ಬೆಂಗಳೂರು: ಬೆಂಗಳೂರು ನಗರದಾದ್ಯಂತ ಇರುವ ಗುಂಡಿಗಳನ್ನು ಗುರುತಿಸಲು ಮತ್ತು ನಿಗದಿತ ಕಾಲಮಿತಿಯೊಳಗೆ ಸರಿಪಡಿಸಲು ಪೂರಕವಾಗುವಂತೆ ಬಿಬಿಎಂಪಿಯು ರಸ್ತೆ ಗುಂಡಿ ಗಮನ (Fix Pothole) ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ರಸ್ತೆಗುಂಡಿ ಇರುವ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವಂತೆ ಆ್ಯಪ್ ರೂಪಿಸಲಾಗಿದೆ. ಜೊತೆಗೆ ಗುಂಡಿ ಮುಚ್ಚುವ ಕಾಮಗಾರಿ ಪ್ರಗತಿಯ ಹಂತವನ್ನೂ ಆ್ಯಪ್ ಮೂಲಕ ವೀಕ್ಷಿಸಬಹುದಾಗಿದೆ. ಬಿಬಿಎಂಪಿ ಸಿಬ್ಬಂದಿ, ಸಂಚಾರ ಪೊಲೀಸರು ಜೊತೆಗೆ ಸಾರ್ವಜನಿಕರೂ ಸಹ ಗುಂಡಿಗಳ ಬಗ್ಗೆ ವರದಿ ಮಾಡಬಹುದಾಗಿದೆ.

ಗ್ರೇಟರ್ ಬೆಂಗಳೂರು ರಚನೆ ಬಿಟ್ಟು ಬಿಬಿಎಂಪಿ ಚುನಾವಣೆ ನಡೆಸುವಂತೆ ಸಿಎಂಗೆ ಪತ್ರ


