BBMP
Loading ...

RCB

Greater Bengaluru News9 : ಕ್ರಿಕೆಟ್‌ ಅಭಿಮಾನಿಗಳ ಬಹುನಿರೀಕ್ಷಿತ ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಮಾರ್ಚ್28ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ ಈ ಪಂದ್ಯದ ಟಿಕೆಟ್‌ ಬುಕ್ ಮಾಡುವ ವಿಧಾನಗಳು ಹಾಗೂ ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಿಕೆಟ್‌ಗಳ ಬೇಡಿಕೆ ಗಗನಕ್ಕೇರುವ ನಿರೀಕ್ಷೆಯಿರುವುದರಿಂದ, ಆಸನವನ್ನು ಖಚಿತಪಡಿಸಿಕೊಳ್ಳಲು ಮುಂಚಿತವಾಗಿ ಟಿಕೆಟ್‌ ಬುಕ್‌ ಮಾಡುವುದು ಒಳಿತು. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ತವರು ಮೈದಾದನಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಖರೀದಿ ವಿಧಾನ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹಾಗೂ ಪಂದ್ಯ ನಡೆಯುವ ದಿನದ ವಿಶೇಷ ಮೆಟ್ರೋ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರ್ಚ್ 28 ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ಹಾಗೆಯೇ, ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನೂ ಇದೇ ಮೈದಾನದಲ್ಲಿ ಎದುರಿಸಲಿದೆ. ಇನ್ನೂ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸನಗಳ ಸಂಖ್ಯೆಯನ್ನು ಕಡಿತಗಳಿಸಲಾಗಿದ್ದು, ಮುಂಚಿತವಾಗಿ ಟಿಕೆಟ್‌ ಬುಕ್ ಮಾಡುವುದು ಉತ್ತಮ.

ಐಪಿಎಲ್ 2026ರ ಆರ್‌ಸಿಬಿ ತವರು ಪಂದ್ಯಗಳ ಟಿಕೆಟ್‌ಗಳು ಆರ್‌ಸಿಬಿ ಆ್ಯಪ್ ಮತ್ತು ಆರ್‌ಸಿಬಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯ ಇರಲಿವೆ. ಅಭಿಮಾನಿಗಳು ಈ ಪ್ಲಾಟ್‌ಫಾರ್ಮ್‌ಗಳಿಗೆ ಭೇಟಿ ನೀಡಿ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಬಹುದು. ಆರ್‌ಸಿಬಿ ಅಧಿಕೃತ ವೆಬ್‌ ಸೈಟ್‌ shop.royalchallengers.com ಅಥವಾ ಅಧಿಕೃತ RCB App ಮೂಲಕವೇ ಖರೀದಿಸಿ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಮೂರನೇ ವ್ಯಕ್ತಿಯಿಂದ ಟಿಕೆಟ್‌ ಖರೀದಿಸಲು ಹೋಗಿ ವಂಚನೆಗೆ ಸಿಲುಕಬೇಡಿ ಎಂದು ಆರ್‌ಸಿಬಿ ಫ್ರಾಂಚೈಸಿ ಹಾಗೂ ಪೊಲೀಸರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಟಿಕೆಟ್ ಖರೀದಿ, ಪಾರ್ಕಿಂಗ್ ಕಾಯ್ದಿರಿಸುವ ವಿಧಾನಗಳು

  • ಅಧಿಕೃತ ಆರ್‌ಸಿಬಿ ಟಿಕೆಟ್‌ಗಳನ್ನು ಆರ್‌ಸಿಬಿ ಅಧಿಕೃತ ಆ್ಯಪ್ ಮತ್ತು ವೆಬ್‌ಸೈಟ್ (shop.royalchallengers.com) ಮೂಲಕ ಮಾರಾಟ ಮಾಡಲಾಗುತ್ತದೆ.
  • ಟಿಕೆಟ್ ಮಾರಾಟದ ಸಮಯದಲ್ಲಿ ಉಂಟಾಗುವ ವಿಪರೀತ ದಟ್ಟಣೆಯನ್ನು ತಪ್ಪಿಸಲು ಮತ್ತು ಸಮಯ ಉಳಿಸಲು, ಮಾರಾಟದ ದಿನಾಂಕಕ್ಕಿಂತ ಮುಂಚಿತವಾಗಿಯೇ ಆರ್‌ಸಿಬಿ ಆ್ಯಪ್ ಅಥವಾ ಟಿಕೆಟಿಂಗ್ ಪಾಲುದಾರರ ವೆಬ್‌ಸೈಟ್‌ನಲ್ಲಿ ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಿ.
  • ಐಪಿಎಲ್ 2026ರ ವೇಳಾಪಟ್ಟಿ ವಿಭಾಗಕ್ಕೆ ಹೋಗಿ ಮತ್ತು ನೀವು ವೀಕ್ಷಿಸಲು ಬಯಸುವ ನಿರ್ದಿಷ್ಟ ತವರು ಪಂದ್ಯದ ಮೇಲೆ ಕ್ಲಿಕ್ ಮಾಡಿ.
  • ಕ್ರೀಡಾಂಗಣದ ನಕ್ಷೆಯು ಅಲ್ಲಿ ಕಾಣಿಸಲಿದ್ದು, ಅಲ್ಲಿ ನಿಮಿಷ್ಟದ ಸ್ಟ್ಯಾಂಡ್ ಮತ್ತು ಸೀಟುಗಳ ಸಂಖ್ಯೆಯನ್ನು ಆಯ್ಕೆ ಮಾಡಿ.
  • ಒಂದು ವೇಳೆ ನೀವು ವಾಹನದಲ್ಲಿ ಬರುತ್ತಿದ್ದರೆ, ಟಿಕೆಟ್ ಬುಕ್ ಮಾಡುವಾಗಲೇ ಪಾರ್ಕಿಂಗ್ ಸ್ಥಳವನ್ನು ಸಹ ಮುಂಗಡವಾಗಿ ಕಾಯ್ದಿರಿಸಬಹುದು.
  • ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಹಣ ಪಾವತಿ ಮಾಡಬಹುದು.

ಅಗತ್ಯವಿದ್ದಲ್ಲಿ ಪಾರ್ಕಿಂಗ್ ಮುಂಗಡವಾಗಿ ಕಾಯ್ದಿರಿಸಿ: ಗರುಡ ಮಾಲ್, ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಮತ್ತು ಫ್ರೀಡಂ ಪಾರ್ಕ್ ಸೇರಿದಂತೆ ಅನುಮೋದಿತ ವಲಯಗಳಲ್ಲಿ ಸೀಮಿತ ಪಾರ್ಕಿಂಗ್ ಸ್ಥಳಗಳು ಲಭ್ಯವಿವೆ.

ಪಾರ್ಕಿಂಗ್ ಸ್ಥಳಗಳು, ಸ್ಟೇಡಿಯಂ ಪ್ರವೇಶದ ನಿಯಮಗಳು

  • ಗರುಡ ಮಾಲ್
  • ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ (St. Joseph’s Indian High School)
  • ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ (St. Joseph’s Boys High School)
  • ಫ್ರೀಡಂ ಪಾರ್ಕ್ (Freedom Park)
  • ಸ್ಟೇಡಿಯಂ ಪ್ರವೇಶಕ್ಕಾಗಿ ನಿಮ್ಮ ಇ-ಟಿಕೆಟ್‌ನಲ್ಲಿರುವ ಕ್ಯೂಆರ್ (QR) ಕೋಡ್ ಅನ್ನು ಬಳಸಬೇಕು.

ಇನ್ನೂ ಮೇಲೆ ನೀಡಲಾಗಿರುವ ಪಾರ್ಕಿಂಗ್ ಸ್ಥಳಗಳಿಂದ ಕಬ್ಬನ್ ರಸ್ತೆಯವರೆಗೆ ಪಿಕ್-ಅಪ್ ಮತ್ತು ಡ್ರಾಪ್ ಶಟಲ್ ಬಸ್‌ ಸೇವೆಗಳು ಲಭ್ಯವಿರುತ್ತವೆ. ಜೊತೆಗೆ ಮೆಟ್ರೋ ನಿಲ್ದಾಣಗಳಲ್ಲಿ ನಿಮ್ಮ ಟಿಕೆಟ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಂದು ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.

Leave a Reply

Your email address will not be published. Required fields are marked *