BBMP
Loading ...

Smart Meter

ಬೆಂಗಳೂರು: ನಗರವಾಸಿಗಳಿಗೆ ಶೀಘ್ರದಲ್ಲೇ ವಿದ್ಯುತ್ ಮೀಟರ್​ಗಳ ಮಾಲೀಕತ್ವವನ್ನು ವರ್ಗಾಯಿಸಲು ಅನ್‌ಲೈನ್ ವ್ಯವಸ್ಥೆ ಮೂಲಕ ಸುಲಭವಾಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹಾಗೂ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಂಯೋಜನೆಯೊಂದಿಗೆ ‘ಅಟೋಮೆಟಿಕ್ ನೇಮ್ ಚೇಂಜ್ ಟ್ರಿಗರ್’ ಆನ್‌ಲೈನ್ ಪೋರ್ಟಲ್ ಅನ್ನು ಪ್ರಸ್ತುತ ಪಡಿಸಲಿದ್ದು, ಆಸ್ತಿ ಗುರುತಿನ ಚೀಟಿ ಆಧಾರದಲ್ಲಿ ವರ್ಗಾವಣೆಗಳು ನಡೆಯಲಿದೆ.

ಆಸ್ತಿ ಗುರುತಿನ ಚೀಟಿ ಆಧಾರದಲ್ಲಿ ವರ್ಗಾವಣೆಗೆ ಆನ್ ಲೈನ್‌ನಲ್ಲಿ ವ್ಯವಸ್ಥೆ ಹೆಸರು ವರ್ಗಾವಣೆ ಸಮಸ್ಯೆ ನಗರದಲ್ಲಿ ಆಳವಾಗಿ ಬೇರೂರಿದ್ದು, ಸದ್ಯ ಇದಕ್ಕೆ ಪರಿಹಾರ ಸಿಗುವಂತಿದೆ. ಮುಖ್ಯವಾಗಿ ವಸತಿ ಸಮುಚ್ಚಯಗಳಲ್ಲಿ ವಾಸಿಸುವ ಜನರಿಗೆ ಕಟ್ಟಡ ಮಾಲೀಕರಿಂದ ಅಥವಾ ಜಾಗದ ಮಾಲೀಕರಿಂದ ಮೀಟರ್ ಒಡೆತನ ಸಿಗದೆ ಸಾಕಷ್ಟು ಸಮಸ್ಯೆ ಗಳಾಗಿತ್ತು. ಇನ್ನುಮುಂದೆ ಸುಲಭವಾಗಿ ಆನ್‌ಲೈನ್ ಮೂಲಕ ವರ್ಗಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಹಾಗೂ ಬಿಬಿಎಂಪಿ ಆನ್‌ಲೈನ್ ವ್ಯವಸ್ಥೆ ಪ್ರಕ್ರಿಯೆಯನ್ನು ಪ್ರೇರೇಪಿಸಿದೆ. ಇ-ಖಾತಾ ಕಡ್ಡಾಯ ವಾಗುತ್ತಿದ್ದಂತೆ ಮೀಟರ್ ಹೆಸರು ಬದಲಾವಣೆಗೆ ಬೆಸ್ಕಾ ಉಪವಿಭಾಗ ಕಚೇರಿಗಳಲ್ಲಿ ಮನವಿಗಳು ಅಧಿಕವಾಗ ತೊಡಗಿದೆ. ಇದರಿಂದ ಬೆಸ್ಕಾಂ ಸಿಬ್ಬಂದಿಗೂ ತಲೆನೋವಾಗಿತ್ತು. ಇನ್ನುಮುಂದೆ ಆನ್‌ಲೈನ್ ಪೋರ್ಟಲ್ ಸಹಾಯ ದಿಂದ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೆ, ಜಗಳಮುಕ್ತವಾಗಿ ಮೀಟರ್ ಹೆಸರು ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಿದ ಕೇವಲ 15 ದಿನದಲ್ಲಿ ನಿಮ್ಮ ಕಟ್ಟಡಕ್ಕೆ ಸಿಗಲಿದೆ ‘ನಂಬಿಕೆ ನಕ್ಷೆ’

Leave a Reply

Your email address will not be published. Required fields are marked *