BBMP
Loading ...

Suspend

ಬೆಂಗಳೂರು, ಮಾರ್ಚ್ 23: ರಿಕವರಿ ಚಿನ್ನ ದುರ್ಬಳಕೆ ಮತ್ತು ಚಿನ್ನದ ವ್ಯಾಪಾರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್​​ಪೇಟೆ ಠಾಣೆ ಪಿಎಸ್​ಐ ಸಂತೋಷ್ ವಿರುದ್ಧ ಎಫ್​​ಐಆರ್​​​ ದಾಖಲಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್​ ಆಯುಕ್ತರು ಅಮಾನತು ಮಾಡಿದ್ದಾರೆ.

2020ರಲ್ಲಿ ಹಲಸೂರು ಗೇಟ್ ಠಾಣೆ ಪಿಎಸ್​ಆರ್ ಆಗಿದ್ದ ಸಂತೋಷ್ ಅವರು ಪ್ರಕರಣವೊಂದರ ರಿಕವರಿ ಚಿನ್ನ ದುರ್ಬಳಕೆ ಮಾಡಿಕೊಂಡಿದ್ದರು. ಹೀಗಾಗಿ, ಚಿನ್ನದ ಅಂಗಡಿ ಮಾಲೀಕನ ಬಳಿ ರಿಕವರಿ ಚಿನ್ನ ತೋರಿಸಬೇಕಿದೆ. ಫೋಟೋ ತೆಗೆಸಿ ವಾಪಸ್ ಕೊಡುತ್ತೇನೆ. ನಿನ್ನ ಬಳಿ ಇರುವ950 ಗ್ರಾಂ ಚಿನ್ನದ ಗಟ್ಟಿ ನೀಡುವಂತೆ ಪಿಎಸ್​ಐ ಸಂತೋಷ ಚಿನ್ನದಂಗಡೆ ಮಾಲೀಕನಿಗೆ ಹೇಳಿದ್ದಾರೆ.

ಮಾತು ನಂಬಿ 950 ಗ್ರಾಂ ಚಿನ್ನದ ಗಟ್ಟಿ‌ಯನ್ನು ಪಿಎಸ್​ಐ ಸಂತೋಷ ಅವರಿಗೆ ಚಿನ್ನದ ಅಂಗಡಿ ಮಾಲೀಕ ನೀಡಿದ್ದಾರೆ. ಚಿನ್ನ ವಾಪಸ್ ಕೇಳಿದಾಗ ಪಿಎಸ್​ಐ ಸಂತೋಷ ಹಣ ನೀಡುತ್ತೇನೆಂದು ಹೇಳಿದ್ದು, ಭದ್ರತೆಗೆ ನಿವೇಶನ​ ಕರಾರು ಮಾಡಿಕೊಟ್ಟಿದ್ದರು.

ಆದರೆ, ನಿವೇಶನವನ್ನು ಪಿಎಸ್​ಐ ಸಂತೋಷ್ ಬೇರೆಯವರಿಗೆ ಮಾರಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನದ ಅಂಗಡಿ ಮಾಲೀಕ ಮತ್ತೆ ಪಿಎಸ್​ಐ ಸಂತೋಷರನ್ನು ಪ್ರಶ್ನಿಸಿದ್ದಾರೆ. ಆಗ, ಪಿಎಸ್​ಐ ಸಂತೋಷ ಚಿನ್ನದ ಅಂಗಡಿ ಮಾಲಿಕರಿಗೆ ಖಾಲಿ ಚೆಕ್ ನೀಡಿದ್ದರು. ಆದರೆ, ಚೆಕ್​ ಕೂಡ ಬೌನ್ಸ್ ಆಗಿತ್ತು. ಮತ್ತೆ ಹಣ ಅಥವಾ ಚಿನ್ನ ಕೇಳಿದಾಗ ಪಿಎಸ್ಐ ಸಂತೋಷ್ ಬೆದರಿಕೆ ಹಾಕಿದ್ದರು.

ಈ ಬಗ್ಗೆ ಚಿನ್ನದ ಅಂಗಡಿ ಮಾಲೀಕ ಪಶ್ಚಿಮ ವಿಭಾಗ ಡಿಸಿಪಿಗೆ ದೂರು‌ ನೀಡಿದ್ದರು. ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ‌ ವಿಚಾರಣೆ ನಡೆಸಿ ವರದಿ ಸಲ್ಲಿಕೆಯಾಗಿದೆ. ಪ್ರಾಥಮಿಕ ವರದಿ ಆಧಾರದ ಮೇಲೆ ಪಿಎಸ್​ಐ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಹೀಗಾಗಿ, ಹಲಸೂರು ಗೇಟ್ ಠಾಣೆಯಲ್ಲಿ ಪಿಎಸ್​ಐ ಸಂತೋಷ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಕೇಸ್ ದಾಖಲಾಗಿದೆ.

ಎಫ್​ಐಆರ್ ದಾಖಲಾದ ಹಿನ್ನೆಲೆಯಲ್ಲಿ ಪಿಎಸ್​ಐ ಸಂತೋಷ್​ರನ್ನು ಅಮಾನತು ಮಾಡಿ ಪೊಲೀಸ್ ಕಮಿಷನರ್ ದಯಾನಂದ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರದಿಂದಲೇ ಸ್ಮಾರ್ಟ್‌ ಮೀಟರ್​ ದಂಧೆ: ಮೀಟರ್‌ ಹೆಸರಲ್ಲಿ ಜನರಿಂದ ಹಣ ಲೂಟಿ ಮಾಡ್ತಿರೋದು ಹೇಗೆ?

Leave a Reply

Your email address will not be published. Required fields are marked *