BBMP
Loading ...

KEBEA

Greater Bengaluru News9 : ಶನಿವಾರ (ನ.29) ನಡೆದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ( KEBEA ) ಚುನಾವಣೆಯಲ್ಲಿ ಇಂಜಿನಿಯರ್​ ಬಸವಣ್ಣ. ಸಿ ಮತ್ತು ಅವರ ತಂಡ ಭರ್ಜರಿ ಜಯಭೇರಿ ಬಾರಿಸಿತು. ಬಸವಣ್ಣನವರ ಆರ್ಭಟ ಎಷ್ಟಿತ್ತೆಂದರೆ ಎದುರಾಳಿ ತಂಡದವರು ಅಕ್ಷರಶಃ ಧೂಳಿಪಟವಾದರು. ಒಂದಲ್ಲ ಎರಡಲ್ಲ ಸಾವಿರಾರು ಮತಗಳ ಅಂತರದಿಂದ ಭರ್ಜರಿ ಗೆಲುವಿನೊಂದಿಗೆ ಬಸವಣ್ಣ ಅವರು ಅಧ್ಯಕ್ಷ ಸ್ಥಾನಕ್ಕೇರಿದರು. ಇನ್ನೇನಿದ್ದರು KEBEA ಅಲ್ಲಿ ಬಸವಣ್ಣರ ಯುಗ ಆರಂಭವಾಗಿದೆ.

ನಗರದ ರೇಸ್ ಕೋರ್ಸ್ ಅಡ್ಡ ರಸ್ತೆಯಲ್ಲಿರುವ ಸಿಲ್ವರ್ ಜುಬಿಲಿ ಬಿಲ್ಡಿಂಗ್. ನಂ. 28ರಲ್ಲಿ ನಿನ್ನೆ ಚುನಾವಣೆ ನಡೆಯಿತು. ಬಸವಣ್ಣ ಅವರ ದೂರದೃಷ್ಟಿ, ಜವಾಬ್ದಾರಿತನ, ನವೀನತೆ, ಧೈರ್ಯ, ಸಂವಹನ ಕೌಶಲ್ಯ, ಪ್ರೇರಣೆ, ಸಹಾನುಭೂತಿ ಹಾಗೂ ನಿರ್ಧಾರದ ಸಾಮರ್ಥ್ಯವನ್ನು ಬಹುತೇಕ ಮಂದಿ ಮೆಚ್ಚಿಕೊಂಡಿದ್ದು, ಅದರ ಫಲ ಚುನಾವಣೆಯ ಫಲಿತಾಂಶದಲ್ಲಿ ಎದ್ದು ಕಾಣುತ್ತಿದೆ.

ಜನನಾಯಕನಿಗೆ ಸೋಲಿಲ್ಲ ಎಂಬುದನ್ನು ಬಸವಣ್ಣನವರು ಸಾಬೀತು ಮಾಡಿದ್ದಾರೆ. ಭರ್ಜರಿ ಮತಗಳೊಂದಿಗೆ ಗೆಲ್ಲಿಸುವ ಮೂಲಕ ಮತದಾರರು ಹಾಗೂ ಸಹೋದ್ಯೋಗಿಗಳು ಅವರ ತಂಡದ ಕೈಹಿಡಿದಿದ್ದಾರೆ.

ಅಂದಹಾಗೆ, ಅಧ್ಯಕ್ಷ ಸ್ಥಾನಕ್ಕೆ ಬಸವಣ್ಣ ಅವರು ಸ್ಪರ್ಧೆ ಮಾಡಿದ್ದರು. ಎದುರಾಳಿ ಎದುರು 2310 ಮತಗಳನ್ನು ಪಡೆಯುವ ಮೂಲಕ ಸುಲಭ ಜಯ ಸಾಧಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಚೇತನ್​ ಎಸ್​. ಎಂಬುವರು ಕೇವಲ 217 ಮತಗಳು, ಶ್ರೀರಾಮು ವಿ ಎಂಬುವರು 975 ಮತಗಳು ಹಾಗೂ ಸುಧಾಕರ್​ ರೆಡ್ಡಿ ಟಿ.ಎನ್​. ಎಂಬುವರು 463 ಮತಗಳನ್ನು ಗಳಿಸಿದರೆ, ಬಸವಣ್ಣ ಅವರು ಬರೋಬ್ಬರಿ 2307 ಮತಗಳನ್ನು ಗಳಿಸಿ ಅಧ್ಯಕ್ಷ ಪಟ್ಟಕ್ಕೇರಿದರು.

ಸಂಘದ ಸೂಪರ್​ ಇಂಟೆಂಡಿಂಗ್​ ಇಂಜಿನಿಯರ್​ ಕೇಡರ್,​ ಸಂಘದ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಕೇಡರ್​, ಅಸಿಸ್ಟೆಂಟ್​ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಕೇಡರ್​ ಹಾಗೂ ಅಸಿಸ್ಟೆಂಟ್​ ಇಂಜಿನಿಯರ್​ ಕೇಡರ್​ ಸೇರಿದಂತೆ ಎಲ್ಲ ವಿಭಾಗದಲ್ಲೂ ಬಸವಣ್ಣ ಅವರ ತಂಡ ಎದುರಾಳಿಗಳನ್ನು ಧೂಳಿಪಟ ಮಾಡಿತು. ಅದ್ಧೂರಿ ಗೆಲುವಿನ ಬೆನ್ನಲ್ಲೇ ಬಸವಣ್ಣ ಮತ್ತು ಅವರ ತಂಡ ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ ಖುಷಿಪಟ್ಟರು. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಬಸವಣ್ಣ ಮತ್ತು ಅವರ ತಂಡದ ಗೆಲುವಿಗೆ ಕೆಇಬಿಇಎ ಅಧಿಕಾರಿಗಳು, ಹಿತೈಶಿಗಳು, ಸಂಘದ ಎಲ್ಲ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ ರಮೇಶ್​ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇನ್ನು ಬಿಬಿಎಂಪಿ ನ್ಯೂಸ್​9 ವತಿಯಿಂದ ಹಾಗೂ ಬಿಬಿಎಂಪಿ ನ್ಯೂಸ್​9 ಸಂಪಾದಕರು ಹಾಗೂ ವಿದ್ಯುತ್​ ಗುತ್ತಿಗೆದಾರರ ಸಂಘದ ಹೋರಾಟ ಸಮಿತಿಯ ಚೇರ್ಮನ್​ ವೈ.ಎಚ್​. ಆನಂದ್​ ಅವರು ಕೂಡ ಬಸವಣ್ಣ ಮತ್ತು ಅವರ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *