BBMP
Loading ...

BESCOM

Greater Bengaluru News9 : ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮನೆಗಳಿಗೆ ಮಾಹಿತಿ ಪರಿಶೀಲನೆಗೆ ಮೀಟರ್‌ ರೀಡರ್‌ಗಳು ನಿಯೋಜನೆಗೊಂಡಿದ್ದು, ಜುಲೈ ತಿಂಗಳಲ್ಲಿ ಗೃಹ ಬಳಕೆ ಗ್ರಾಹಕರಿಗೆ ಸರಾಸರಿ ಬಿಲ್‌ ನೀಡಲಾಗಿದೆ. ಬಿಲ್‌ ಮೊತ್ತವನ್ನು ನಿಗದಿತ 15 ದಿನಗಳ ಒಳಗೆ ಪಾವತಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ತಮ್ಮ ವಿದ್ಯುತ್‌ ಸ್ಥಾವರಗಳ ಮೀಟರ್‌ ರೀಡಿಂರ್‌ಗೆ ಮೀಟರ್‌ ರೀಡರ್‌ಗಳು ಬಂದಿಲ್ಲ ಎಂಬ ಆತಂಕಕ್ಕೆ ಗ್ರಾಹಕರು ಒಳಗಾಗಬೇಕಾಗಿಲ್ಲ. ಈಗಾಗಲೇ ಗೃಹ ಬಳಕೆದಾರರಿಗೆ ಸರಾಸರಿ ವಿದ್ಯುತ್‌ ಬಿಲ್‌ಗಳನ್ನು ವಿವಿಧ ವಿಧಾನಗಳ ಮೂಲಕ ನೀಡಲಾಗಿದ್ದು, ಗ್ರಾಹಕರು ತಮ್ಮ ಪಾವತಿ ವಿಧಾನಗಳ ಮೂಲಕ ಬಿಲ್‌ ಮೊತ್ತವನ್ನು ಪರಿಶೀಲಿಸಿ ಪಾವತಿ ಮಾಡಲು ಬೆಸ್ಕಾಂ ಕೋರಿದೆ.

ಮೂರು ವಿಧಾನದಲ್ಲಿ ಸರಾಸರಿ ಬಿಲ್‌ ಲಭ್ಯ
ಜುಲೈ ತಿಂಗಳಲ್ಲಿ ಗ್ರಾಹಕರಿಗೆ ಭೌತಿಕ ಬಿಲ್‌ ನೀಡದೆ, ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್‌ ಬಳಕೆ ಆಧಾರದ ಮೇಲೆ ಸರಾಸರಿ ಬಿಲ್‌ ನೀಡಲಾಗಿದೆ. ಬಿಲ್‌ ಮೊತ್ತ ಮೂರು ವಿಧಾನಗಳಲ್ಲಿ ಲಭ್ಯವಿದೆ.

  • ಮೀಟರ್‌ ನೋಂದಣಿಯಾದ ಮೊಬೈಲ್ ಸಂಖ್ಯೆ ಎಸ್‌ಎಂಎಸ್‌ ಬಂದಿರುತ್ತದೆ.
  • ಮೀಟರ್‌ ನೋಂದಣಿ ವೇಳೆ ನೀಡಿದ ಇಮೇಲ್‌ ಐಡಿಗೆ ಸಂದೇಶ ಕಳುಹಿಸಲಾಗಿರುತ್ತದೆ.
  • ಜತೆಗೆ ಈ ಹಿಂದೆ ಕರೆಂಟ್‌ ಬಿಲ್‌ ವಾಪತಿಸಿದ್ದ ಆಪ್‌ಗಳಲ್ಲಿಯೂ (ಫೋನ್‌ ಪೇ, ಗೂಗಲ್‌ ಪೇ, ಅಮೆಜಾನ್ ಪೇ ಇತರೆ) ನೋಟಿಫಿಕೇಶನ್‌ನಲ್ಲಿ ಲಭ್ಯವಿದೆ.

ಬಿಲ್‌ ನೀಡಿದ ದಿನದಿಂದ 15 ದಿನ ಕಾಲಾವಕಾಶ
ಗ್ರಾಹಕರು ಜುಲೈ ಬಿಲ್‌ನ ಪಾವತಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಪಾವತಿ ವಿಧಾನಗಳಾದ ಉಪ ವಿಭಾಗದ ನಗದು ಕೌಂಟರ್ ಗಳು, ಬೆಸ್ಕಾಂ ವೆಬ್ ಸೈಟ್, ಬೆಸ್ಕಾಂ ಮಿತ್ರ ಆಪ್ ಹಾಗೂ ಥರ್ಡ್ ಪಾರ್ಟಿ ಆಪ್ ಬಳಸಿಕೊಳ್ಳಬಹುದು. ಬಿಲ್‌ ನೀಡಿರುವ ದಿನದಿಂದ ಪಾವತಿಗೆ 15 ದಿನಗಳ ಕಾಲಾವಕಾಶ ಇದ್ದು, ನಿಗದಿತ ಅವದಿಯೊಳಗೆ ಬಿಲ್‌ ಪಾವತಿ ಮಾಡುವಂತೆ ಬೆಸ್ಕಾಂ ಗ್ರಾಹಕರಿಗೆ ವಿನಂತಿಸಿದೆ. ಆದರೆ, ಎಚ್‌ಟಿ ಗ್ರಾಹಕರು 40 ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಲೋ ಟೆನ್ಷನ್ ಗ್ರಾಹಕರು, ಸೋಲಾರ್ ರೂಫ್‌ಟಾಪ್ ಗ್ರಾಹಕರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ನೈಜ ಮೀಟರ್‌ ರೀಡಿಂಗ್‌ ಆಧಾರದ ಮೇಲೆ ಬಿಲ್‌ ನೀಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಆಗಸ್ಟ್‌ ತಿಂಗಳಿನಿಂದ ಯಥಾಪ್ರಕಾರ ನಿಯಮಿತ ಮೀಟರ್‌ ರೀಡಿಂಗ್‌ ಮತ್ತು ನೈಜ ವಿದ್ಯುತ್‌ ಬಳಕೆಯ ಆಧಾರದಮೇಲೆ ಬಿಲ್‌ ನೀಡಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

Leave a Reply

Your email address will not be published. Required fields are marked *