೂಲವಾಗಿದ್ದು, ಅತಿಯಾಗಿ ಬಳಸಲ್ಪಡುವ ನವೀಕರಿಸಲಾಗದ ಸಂಪನ್ಮೂಲವಾಗಿದೆ ಮತ್ತು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಬಳಕೆಗೆ ಸುರಕ್ಷಿತವಾಗಿಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮುಂದುವರಿದು ಕಾನೂನಿನ ಪ್ರಕಾರ, ಬೆಂಗಳೂರಿನ ಎಲ್ಲಾ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕಡಿಮೆ ಇರುವುದರಿಂದ ಸಾರ್ವಜನಿಕವಾಗಿ ಈಗಾಗಲೇ ಬಳಕೆ ಮಾಡಲಾಗುತ್ತಿರುವ ಸಾರ್ವಜನಿಕ ಬೋರ್‌ವೆಲ್‌ಗಳನ್ನು ಹೊರತುಪಡಿಸಿ ಯಾವುದೇ ಬೋರ್‌ವೆಲ್ ಅನುಮತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಈ ಭಾಗದಲ್ಲಿ ಕೆಜಿಡ್ಲ್ಯೂಎ ಬಿಲ್ಡರ್‌ಗಳ ಮಾಫಿಯಾಕ್ಕೆ ಮಣಿಯುತ್ತಿದೆ ಎಂದು ಅವರು ದೂರಿದ್ದಾರೆ.

ಬೆಂಗಳೂರಿನಲ್ಲಿ ಕುಡಿಯುವ ಹಾಗೂ ನೀರಿನ ಸಮಸ್ಯೆಯ ಆತಂಕ ಇದೆ. ಈ ರೀತಿ ಇರುವಾಗಲೇ ಬೋರ್‌ವೆಲ್‌ಗಳನ್ನು ಕೊರೆಯುವುದಕ್ಕೆ ಅನುಮತಿ ನೀಡುವ ಮೂಲಕ ನೀರಿನ ಸಮಸ್ಯೆಯನ್ನು ಹೆಚ್ಚಳ ಮಾಡುತ್ತಿದೆ ಎಂದೂ ಆರೋಪಿಸಲಾಗಿದೆ.

ಏಪ್ರಿಲ್ 1 ರಿಂದ ಈ ಮೊಬೈಲ್ ಸಂಖ್ಯೆಗಳಲ್ಲಿ G-Pay, Phone-Pe ಕಾರ್ಯನಿರ್ವಹಿಸುವುದಿಲ್ಲ

Leave a Reply

Your email address will not be published. Required fields are marked *