Greater Bengaluru News9 : ರಾಜಧಾನಿ ಬೆಂಗಳೂರಲ್ಲಿ ಕನಿಷ್ಟ ಅಂದ್ರೂ 1 ಕೋಟಿಗೂ ಅಧಿಕ ವಾಹನಗಳಿವೆ. ಈ ಪೈಕಿ ಸಾವಿರಾರು ವಾಹನಗಳು ನಗರದ ಬೀದಿಗಳಲ್ಲಿ ನಿಂತಲ್ಲೇ ನಿಂತಿವೆ. ಇದರ ಮಾಲೀಕರು ಯಾರು? ಯಾಕೆ ಹೀಗೆ ನಿಲ್ಲಿಸಿದ್ದಾರೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಸಾರ್ವಜನಿಕ ರಸ್ತೆಗಳು ಒತ್ತುವರಿ (Public Roads) ಆಗಿವೆ. ಅಲ್ದೇ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಅನಾನುಕೂಲ ಉಂಟಾಗ್ತಿದೆ. ಈ ಸಮಸ್ಯೆ ಬಗೆಹರಿಸೋದಕ್ಕೆ ಗ್ರೇಟರ್ ಬೆಂಗಳೂರು ಸಜ್ಜಾಗಿದೆ. ರಸ್ತೆಬದಿ ನಿಲ್ಲಿಸಿದ ಅನುಪಯುಕ್ತ ವಾಹನಗಳನ್ನ ಸೀಜ್ ಮಾಡಿ ವಿಲೇವಾರಿ ಮಾಡಲು ಮುಂದಾಗಿದೆ.
ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ಹುಷಾರ್
ಯಾರು ಸರಿಯಾಗಿ ಪಾರ್ಕಿಂಗ್ ಮಾಡೋದಿಲ್ಲ ಹಾಗೂ ಬೇರೆ ಬೇರೆ ಜಾಗಗಳಲ್ಲಿ ಯಾವೆಲ್ಲಾ ವಾಹನಗಳನ್ನು ಸ್ಟೋರ್ ಮಾಡಿದ್ದಾರೆ. ಅನುಪಯುಕ್ತವಾಗಿ ನಿಂತಿರವ ವಾಹನಗಳನ್ನು ನಾವು ತೆರವು ಮಾಡುತ್ತೇವೆ, ಈ ಕಾರ್ಯ ತಿಂಗಳಿನಲ್ಲಿ ಅಂತ್ಯವಾಗಲಿದೆ ಎಂದು ಜಿಬಿಎ ಚೀಫ್ ಕಮಿಷನರ್ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಗರದ ಪ್ರಮುಖ ರಸ್ತೆಗಳು ಹಾಗೂ ರೆಸಿಡೆನ್ಶಿಯಲ್ ಏರಿಯಾದ ರಸ್ತೆಗಳಲ್ಲಿ ಮನೆ ಮುಂದೆ ವಾಹನಗಳನ್ನ ನಿಂತಲ್ಲೇ ನಿಲ್ಲಿಸಲಾಗಿದೆ. ಇಂತಹ ವಾಹನಗಳನ್ನೇ ಜಿಬಿಎ ಟಾರ್ಗೆಟ್ ಮಾಡಿದೆ. ನಗರ ಸಂಚಾರಿ ಪೊಲೀಸರ ಸಹಯೋಗದಲ್ಲಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಜಿಬಿಎ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ನಗರದ ಕೇಂದ್ರ ಭಾಗ ಒಂದರಲ್ಲೇ ಬರೋಬ್ಬರಿ 10 ಸಾವಿರಕ್ಕೂ ಅಧಿಕ ವಾಹನಗಳನ್ನ ಸೀಜ್ ಮಾಡಲು ಗುರುತಿಸಲಾಗಿದೆ. ಸಂಚಾರಿ ಪೊಲೀಸರೊಂದಿಗೆ ಟೋಯಿಂಗ್ ಮಾಡಿ ಹರಾಜು ಅಥವಾ ಸ್ಕ್ರ್ಯಾಪ್ಗೆ ಹಾಕಲು ಜಿಬಿಎ ತೀರ್ಮಾನಿಸಿದೆ. ಚಾಲನೆಗೆ ಯೋಗ್ಯವಾಗಿರುವ ಕಾರು, ಬೈಕ್ಗಳನ್ನ ಹರಾಜಿಗೆ ಹಾಗೂ ಅನುಪಯುಕ್ತ ವಾಹನಗಳನ್ನು ಗುಜುರಿಗೆ ಹಾಕುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ರಸ್ತೆಗಳನ್ನೇ ಪಾರ್ಕಿಂಗ್ ಏರಿಯಾ ಮಾಡಿಕೊಂಡವರಿಗೆ ನಿದ್ದೆಗೆಡಿಸುವಂತಾಗಿದೆ.


