BBMP
Loading ...

Auto Drivers

ಬೆಂಗಳೂರು, ಮೇ 1: ಬೆಂಗಳೂರು ನಗರದಲ್ಲಿ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿತ್ತು. ಇದೀಗ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಆಟೋ ಚಾಲಕರ ಮನವಿಯನ್ನು ಪುರಸ್ಕರಿಸಿ, ಆಟೋ ದರ ಏರಿಕೆ ಮಾಡಲು ಮನಸ್ಸು ಮಾಡಿದೆ. ಅಧಿಕೃತ ಆದೇಶ ಹೊರಬೀಳುವುದಷ್ಟೇ ಬಾಕಿ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಅನೇಕ ಅಗತ್ಯ ವಸ್ತುಗಳ ದರ ಏರಿಕೆ ಆಗಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡಲು ಜಿಲ್ಲಾಧಿಕಾರಿ ಕೂಡಲೇ ಗ್ರೀನ್ ಸಿಗ್ನಲ್ ನೀಡಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.

ಈಗೆಷ್ಟಿದೆ ಆಟೋ ಪ್ರಯಾಣ ದರ?
ಸದ್ಯ ಬೆಂಗಳೂರಿನಲ್ಲಿ ಕನಿಷ್ಠ ದರ 30 ರೂಪಾಯಿ ಹಾಗೂ ನಂತರ ಪ್ರತಿ ಕಿಲೋ ಮೀಟರ್ ಗೆ 15 ರೂಪಾಯಿ ದರ ಇದೆ. ಇದೀಗ ಪರಿಷ್ಕೃತ ದರ ಪಟ್ಟಿ ಪ್ರಕಾರ ಕನಿಷ್ಠ ದರ 30 ರಿಂದ 35 ರೂಪಾಯಿಗೆ, ಅಂದರೆ ಐದು ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ. ನಂತರದ ಪ್ರತಿ ಕಿಲೋ ಮೀಟರ್​ ದರ 15 ರಿಂದ 18 ರೂಪಾಯಿಗೆ, ಅಂದರೆ ಮೂರು ರೂಪಾಯಿ ಏರಿಕೆ ಆಗಲಿದೆ.

ಮಾರ್ಚ್ 12ರಂದು ದರ ಏರಿಕೆ ಸಂಬಂಧ ನಡೆದಿದ್ದ ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಸಭೆಯಲ್ಲಿ, ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು.ಇದೀಗ ವರದಿ ಪರಿಶೀಲಿಸಿ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಎಂಟಿಸಿ,ನಮ್ಮ ಮೆಟ್ರೋ ಸೇರಿದಂತೆ ಎಲ್ಲಾ ಸಾರಿಗೆಗಳ ದರ‌ ಏರಿಕೆ ಆಗಿದೆ. ಆಟೋ ಮೀಟರ್ ದರ ಏರಿಕೆಗೆ ಅನುಮತಿ ನೀಡಲಿ. ಆಟೋ ಚಾಲಕರಿಗೂ ಜೀವನ ಮಾಡಬೇಕಲ್ಲವೇ ಎಂದು ಪ್ರಯಾಣಿಕ ರಾಜಶೇಖರ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಈಗಾಗಲೇ ದರ ಏರಿಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಎಲ್ಲಾ ಆಟೋ ಚಾಲಕ ಸಂಘಟನೆಗಳು ದರ ಏರಿಕೆಗೆ ಒಪ್ಪಿಗೆ ಸೂಚಿಸಿವೆ. ಮೇ 13 ರಂದು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್: ಬಿಯರ್ 20ರೂ. ಹೆಚ್ಚಳಕ್ಕೆ ನಿರ್ಧಾರ!

Leave a Reply

Your email address will not be published. Required fields are marked *