BBMP
Loading ...

BESCOM

Greater Bengaluru News9 : ಸಾಫ್ಟ್‌ವೇರ್‌ ಉನ್ನತೀಕರಣದ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ-ಬಿಬಿಎಂಪಿ) ವ್ಯಾಪ್ತಿಯ ಗ್ರಾಹಕರಿಗೆ ಕಳೆದ 3 ತಿಂಗಳ ಸರಾಸರಿ ಪರಿಗಣಿಸಿ ಮುಂದಿನ ತಿಂಗಳ ವಿದ್ಯುತ್‌ ಬಿಲ್‌ ವಿತರಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಬಿಲ್ಲಿಂಗ್‌ ತಂತ್ರಜ್ಞಾನದ ಸುಧಾರಣೆಗೆ ಬೆಸ್ಕಾಂನ ಮಾಹಿತಿ ತಂತ್ರಜ್ಞಾನ ವಿಭಾಗವು ಕೈಗೊಂಡಿರುವ ಸಾಫ್ಟ್‌ವೇರ್‌ ಉನ್ನತೀಕರಣ ಕಾರ್ಯ ಪ್ರಗತಿಯಲ್ಲಿರುವುದರಿಂದ ಈ ತಿಂಗಳ (ಅಕ್ಟೋಬರ್‌) 1ರಿಂದ 15ರವರೆಗಿನ ನಿಗದಿತ ಅವಧಿಯಲ್ಲಿ ಮೀಟರ್‌ ರೀಡರ್‌ಗಳು ಜಿಬಿಎ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಾಪನಕ್ಕೆ ಬರುವುದಿಲ್ಲ. ಬದಲಿಗೆ ಗ್ರಾಹಕರ ಕಳೆದ 3 ತಿಂಗಳ ಸರಾಸರಿ ಲೆಕ್ಕ ಹಾಕಿ, ವಿದ್ಯುತ್‌ ಬಿಲ್‌ ನೀಡಲಾಗುತ್ತದೆ. ಬೆಸ್ಕಾಂ ಮಿತ್ರ ಆ್ಯಪ್, ಉಪ ವಿಭಾಗ ಕೇಂದ್ರ, ಯುಪಿಐ ಆ್ಯಪ್‌ಗಳ ಮೂಲಕ ಬಿಲ್‌ ಪಾವತಿಸಬಹುದಾಗಿದೆ ಎಂದು ಕುರಿತು ಪ್ರಕಟಣೆ ಹೊರಡಿಸಿರುವ ಬೆಸ್ಕಾಂ ತಿಳಿಸಿದೆ.

ಈ ಪ್ರಕ್ರಿಯೆಯಿಂದ ಗೃಹಜ್ಯೋತಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *