ಹಾಸನ: ಹಾಸನದ ಶಕ್ತಿದೇವತೆ ಹಾಸನಾಂಬ ದೇವಿಯ ದೇಗುಲದ ಬಾಗಿಲನ್ನು ವರ್ಷಕ್ಕೊಮ್ಮೆ ತೆರೆದು ವಿವಿಧ ಪೂಜಾ ಕೈಂಕರ್ಯದೊಂದಿಗೆ ತಾಯಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವುದು ಹಿಂದಿನಿಂದಲೂ ನಡೆದು ಬಂದಿದೆ. ಅದರಂತೆ ಈ ಬಾರಿಯೂ ಅಕ್ಟೋಬರ್ 24 ರಂದು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ದೇಗುಲದ ಬಾಗಿಲನ್ನು ತೆರೆಯಲಾಗಿದೆ. ಹನ್ನೊಂದು ದಿನಗಳ ಕಾಲ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದೆ. ಇದೀಗ ಈ ಶುಭಗಳಿಗೆಗಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದು ಅತ್ಯಂತ ಸುಲಭವಾಗಿ ಹೇಗೆ ದರ್ಶನ ಮಾಡುವುದು ಎಂಬುದನ್ನು ತಿಳಿಯೋಣ ಬನ್ನಿ.
ಕಳೆದ ವರ್ಷ ಹಾಸನಾಂಬ ದೇವಸ್ಥಾನ ತೆರೆದಿದ್ದಾಗ 14 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ಬಾರಿ 20 ಲಕ್ಷಕ್ಕೂ ಮೀರಿ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಅಷ್ಟು ದೊಡ್ಡ ಭಕ್ತ ಸಮೂಹವನ್ನು ನಿಯಂತ್ರಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆಗಳನ್ನು ಮಾಡಿದೆ. ಇದರ ಜೊತೆಗೆ, ಕ್ಯುನಲ್ಲಿ ಬರುವವರು ಹೆಚ್ಚು ಹೊತ್ತು ಕಾಯದೇ, ಸರಾಗವಾಗಿ ದರ್ಶನ ಮಾಡುವಂತೆ ಮಾಡಲು ಕ್ಯುಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಆನ್‌ಲೈನ್ ಬುಕ್ಕಿಂಗ್ ಪ್ರಾರಂಭವಾಗಿ ಟಿಕೆಟ್‌ಗಳು ಲಭ್ಯವಿದ್ದು, ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವದ ಟಿಕೆಟ್‌ಗಳಿಗಾಗಿ ಈ ಕೂಡಲೇ QR ಕೋಡ್ ಸ್ಕಾನ್ ಮಾಡಿ, ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಿ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೀವು ಅತ್ಯಂತ ಬೇಗವಾಗಿ ಯಾವುದೇ ಕಿರಿಕಿರಿ ಹಾಗೂ ಸಾರ್ವಜನಿಕರ ದಟ್ಟಣೆ ಇಲ್ಲದೆ ಸುಲಭವಾಗಿ ದೇವಿಯ ದರ್ಶನ ಮಾಡಬಹುದು. ಹಾಗಿದ್ರೆ ಬನ್ನಿ ಆನ್ಲೈನ್ ಬುಕಿಂಗ್ ಮಾಡುವ ವಿಧಾನ ತಿಳಿಯೋಣ.
ಹಂತ 1
ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ 1000 ಮೊತ್ತದ ಅಥವಾ 300 ಮೊತ್ತದ ಟಿಕೆಟ್ ದೊರೆಯಲಿದ್ದು ನಿಮಗೆ ಯಾವ ಮೊತ್ತದ ಟಿಕೆಟ್ ಅವಶ್ಯಕವೋ ಅದನ್ನು ನೀವು ಆಯ್ಕೆ ಮಾಡಬಹುದು.1 ಸಾವಿರ ಮೊತ್ತದ ಟಿಕೆಟ್ ನಲ್ಲಿ ಶೀಘ್ರವಾಗಿ ದರ್ಶನ ಭಾಗ್ಯ ದೊರೆಯಲಿದೆ.
ಹಂತ 2
ನೀವು ನಿಮ್ಮ ಹೆಸರು, ಸಂಪರ್ಕ ಸಂಖ್ಯೆ , ಭಕ್ತಾದಿಗಳ ಸಂಖ್ಯೆ ಜೊತೆಗೆ ಆಧಾರ್ ಸಂಖ್ಯೆ ನಮೂದಿಸುವ ಮೂಲಕ ಯಾವ ದಿನದದ್ದು ದರ್ಶನಕ್ಕೆ ಬರುವ ದಿನಾಂಕವನ್ನು ತಿಳಿಸಬೇಕು. ಬಳಿಕ ಮುಂದುವರೆದಂತೆ ಹಂತ 3 ರಲ್ಲಿ ನೀಡಿರುವ ನಿಬಂಧನೆಗಳಿಗೆ ಸಂಪೂರ್ಣ ಒಪ್ಪಿಗೆ ಸೂಚಿಸಬೇಕು
ಹಂತ 3
ಕೊನೆಯದಾಗಿ ಪ್ರವೇಶ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು, ಭಕ್ತಾದಿಗಳ ಸಂಖ್ಯೆ ಗೆ ಅನುಗುಣವಾಗಿ ಪಾವತಿ ಮಾಡಬೇಕು, ಅಂತಿಮವಾಗಿ ಟಿಕೆಟ್ ಬುಕಿಂಗ್ ಆಗಲಿದೆ.
ನಿಬಂಧನೆಗಳು
1. ಒರಿಜಿನಲ್ ಆಧಾರ್ ಪ್ರತಿ ತರುವುದು ಕಡ್ಡಾಯ. (ಟಿಕೆಟ್ ಬುಕಿಂಗ್ ಗೆ ನೀಡಿದ ಆಧಾರ್ ಪ್ರತಿ)
2. QR Code ತೋರಿಸಿ Entry Pass ಪಡೆಯುವುದು ಕಡ್ಡಾಯ.
3. QR Code 3 Digital View ಮಾತ್ರ ಪರಿಗಣಿಸಲಾಗುವುದು.
4. QR Code ಮುದ್ರಿತ ಪ್ರತಿಗೆ ಪ್ರವೇಶ ಮಾನ್ಯತೆ ಇರುವುದಿಲ್ಲ.
5. Digital QR code ನಕಲಿ ಪ್ರವೇಶ ಮಾನ್ಯತೆ ಪಡೆಯುವುದಿಲ್ಲ.
6. ಒಮ್ಮೆ QR Code ಪ್ರದರ್ಶಿಸಿ Entry Pass ವಿತರಣೆಯಾದರೆ ಅದೇ ಅಂತಿಮ. ಎರಡನೇ ಬಾರಿಗೆ QR Code ಅಮಾನ್ಯಗೊಳ್ಳುತ್ತದೆ.
7. ಈ ಕುರಿತು ಯಾವುದೇ ಲೋಪಗಳು ಉಂಟಾದರೆ ಜಿಲ್ಲಾಡಳಿತ ಜವಾಬ್ದಾರಿ ಆಗಿರುವುದಿಲ್ಲ
ಪ್ರವಾಸಿಗರ ಗಮನಕ್ಕೆ: ಇಂದಿನಿಂದ ಮೈಸೂರು ಅರಮನೆ ಪ್ರವೇಶ ಶುಲ್ಕ ಹೆಚ್ಚಳ: ಹೀಗಿದೆ ಪರಿಷ್ಕೃತ ದರ ಪಟ್ಟಿ


