BBMP
Loading ...

Metro

Greater Bengaluru News9: ನಮ್ಮ ಮೆಟ್ರೋದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ಮೆಟ್ರೋದಲ್ಲಿ ಕ್ಯೂ ಆರ್ ಕೋಡ್ ಆಧರಿತ ಪಾಸ್ ಗಳು ಸಿಗಲಿವೆ. ದಿನದ ಪಾಸ್,‌ ಮೂರು ದಿನದ ಪಾಸ್ ಮತ್ತು ಐದು ದಿನದ ಪಾಸ್ ಲಭ್ಯವಾಗಲಿವೆ. 1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣ ಪಾಸ್ ಅನ್ನು ಬಿಎಂಆರ್‌ಸಿಎಲ್ ಪರಿಚಯಿಸಿದೆ.

ಜನವರಿ 15 ರಿಂದ‌ ಮೆಟ್ರೋದಲ್ಲಿ ಕ್ಯೂ ಆರ್ ಕೋಡ್ ಪಾಸ್ ಗಳು ಜಾರಿಯಾಗಲಿವೆ. ಡಿಜಿಟಲ್ ಟಿಕೆಟ್ ವ್ಯವಸ್ಥೆ ಉತ್ತೇಜಿಸಲು ಬಿಎಂಆರ್‌ಸಿಎಲ್ ಈ ಕ್ರಮ ಕೈಗೊಂಡಿದೆ. ಸದ್ಯ ಬಿಎಂಆರ್‌ಸಿಎಲ್ ಅಧಿಕೃತ ಆ್ಯಪ್ ಮೂಲಕ ಕ್ಯೂ ಆರ್ ಟಿಕೆಟ್ ಖರೀಸಬಹುದು .

ಶೀಘ್ರದಲ್ಲೇ ಇತರ ಮೊಬೈಲ್ ಆ್ಯಪ್ ಗಳಲ್ಲಿ ಕ್ಯೂ ಆರ್ ಟಿಕೆಟ್ ಗಳನ್ನು ಖರೀದಿಸಬಹುದು. ಇಷ್ಟು ದಿನ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್ ಗಳ ಮೂಲಕ ಮಾತ್ರ ಅನಿಯಮಿತ ಪಾಸ್ ಇತ್ತು. ಅದಕ್ಕಾಗಿ ಭದ್ರತಾ ಠೇವಣಿ 50₹ ಪಾವತಿ ಮಾಡಬೇಕಿತ್ತು. ಈಗ ಮೊಬೈಲ್‌ನಲ್ಲೇ QR ಕೋಡ್ ಬಳಸಿ ಪಾಸ್ ಪಡೆಯಬಹುದು. ಯಾವುದೇ ಭದ್ರತಾ ಠೇವಣಿ ಇರುವುದಿಲ್ಲ.

ಪಾಸ್ ದರಗಳು (ಮೊಬೈಲ್ QR ಪಾಸ್)
▪️ 1 ದಿನದ ಪಾಸ್ – 250 ರೂಪಾಯಿ
▪️ 3 ದಿನಗಳ ಪಾಸ್ – 550 ರೂಪಾಯಿ
▪️ 5 ದಿನಗಳ ಪಾಸ್ – 850 ರೂಪಾಯಿ

ಪಾಸ್ ದರಗಳು (ಸ್ಮಾರ್ಟ್ ಕಾರ್ಡ್ ದರ 50 ರೂಪಾಯಿ ಠೇವಣಿ ಸೇರಿ)
▪️ 1 ದಿನದ ಪಾಸ್ – 300 ರೂಪಾಯಿ
▪️ 3 ದಿನಗಳ ಪಾಸ್ – 600 ರೂಪಾಯಿ
▪️ 5 ದಿನಗಳ ಪಾಸ್ – 900 ರೂಪಾಯಿ

Leave a Reply

Your email address will not be published. Required fields are marked *