BBMP
Loading ...

Bescom

ಬೆಂಗಳೂರು: ನಗರದಲ್ಲಿ ಗುತ್ತಿಗೆದಾರರೊಬ್ಬರಿಂದ ಬರೋಬ್ಬರಿ 16 ಲಕ್ಷ ಲಂಚವನ್ನು ಸ್ವೀಕರಿಸುತ್ತಿದ್ದಾಗಲೇ ಬೆಸ್ಕಾಂ ಎಇಇ, ಎಇ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರಿನ ಅವಲಹಳ್ಳಿಯ ವಿಭಾಗದ ಬೆಸ್ಕಾಂ ಎಇಇ ರಮೇಶ್ ಬಾಬು ಹಾಗೂ ಎಇ ನಾಗೇಶ್ ಎಂಬುವರು ಗುತ್ತಿಗೆದಾರರೊಬ್ಬರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು.

ಇಂದು 16 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಾಲೇ ಬೆಸ್ಕಾಂ ಎಇಇ ರಮೇಶ್ ಬಾಬು ಹಾಗೂ ಎಇ ನಾಗೇಶ್ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗೇ ಹಿಡಿದಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಬೆಸ್ಕಾಂ ಇತಿಹಾಸದಲ್ಲೇ ಇದು ಅತಿದೊಡ್ಡ ಲಂಚ ಪ್ರಕರಣವಾಗಿದೆ.

Leave a Reply

Your email address will not be published. Required fields are marked *