ಬೆಂಗಳೂರು: ಕಾವೇರಿಪುರ ವಾರ್ಡ್ ನಂಬರ್ 103ರಲ್ಲಿ ಇದೇ ಶನಿವಾರ (ಮೇ 18)ದಂದು ಬೆಸ್ಕಾಂ ವತಿಯಿಂದ ಗ್ರಾಹಕರ ಸಂವಾದ ಸಭೆಯನ್ನು ಆಯೋಜಿಸಲಾಗಿದೆ.
ಎನ್10 ಉಪವಿಭಾಗದಲ್ಲಿ ಪ್ರತಿ ತಿಂಗಳ 03 ನೇ ಶನಿವಾರದಂದು ಗ್ರಾಹಕರ ಕುಂದುಕೊರತೆಗಳ ನಿವಾರಣೆಗಾಗಿ ಗ್ರಾಹಕರ ಸಂವಾದ ಸಭೆಯು ನಡೆಯುತ್ತಿರುತ್ತದೆ. ಅದರಂತೆ ದಿನಾಂಕ: 18.05.2024 ರಂದು ಸಮಯ ಮಧ್ಯಾಹ್ನ 3:00 ಘಂಟೆಯಿಂದ 5:00 ಘಂಟೆಯವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕಾವೇರಿಪುರ ವಾರ್ಡ್ 103 ಕಛೇರಿಯ ಆವರಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ರಾಜಾಜಿನಗರ ವಿಭಾಗ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಎನ್10 ಉಪವಿಭಾಗ ಬೆವಿಕಂ ರವರ ಅಧ್ಯಕ್ಷತೆಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಆಯೋಜಿಸಿದೆ.
ಗ್ರಾಹಕರು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು ಬೆಸ್ಕಾಂ ಮನವಿ ಮಾಡಿದೆ.
ವಿದ್ಯುತ್ಚ್ಛಕ್ತಿ ಸಂಬಂಧಿಸಿದ ದೂರುಗಳಿಗೆ 1912 ನಂಬರ್ ಗೆ ಸಂಪರ್ಕಿಸಲು ತಿಳಿಲಾಗಿದೆ.
10ನೇ ಉತ್ತರ ಉಪವಿಭಾಗ, ಮೂಡಲಪಾಳ್ಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ.



